Home Mangalorean News Kannada News ಲಂಚ ಪಡೆಯುತ್ತಿದ್ದ ಆರೋಪ: ಎಸಿಬಿ ದಾಳಿ; ಕಂದಾಯ ಅಧಿಕಾರಿ ಸೆರೆ

ಲಂಚ ಪಡೆಯುತ್ತಿದ್ದ ಆರೋಪ: ಎಸಿಬಿ ದಾಳಿ; ಕಂದಾಯ ಅಧಿಕಾರಿ ಸೆರೆ

Spread the love

ಲಂಚ ಪಡೆಯುತ್ತಿದ್ದ ಆರೋಪ: ಎಸಿಬಿ ದಾಳಿ; ಕಂದಾಯ ಅಧಿಕಾರಿ ಸೆರೆ

ಮಂಗಳೂರು: ಮೂಲ ದಾಖಲೆ ಹಿಂದಿರುಗಿಸಲು ಮತ್ತು ನಿರಕ್ಷೇಪಣಾ ಪತ್ರವನ್ನು ನೀಡಲು 10 ಸಾವಿರ ರೂ. ಲಂಚದ ಬೇಡಿಕೆಯಿಟ್ಟ ಆರೋಪದ ಮೇಲೆ ಕರ್ನಾಟಕ ಗೃಹ ಮಂಡಳಿ ಸಹಾಯಕ ಕಂದಾಯ ಅಧಿಕಾರಿಯೊಬ್ಬನನ್ನು ದ.ಕ. ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದ್ದು, ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.

ಸಹಾಯಕ ಕಂದಾಯ ಅಧಿಕಾರಿ ಶ್ರೀನಿವಾಸ ಶೆಟ್ಟಿ (52) ಬಂಧಿತ ಆರೋಪಿ.

ಮಂಗಳೂರು ತಾಲೂಕಿನ ಬಜ್ಪೆ ನಿವಾಸಿ ಗಂಗಾಧರ ಕೆ. ಎಂಬವರು ಕರ್ನಾಟಕ ಗೃಹ ಮಂಡಳಿಯಲ್ಲಿ ಪಡೆದಿದ್ದ 9,500 ರೂ. ಸಾಲ ಮರುಪಾವತಿಯಾದ ಬಳಿಕ ನೀಡಿದ ಮೂಲ ದಾಖಲೆಯನ್ನು ಹಿಂದಿರುಗಿಸಲು ಮತ್ತು ನಿರಕ್ಷೇಪಣಾ ಪತ್ರವನ್ನು ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ಗೃಹ ಮಂಡಳಿಯ ಕಾರ್ಯಪಾಲಕ ಅಭಿಯಂತರ ವಿಜಯ ಕುಮಾರ್ ಮತ್ತು ಸಹಾಯಕ ಕಂದಾಯ ಅಧಿಕಾರಿ ಶ್ರೀನಿವಾಸ ಶೆಟ್ಟಿ 20ಸಾವಿರ ರೂ. ಲಂಚದ ಹಣ ಬೇಡಿಕೆಯಿಟ್ಟಿದ್ದರು. ಈ ನಡುವೆ ಅಧಿಕಾರಿಗಳು ಮಾತುಕತೆ ನಡೆಸಿ 12ಸಾವಿರಕ್ಕೆ ಒಪ್ಪಿಕೊಂಡು ಸ್ಥಳದಲ್ಲೇ 2 ಸಾವಿರ ರೂ. ಹಣ ಪಡೆದಿದ್ದಾರೆ. ಬಾಕಿ ಉಳಿದ 10 ಸಾವಿರ ರೂ. ನಾಳೆ ನೀಡುವುದಾಗಿ ಹೇಳಿದ್ದು, ಗಂಗಾಧರ್ ಅವರು ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ ಕಚೇರಿಗೆ ದೂರು ನೀಡಿದ್ದಾರೆ.

ಶುಕ್ರವಾರ ಸಂಜೆ ಪಿರ್ಯಾದಿದಾರರು ಕಾವೂರಿನಲ್ಲಿರುವ ಕರ್ನಾಟಕ ಗೃಹ ಮಂಡಳಿ ನಿಗಮದ ಕಚೇರಿಗೆ ಲಂಚದ ಹಣ ಹಿಡಿದುಕೊಂಡು ಹೋದಾಗ ವಿಜಯ ಕುಮಾರ್ ಕಚೇರಿಯಲ್ಲಿರಲಿಲ್ಲ. ಈ ಸಂದರ್ಭ ಸಹಾಯಕ ಕಂದಾಯ ಅಧಿಕಾರಿ ಶ್ರೀನಿವಾಸ ಶೆಟ್ಟಿ ಲಂಚ ಹಣ ಸ್ವೀಕರಿಸಿದ್ದು, ಕೂಡಲೇ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಯಿಂದ ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ. ಸಹಾಯಕ ಕಂದಾಯ ಅಧಿಕಾರಿ ಶ್ರೀನಿವಾಸ್ ಟೇಬಲ್ ಡ್ರಾವರಿನಲ್ಲಿ ಹೆಚ್ಚುವರಿ 3,000 ರೂ. ಪತ್ತೆಯಾಗಿದ್ದು ಅದನ್ನು ಎಸಿಬಿ ಅಧಿಕಾರಿಗಳು ಮಹಜರು ಮಾಡಿ ವಶಪಡಿಸಿ ಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ದಾಳಿಯ ಬಗ್ಗೆ ಮಾಹಿತಿ ಪಡೆದ ವಿಜಯಕುಮಾರ್ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಎಸ್ಪಿ ಶ್ರುತಿ ಎನ್.ಎಸ್., ಡಿವೈಎಸ್ಪಿ ಸುಧೀರ್ ಎಂ. ಹೆಗ್ಡೆ, ಇನ್‌ಸ್ಪೆಕ್ಟರ್ ಯೋಗೀಶ್‌ಕುಮಾರ್, ಸಿಬ್ಬಂದಿ ಹರಿಪ್ರಸಾದ್, ಉಮೇಶ್, ರಾಧಾಕೃಷ್ಣ, ಕೆ., ರಾಧಾಕೃಷ್ಣ, ಪ್ರಶಾಂತ್, ವೈಶಾಲಿ, ರಾಕೇಶ್ ವಾಗ್ಮನ್, ಗಣೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


Spread the love

Exit mobile version