ಲಾಕ್ ಡೌನ್ ಹೊಸ ನಿಯಮ; ಬೈಕಿನಲ್ಲಿ ಒಬ್ಬರು ಮತ್ತು ಕಾರಿನಲ್ಲಿ ಇಬ್ಬರು ಮಾತ್ರ ಪ್ರಯಾಣಿಸಬಹುದು – ಎಸ್ಪಿ ವಿಷ್ಣುವರ್ಧನ್
ಉಡುಪಿ: ಲಾಕ್ ಡೌನ್ ಪ್ರಯುಕ್ತ ಕೇಂದ್ರ ಸರಕಾರದ ಆದೇಶದಂತೆ ಲಾಕ್ ಡೌನ್ ಅವಧಿಯಲ್ಲಿ ತುರ್ತು ಸಂದರ್ಭ ಅಥವಾ ಅನಿವಾರ್ಯ ಸಂದರ್ಭಗಳಲ್ಲಿ ಬೈಕಿನಲ್ಲಿ ಒಬ್ಬರು ಮತ್ತು ಕಾರಿನಲ್ಲಿ ಇಬ್ಬರು ಮಾತ್ರ ಪ್ರಯಾಣಿಸಬಹುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಹೇಳಿದರು.
ಬಳಿಕ ಮಾಧ್ಯಮಗಳಿಗೆ ಮಾತನಾಡಿ ಈ ವರೆಗೆ ರಸ್ತೆಯಲ್ಲಿ ಅನಾವಶ್ಯಕವಾಗಿ ತಿರುಗಾಡವ 500 ಕ್ಕೂ ಅಧಿಕ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇಡೀ ದೇಶದಲ್ಲಿ ಮೇ 3 ರ ವರೆಗೆ ಲಾಕ್ ಡೌನ್ ವಿಸ್ತರಿಸಿದ್ದು ವಾಹನ ಸಂಚಾರದಲ್ಲಿ ಕೂಡ ಕೇಂದ್ರ ಸರಕಾರ ಕೆಲವೊಂದು ನಿಯಮಾವಳಿಗಳನ್ನು ರೂಪಿಸಿದೆ. ಸರ್ಕಾರೇತರ ಅಂದರೆ ಖಾಸಗಿ ವಾಹನಗಳ ಕುರಿತೂ ಒಂದಷ್ಟು ನಿರ್ದೇಶನ ನೀಡಲಾಗಿದ್ದು, ಲಾಕ್ಡೌನ್ ಅವಧಿಯಲ್ಲಿ ಬೈಕ್/ಸ್ಕೂಟರ್ ನಲ್ಲಿ ಇಬ್ಬರು, ಕಾರಿನಲ್ಲಿ ನಾಲ್ಕು ಮಂದಿ ತೆರಳುವಂತಿಲ್ಲ ಎಂದು ಹೇಳಿದೆ.
ನಿಯಮದ ಪ್ರಕಾರ ಬೈಕಿನಲ್ಲಿ ಒಬ್ಬರೇ ತೆರಳಬೇಕು. ಕಾರಿನಲ್ಲಿ ಇಬ್ಬರಿಗೆ ಮಾತ್ರ ಹೋಗಲು ಅನುಮತಿ ನೀಡಲಾಗಿದೆ. ಕಾರಿನಲ್ಲಿ ತೆರಳುವವರು ಡ್ರೈವರ್ ಸೀಟ್ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುವಂತಿಲ್ಲ. ಹಿಂಬದಿಯ ಸೀಟ್ ನಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂದರು.