Home Mangalorean News Kannada News ಲಾಡ್ಜ್ ನಲ್ಲಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಎಂಟು ಜನ ಆರೋಪಿಗಳ ಬಂಧನ

ಲಾಡ್ಜ್ ನಲ್ಲಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಎಂಟು ಜನ ಆರೋಪಿಗಳ ಬಂಧನ

Spread the love

ಲಾಡ್ಜ್ ನಲ್ಲಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಎಂಟು ಜನ ಆರೋಪಿಗಳ ಬಂಧನ

ಮಂಗಳೂರು: ನಗರದ ಬೆಂದೂರ್ ವೆಲ್ ಕುಮಾರ್ ಇಂಟರ್ ನ್ಯಾಶನಲ್ ಲಾಡ್ಜ್ ನಲ್ಲಿ ಜುಗಾರಿ ಆಟ ನಿರತರಾಗಿದ್ದ ಎಂಟು ಜನ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ಆರೋಫಿಗಳ ವಶದಿಂದ ಸುಮಾರು 49,340 ನಗದು, ಬೊಲೆನ ಕಾರು-1, ದ್ವಿ ಚಕ್ರ ವಾಹನ-3 ಹಾಗೂ 10 ಮೊಬೈಲ್ ಪೋನ್ ಹಾಗೂ ಜುಗಾರಿ ಆಟ ಆಡಲು ಉಪಯೋಗಿಸಿದ ವಸ್ತುಗಳನ್ನು ವಶ ಪಡಿಸಿಕೊಂಡಿರುತ್ತಾರೆ.

ಬಂಧಿತರನ್ನು ಬಜಾಲ್ ನಿವಾಸಿ ಪ್ರವೀಣ್ (41), ಪೆರ್ಮನ್ನೂರು ನಿವಾಸಿ ನವೀನ್ (35), ತಲಪಾಡಿ ನಿವಾಸಿ ನವೀನ್ ಆಳ್ವ (39), ಉಳ್ಳಾಲ ನಿವಾಸಿ ಬಶೀರ್ (52), ನೀರು ಮಾರ್ಗ ನಿವಾಸಿ ಸತೀಶ (33), ಬಂಟ್ವಾಳ ನಿವಾಸಿ ವಿಜಯ ಕುಮಾರ್ (38), ಉಳ್ಳಾಲ ನಿವಾಸಿ ಭಾಸ್ಕರ್ (45), ಮರೋಳಿ ನಿವಾಸಿ ಆಕಾಶ್ (31) ಎಂದು ಗುರುತಿಸಲಾಗಿದೆ.

ಸದ್ರಿ ಕಾರ್ಯಚರಣೆಯನ್ನು ಮಾನ್ಯ ಪೊಲೀಸ್ ಆಯುಕ್ತರು ಡಾ. ಹರ್ಷ ಐಪಿಎಸ್ ರವರ ನೇತೃತ್ವದ ಉಪ ಪೊಲೀಸ್ ಆಯುಕ್ತರು ಅರುಣಾಂಶುಗಿರಿ, ಮತ್ತು ಶ್ರೀ ಲಕ್ಷ್ಮಿ ಗಣೇಶ್ ರವರ, ಸಹಾಯಕ ಆಯುಕ್ತರು ಬಾಸ್ಕರ ಒಕ್ಕಲಿಗ ಇವರ ಮಾರ್ಗದರ್ಶನದಲ್ಲಿ ಕದ್ರಿ ಠಾಣೆಯ ಪೊಲೀಸ್ ನಿರೀಕ್ಷಕರಾದ ಶಾಂತರಾಮ, ಪಿಎಸ್ ಐ ಮಾರುತಿ ಎಸ್ ವಿ ಮತ್ತು ಅಧಿಕಾರಿ, ಸಿಬ್ಬಂದಿಯವರುಗಳು ಮಾಡಿರುತ್ತಾರೆ.


Spread the love

Exit mobile version