Home Mangalorean News Kannada News ವಳಕಾಡು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

ವಳಕಾಡು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

Spread the love

ವಳಕಾಡು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

ಉಡುಪಿ: ವಿದ್ಯಾರ್ಥಿಗಳು ಶಿಸ್ತು, ಸ್ವಚ್ಛತೆಯನ್ನು ಮೈಗೂಡಿಸಿಕೊಂಡು ಚೆನ್ನಾಗಿ ಪಾಠ ಕಲಿತು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆಬರಬೇಕು. ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು. ಶಾಲೆಗಾಗಿ, ದೇಶಕ್ಕಾಗಿ ತಮ್ಮ ಕೊಡುಗೆಯನ್ನು ನೀಡಬೇಕು ಎಂದು ನಗರಸಭಾ ಸದಸ್ಯೆ ಗೀತಾ ರವಿಶೇಟ್ ನುಡಿದರು. ಅವರು ಉಡುಪಿ ವಳಕಾಡಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಧ್ವಜಾರೋಹಣ ಮಾಡಿ ಸಂದೇಶ ನೀಡಿದರು.

independence-day-volakadu

ಪ್ರೌಢಶಾಲಾ ಎಸ್. ಡಿ. ಎಮ್. ಸಿ. ಉಪಾಧ್ಯಕ್ಷೆ ಲ| ಇಂದು ರಮಾನಂದ ಭಟ್, ಪ್ರಾಥಮಿಕ ಶಾಲಾ ಎಸ್. ಡಿ. ಎಮ್. ಸಿ. ಅಧ್ಯಕ್ಷ ನಾಗಭೂಷಣ ಶೇಟ್, ಎಸ್. ಡಿ. ಎಮ್. ಸಿ. ಸದಸ್ಯರಾದ, ಮಾಲಾ ನಾಯಕ್, ರವಿರಾಜ್ ನಾಯಕ್, ಉಮೇಶ್ ನಾಯಕ್, ಸದಾಶಿವ ರಾವ್, ಉಷಾ, ಮಾಧವ ಆಚಾರ್, ಪ್ರಾಥಮಿಕ ಶಾಲಾ ಮುಖ್ಯಸ್ಥೆ ಕುಸುಮ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಹೆತ್ತವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರವನ್ನು ವಿತರಿಸಲಾಯಿತು ಹಾಗೂ ಸ್ವಚ್ಛ ತರಗತಿ ಬಹುಮಾನವನ್ನು ನೀಡಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಿರ್ಮಲ ಬಿ. ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು.


Spread the love

Exit mobile version