Home Mangalorean News Kannada News ಲೋಕಾಯುಕ್ತ ನ್ಯಾಯಮೂರ್ತಿಗಳಿಂದ ನ.17ರಂದು ಸಾರ್ವಜನಿಕ ವಿಚಾರಣೆ

ಲೋಕಾಯುಕ್ತ ನ್ಯಾಯಮೂರ್ತಿಗಳಿಂದ ನ.17ರಂದು ಸಾರ್ವಜನಿಕ ವಿಚಾರಣೆ

Spread the love

ಲೋಕಾಯುಕ್ತ ನ್ಯಾಯಮೂರ್ತಿಗಳಿಂದ ನ.17ರಂದು ಸಾರ್ವಜನಿಕ ವಿಚಾರಣೆ

ಮ0ಗಳೂರು : ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ನವೆಂಬರ್ 17ರಂದು ಮಂಗಳೂರಿನ ಪುರಭವನದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆಯನ್ನು ನಡೆಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರಿಗಾದರೂ ಸರ್ಕಾರಿ ಅಧಿಕಾರಿಗಳಿಂದ ತಮಗೆ ಆಗಬೇಕಾದ ಕೆಲಸದಲ್ಲಿ ವಿಳಂಬವೇನಾದರೂ ಆಗಿದ್ದರೆ ಅಥವಾ ಅಧಿಕಾರಿಗಳು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುವುದು ಅಥವಾ ಇನ್ಯಾವುದೇ ತರಹದ ದುರಾಡಳಿತದಲ್ಲಿ ತೊಡಗಿದ್ದರೆ, ಆದರಿಂದ ತೊಂದರೆಗೊಳಗಾದ ಸಾರ್ವಜನಿಕರು ಲೋಕಾಯುಕ್ತ ಸಂಸ್ಥೆಗೆ ದೂರನ್ನು ಇಂದಿನಿಂದ ನವೆಂಬರ್ 16 ರವರೆಗೆ ಮಂಗಳೂರು ನಗರದ ಉರ್ವಾಸ್ಟೋರ್‍ನಲ್ಲಿರುವ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ಅಥವಾ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಲ್ಲಿಸಬಹುದಾಗಿದೆ. ನವೆಂಬರ್ 17 ರಂದು ಪುರಭವನದಲ್ಲಿಯೂ ಖುದ್ದಾಗಿ ಸಲ್ಲಿಸಬಹುದಾಗಿದೆ. ದೂರು ಸಲ್ಲಿಸಿದ ದೂರುದಾರರು ದೂರು ಅರ್ಜಿಯ ವಿಚಾರಣೆಯ ಬಗ್ಗೆ ನವೆಂಬರ್ 17 ರಂದು ಪುರಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ಹಾಜರಿರಬೇಕು, ಅನಾಮಧೇಯ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಜನತೆಯ ಕುಂದು ಕೊರತೆಗಳನ್ನು ನಿವಾರಿಸುವುದೇ ಈ ಸಭೆಯ ಉದ್ದೇಶವಾದುದರಿಂದ ದುರುದ್ದೇಶದಿಂದ ಕೂಡಿದ ದೂರುಗಳನ್ನಾಗಲೀ ಅಥವಾ ವ್ಯರ್ಥ ವಾಗ್ವಾದಗಳನ್ನಾಗಲೀ ಮಾನ್ಯ ಮಾಡುವುದಿಲ್ಲ. ಆಡಳಿತದಲ್ಲಿ ಪಾರದರ್ಶಕತೆ ತರುವುದು ಲೋಕಾಯುಕ್ತ ಸಂಸ್ಥೆಯ ಮುಖ್ಯ ಗುರಿಯಾಗಿರುವುದರಿಂದ ಸಾರ್ವಜನಿಕರು ಸಹಕರಿಸಬೇಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಅಧೀಕ್ಷಕರ ಕಛೇರಿ: ದೂರವಾಣಿ ಸಂಖ್ಯೆ 0824 – 2429197 / 9480032283, ಪೊಲೀಸ್ ಉಪಾಧೀಕ್ಷಕರ ಕಛೇರಿ: 0824-2453420/ 9886542369, ಪೊಲೀಸ್ ನಿರೀಕ್ಷಕರ ಕಛೇರಿ: 0824-2427237 / 8861688100 ಸಂಪರ್ಕಿಸಲು ಮಂಗಳೂರು ಲೋಕಾಯುಕ್ತ ಪೊಲೀಸು ಅಧೀಕ್ಷಕರ ಪ್ರಕಟಣೆ ತಿಳಿಸಿದೆ.


Spread the love

Exit mobile version