ಲೋಕ ಸಭಾಚುನಾವಣೆಗೆ ಕ್ರಿಶ್ಚಿಯನ್ ಸಮುದಾಯದವರನ್ನುಕರ್ತವ್ಯಕ್ಕೆನಿಯೋಜಿಸದೆಇರಲು ಮನವಿ
ಭಾರತೀಯ ಚುನಾವಣಾ ಆಯೋಗವು ಕರ್ನಾಟಕದಲ್ಲಿ 18 ಮತ್ತು 23 ನೇ ಎಪ್ರಿಲ್ 2019 ರಂದು ಲೋಕ ಸಭಾ ಚುನಾವಣೆಗಾಗಿ ದಿನಾಂಕ ನಿಗದಿಪಡಿಸಿದೆ.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದಿನಾಂಕ 18.01.2019 ರಂದು ಚುನಾವಣೆ ದಿನಾಂಕವಾಗಿರುತ್ತದೆ.
ಈ ಎರಡೂ ಜಿಲ್ಲೆಗಳಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಜನರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿದೆ. ಆದರೆ ದಿನಾಂಕ 18.04.2019 ಕ್ರಿಶ್ಚಿಯನ್ ಸಮುದಾಯವರಿಗೆ ಪವಿತ್ರ ದಿನವಾಗಿದ್ದು, ಆ ದಿವಸ ಯೇಸುಕ್ರಿಸ್ತರು ಪರಮ ಪ್ರಸಾರವನ್ನು ಸ್ಥಾಪಿಸಿದ ದಿನವೆಂದು ಪವಿತ್ರ ಗುರುವಾರವಾಗಿ ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ.ಆ ದಿನದಂದು ಸಂಜೆ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ ಹಾಗೂ ಕ್ರಿಶ್ಚಿಯನ್ ಸಮುದಾಯದ ಎಲ್ಲಾ ಜನರು ಭಕ್ತಿಯಿಂದ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಾರೆ. ಚುನಾವಣೆ ಕೆಲಸಕ್ಕೆ ಅಧಿಕಾರಿ/ನೌಕರರು/ಶಿಕ್ಷಕರನ್ನು ನಿಯೋಜಿಸಿರುವುದರಿಂದ ಕ್ರಿಶ್ಚಿಯನ್ ಸಮುದಾಯದ ಅಧಿಕಾರಿ/ನೌಕರರು/ಶಿಕ್ಷಕರು ಕಡ್ಡಾಯವಾಗಿ ಚುನಾವಣಾ ಕೆಲಸಕ್ಕೆ ನಿಯೋಜಿಸಲ್ಪಟ್ಟರೆ ಅವರಿಗೆ ಅಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಇದು ಅವರ ಧಾರ್ಮಿಕ ಹಕ್ಕಿನ ವಿರುದ್ಧವಾಗಿರುತ್ತದೆ.