Home Mangalorean News Kannada News ಲಾಕ್ ಡೌನ್ ; ವಲಸೆ ಕಾರ್ಮಿಕರಿಗೆ ಉಪಾಹಾರ ಬಡಿಸಿ ಮಾನವೀಯತೆ ಮೆರೆದ ಬೈಂದೂರು ಪಿ ಎಸ್...

ಲಾಕ್ ಡೌನ್ ; ವಲಸೆ ಕಾರ್ಮಿಕರಿಗೆ ಉಪಾಹಾರ ಬಡಿಸಿ ಮಾನವೀಯತೆ ಮೆರೆದ ಬೈಂದೂರು ಪಿ ಎಸ್ ಐ ಸಂಗೀತ

Spread the love

ಲಾಕ್ ಡೌನ್ ; ವಲಸೆ ಕಾರ್ಮಿಕರಿಗೆ ಉಪಾಹಾರ ಬಡಿಸಿ ಮಾನವೀಯತೆ ಮೆರೆದ ಬೈಂದೂರು ಪಿ ಎಸ್ ಐ ಸಂಗೀತ

ಕುಂದಾಪುರ: ಕೊರೊನಾ ನಿಯಂತ್ರಣಕ್ಕಾಗಿ ಕರ್ನಾಟವನ್ನೇ ಲಾಕ್ಡೌನ್ ಮಾಡಲಾಗಿದೆ. ಸಾರ್ವಜನಿಕರು ಬೀದಿಗೆ ಇಳಿದರೆ ಹಲವು ಕಡೆ ಪೊಲೀಸರು ಲಾಠಿ ಏಟು ನೀಡುತ್ತಿದ್ದಾರೆ. ಈ ನಡುವೆ ಸಂಪೂರ್ಣ ಬಂದ್ ವಾತಾವರಣದಿಂದಾಗಿ ತಮ್ಮ ಹುಟ್ಟಿದ ಊರು ಬಿಟ್ಟು ವಲಸೆ ಬಂದ ಕಾರ್ಮಿಕರು ವಾಪಾಸು ತಮ್ಮ ಊರಿಗೆ ತೆರಳಲು ಸಾಧ್ಯವಾಗದೆ, ಊಟಕ್ಕೂ ಗತಿಯಿಲ್ಲದೆ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದ್ದು ಈ ನಡುವೆ ಹಸಿದ ಜನರಿಗೆ ಬೈಂದೂರು ಪಿಎಸ್ ಐ ಸಂಗೀತ ಮತ್ತು ಅವರ ತಂಡ ಆಹಾರ ನೀಡುವ ಮೂಲಕ ಗಮನಸೆಳೆದಿದ್ದಾರೆ.

ಲಾಕ್ ಡೌನ್ ಪರಿಣಾಮ ತಮ್ಮ ಊರುಗಳಿಗೆ ತೆರಳಲು ಸಿದ್ದವಾಗಿದ್ದ ಕೊಪ್ಪಳ, ಬಾಗಲಕೋಟೆ, ಗುಲ್ಬರ್ಗದ ಸುಮಾರು 1200 ಮಂದಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಸಾಧ್ಯವಾಗದೆ ಶಿರೂರು ಗಡಿಯಲ್ಲೇ ಬಾಕಿಯಾಗಿದ್ದು ಊಟವಿಲ್ಲದೆ ಪರದಾಡುತ್ತಿದ್ದ ವೇಳೆ ಬೈಂದೂರು ಠಾಣಾಧಿಕಾರಿ ಸಂಗೀತಾ ದಾನಿಗಳ ಸಹಕಾರದೊಂದಿಗೆ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಿದರು. ಅಲ್ಲದೆ ತಾನೇ ಸ್ವತಃ ಅವರಿಗೆ ಉಪಾಹಾರ ಬಡಿಸುವ ಮೂಲಕ ಮಾನವೀಯತೆ ಮೆರೆದರು.


Spread the love

Exit mobile version