ಲಾಕ್ ಡೌನ್ ಅವಧಿಯಲ್ಲಿ ತುಳು ಅಕಾಡೆಮಿ ಸಿಬ್ಬಂದಿಗಳ ವಜಾಕ್ಕೆ ಯತ್ನ : ಜಿಲ್ಲಾಧಿಕಾರಿ ಗೆ ದೂರು
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಸೇವೆಯಲ್ಲಿರುವ ನೌಕರರನ್ನು ಕೊವೀಡ್ -19 ಲಾಕ್ ಡೌನ್ ಅವಧಿಯಲ್ಲಿ ಕೆಲಸದಿಂದ ವಜಾ ಮಾಡಲು ಪ್ರಯತ್ನಿಸಿ ಮಾನಸಿಕ ಕಿರುಕುಳ ನೀಡಿರುವ ಬಗ್ಗೆ ತುಳು ಪರಿಷತ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಕಳೆದೆರಡು ವರ್ಷಗಳಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ಗ್ರಂಥ ಪಾಲಕಿಯಾಗಿ ಸೇವೆ ಸಲ್ಲಿಸುತ್ತಿರುವ ಚಿತ್ರಾಕ್ಷಿ ಮತ್ತು ಕಳೆದ 9 ವರ್ಷಗಳಿಂದ ತುಳು ಅಕಾಡೆಮಿಯ ಕಚೇರಿ ಹಾಗೂ ಗ್ರಂಥಲಯ ಸಹಾಯಕರಾದಿ ಸೇವೆ ಸಲ್ಲಿಸುತ್ತಿರುವ ಪ್ರಶಾಂತ್ ಅವರನ್ನು ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ಕೆಲಸಕ್ಕೆ ಗೈರು ಹಾಜರಾಗಿದ್ದಾಎ ಂಬ ಕಾರಣ ನೀಡಿ ನಿಮಗೆ ಕೆಲಸ ಇಲ್ಲ ಬೇಕಿದ್ದಾಗ ಕರೆಯುತ್ತೇವೆ ಎಂದು ಹೇಳಿ ಗ್ರಂಥಾಲಯಕ್ಕೆ ಬೀಗ ಹಾಕಿ ಯಾವುದೇ ಪರ್ಯಾಯ ಕಚೇರಿ ಕೆಲಸದ ನಿರ್ದೇಶನ ನೀಡದೆ ಅಕಾಡೆಮಿಯ ಅಧ್ಯಕ್ಷರು ಗ್ರಂಥಾಲಯದ ಹೊರಗೆ ನಿಲ್ಲಿಸಿದ್ದಾರೆ.
ಚಿತ್ರಾಕ್ಷಿಯವರು ಅಕಾಡೆಮಿ ಕಚೇರಿಯಿಂದ ಸುಮಾರು 17 ಕಿಮ ದೂರದ ಕುತ್ತಾರ್ ನಿಂದ ಆಗಮಿಸಬೇಖಿದ್ದು, ಪ್ರಶಾಂತ್ ಅವರು ಪುತ್ತೂರಿನಿಂದ ಆಗಮಿಸಬೇಕು. ಇವರಿಬ್ಬರೂ ಬಸ್ ಇಲ್ಲದೆ ಇರುವುದರಿಂದ ಗೈರು ಹಾಜರಾಗುತ್ತಿರುವ ಬಗ್ಗೆ ಅಕಾಡೆಮಿ ಅಧ್ಯಕ್ಷರಿಗೆ ಮತ್ತು ರಿಜಿಸ್ಟ್ರಾರ್ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಮೇ11 ರಂದು ಕೆಲಸಕ್ಕೆ ಹಾಜರಾಗಿದ್ದು, 12 ನೇ ತಾರೀಕಿನಿಂದ ಕೆಲಸಕ್ಕೆ ಹಾಜರಾದ ಗ್ರಂಥಾಲಯಕ್ಕೆ ಬೀಗ ಜಡಿದು ನೀವು ಕೆಲಸಕ್ಕೆ ಬರುವುದು ಅವಶ್ಯವಿಲ್ಲವೆಂದು ಈ ಸಿಬಂದಿಗಳಿಗೆ ಹೇಳಿದ್ದಾರೆ ಎಂಬುದಾಗಿ ಇಬರಿಬ್ಬರೂ ತಿಳಿಸಿರುತ್ತಾರೆ. ಮಾತ್ರವಲ್ಲದೆ ಅದೇ ದಿನ ಗ್ರಂಥಾಲಯ ಮುಚ್ಚಲಾಗಿದೆ ಎಂದು ನೋಟಿಸ್ ಹಚ್ಚಿದ್ದಾರೆ ಆದರೆ ನೌಕರಿಬ್ಬರೂ ಅಕಾಡೆಮಿಯಲ್ಲಿಯೇ ಸಂಜೆ ತನಕ ಇದ್ದು ಸಂಜೆ ತಮ್ಮ ಮನೆಗೆ ತೆರಳಿದರೂ ಅಧ್ಯಕ್ಷರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಅಲ್ಲದೆ ಎರಡನೇ ದಿನವೂ ಕೂಡ ಇದೇ ರೀತಿ ಮುಂದುವರೆದಿದೆ.
ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ತುರ್ತು ಕೆಲಸ ಇಲ್ಲದೆ ಇರುವ ಇಲಾಖೆಯೊಂದರ ವ್ಯಾಪ್ತಿಯ ಕಚೇರಿಯಲ್ಲಿ ಈ ರೀತಿ ನಡೆದಿರುವುದನ್ನು ತುಳು ಪರಿಷತ್ ಖಂಡಿಸಿದ್ದು, ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಇಬ್ಬರೂ ನೌಕರರಿಗೆ ನ್ಯಾಯ ಒದಗಿಸುವಂತೆ ಪರಿಷತ್ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್, ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮನ್ನ, ಖಜಾಂಚಿ ಶುಭೋಧಯ ಆಳ್ವಾ ಹಾಗೂ ಸದಸ್ಯರು ಆಗ್ರಹಿಸಿದ್ದಾರೆ.