ಲಾಕ್ ಡೌನ್ ಮಧ್ಯೆ ಉಡುಪಿಯಲ್ಲಿ ಊಟ ನೀಡಿ ಮಾನವೀಯತೆ ಮೆರೆಯುತ್ತಿದೆ ಸಮಾನ ಮನಸ್ಕರ ತಂಡ
ಉಡುಪಿ: ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸಂಪೂರ್ಣವಾಗಿ ಲಾಕ್ ಡೌನ್ ಆಗಿದೆ. ಜನರಿಗೆ ಕುಡಿವ ನೀರು ಸಹ ಸಿಗುತ್ತಿಲ್ಲ. ಜಿಲ್ಲೆಯಲ್ಲೂ ನಿಧಾನಕ್ಕೆ ಹೊರಗೆ ಬದಿಂದ್ದ ಜನ ಮನೆ ಸೇರಿಕೊಳ್ಳುತ್ತಿದ್ದಾರೆ. ಹೀಗಾಗಿ ಉಡುಪಿ ನಗರ ಸೇರಿದಂತೆ ಇಡೀ ಜಿಲ್ಲೆ ಸ್ತಬ್ಧವಾಗಿದೆ. ಈ ಮಧ್ಯೆ ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ರುಚಿ ಕೂಡ ತೋರಿಸುತ್ತಿದ್ದಾರೆ.
ನಗರದಲ್ಲಿ ಎಲ್ಲಾ ಹೋಟೆಲ್ಗಳು ಬಂದ್ ಆಗಿರುವುದರಿಂದ ಅಸ್ವಸ್ಥ ಭಿಕ್ಷುಕರು, ಬುದ್ಧಿಮಾಂದ್ಯರು, ರಸ್ತೆಬದಿಯಲ್ಲೇ ಮಲಗುವವರಿಗೆ ಊಟ ಸಿಗುತ್ತಿಲ್ಲ. ಹೀಗಾಗಿ ನಗರದ ಕೆಲವರು ಮಾನವೀಯತೆ ಮೆರೆದು ಊಟ, ತಿಂಡಿಯ ಪೊಟ್ಟಣಗಳನ್ನ ನಿರ್ಗತಿಕರಿಗೆ ಹಂಚುತ್ತಿದ್ದಾರೆ.
ಉಡುಪಿಯ ಸಮಾಜ ಸೇವಕ ಅನ್ಸಾರ್ ಅಹ್ಮದ್ ನೇತೃತ್ವದ ಸುಮಾರು 30 ಮಂದಿಯ ಸಮಾನ ಮನಸ್ಕರ ತಂಡ ಪ್ರತಿನಿತ್ಯ ಮಧ್ಯಾಹ್ನ ಹಾಗೂ ಸಂಜೆ ಸುಮಾರು 300 ಕ್ಕೂ ಅಧಿಕ ಮಂದಿಗೆ ಊಟದ ಪಾಕೆಟ್ ಗಳನ್ನು ಭಿಕ್ಷುಕರು, ನಿರ್ಗತಿಕರಿಗೆ ಹಾಗೂ ಊರಿಂದ ಬಂದು ಊಟ ಸಿಗದೆ ಇರುವವರೆಗೆ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಈ ವೇಳೆ ಮ್ಯಾಂಗಲೋರಿಯನ್ ಪ್ರತಿನಿಧಿ ಜೊತೆ ಮಾತನಾಡಿದ ಅನ್ಸಾರ್ ಅಹ್ಮದ್ ದೇಶದ ಕಾನೂನಿಗೆ ಪ್ರತಿಯೊಬ್ಬರು ಗೌರವ ನೀಡಲೇಬೇಕು ಅದರ ಜೊತೆಗೆ ನಿರ್ಗತಿಕರ ಹಾಗೂ ಕಾರ್ಮಿಕರ ಹಸಿವಿಗೆ ಪರಿಹಾರ ಕೂಡ ಅಗತ್ಯವದಿದೆ. ಒಂದು ವ್ಯಕ್ತಿಯ ಹಸಿವನ್ನು ತಣಿಸುವುದು ಮನುಷ್ಯನ ಸತ್ಕರ್ಮಗಳ ಪೈಕಿ ಅತ್ಯುತ್ತಮವಾದ ಪುಣ್ಯದ ಕೆಲಸವಾಗಿದ್ದು ಈ ನಿಟ್ಟಿನಲ್ಲಿ ನಮ್ಮ ಸಮಾನ ಮನಸ್ಕರ ತಂಡ ನಿನ್ನೆಯಿಂದ ಈ ಕಾರ್ಯದಲ್ಲಿ ತೊಡಗಿಕೊಂಡಿದೆ. ಪ್ರತಿ ನಿತ್ಯ ದಾನಿಗಳ ನೆರವಿನಿಂದ ಮಧ್ಯಾಹ್ನ ಮತ್ತು ಸಂಜೆ ಸುಮಾರು 300ಕ್ಕೂ ಅಧಿಕ ಮಂದಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಬೇರೆ ಬೇರೆ ಜಿಲ್ಲೆಗಳಿಂದ ಊಟಕ್ಕೆ ಬೇಡಿಕೆ ಬರುತ್ತಿದೆ ಆದರೆ ನಮ್ಮ ತಂಡ ಉಡುಪಿ, ಕಾಪು, ಪಡುಬಿದ್ರೆ ಕೇಂದ್ರವಾಗಿರಿಸಿಕೊಂಡು ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ದೇಶಕ್ಕೆ ಮತ್ತು ಜನತೆಗೆ ಒದಗಿರುವ ಈ ಅಪಾಯಕಾರಿ ಪರಿಸ್ಥಿತಿ ಆದಷ್ಠು ಬೇಗ ಶಮನವಾಗಲಿ ಎಂದರು.
ಅದೇ ರೀತಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿವಿಧ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಘಟನೆಗಳೂ ಕೂಡ . ಹೀಗಾಗಿ ನಗರದ ಕೆಲವರು ಮಾನವೀಯತೆ ಮೆರೆದು ಊಟ, ತಿಂಡಿಯ ಪೊಟ್ಟಣಗಳನ್ನ ನಿರ್ಗತಿಕರಿಗೆ ಹಂಚುತ್ತಿದ್ದಾರೆ.