ರೋಶನ್ ಬೇಗ್ ಹೇಳಿಕೆ ಅಹಂಕಾರದ ಪರಮಾವಧಿ : ನಳಿನ್‍ಕುಮಾರ್ ಕಟೀಲ್
ಮಂಗಳೂರು : ವಿಶ್ವಮಾನ್ಯ ನಾಯಕರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ರಾಜ್ಯದ ಸಚಿವ ರೋಶನ್ ಬೇಗ್ ಕೀಳಾಗಿ ಮಾತನಾಡಿರುವುದು ಕಾಂಗ್ರೆಸ್‍ನ ಅಹಂಕಾರದ ಪರಮಾವಧಿಯಾಗಿದೆ. ಇದು ಅತ್ಯಂತ ನೀಚ ಹೇಳಿಕೆಯಾಗಿದ್ದು ಕಾಂಗ್ರೆಸ್ ಸಂಸ್ಕøತಿಯನ್ನು ತೋರ್ಪಡಿಸಿದೆ ಎಂದು ದ.ಕ.ಸಂಸದ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.
ನರೇಂದ್ರ ಮೋದಿ ಅವರು ದೇಶದ ಸಮಸ್ತ ಜನತೆಯ ಪ್ರಧಾನಿ. ಅವರ ವಿರುದ್ದ ಅವಾಚ್ಯ ಶಬ್ದ ಬಳಕೆ ಮಾಡಿರುವುದು ರಾಷ್ಟ್ರದ್ರೋಹಕ್ಕೆ ಸಮಾನದ ಕೃತ್ಯ. ದೇಶದ ಪ್ರಜ್ಞಾವಂತ ಜನತೆ ಇದನ್ನು ಸಹಿಸಲು ಸಾಧ್ಯವೇ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗುತ್ತಿದೆ. ಸಚಿವ ಬೇಗ್ ಅವರ ಕೀಳು ಮಟ್ಟದ ಹೇಳಿಕೆ ಕಾಂಗ್ರೆಸ್ ಪತನಕ್ಕೆ ಮತ್ತಷ್ಟು ಸಹಕಾರಿಯಾಗಿದೆ. ರಾಷ್ಟ್ರದ್ರೋಹಿಗಳನ್ನು, ಹಿಂದೂ ವಿರೋಧಿಗಳನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್‍ಗೆ ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.