Home Mangalorean News Kannada News ವಸಂತಿ ರಾಮ ಭಟ್  ಜನ್ಮನಕ್ಷತ್ರ ಪ್ರಯುಕ್ತ ‘ಜನ್ಮದಿನಮಿದಂ’  ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ವಸಂತಿ ರಾಮ ಭಟ್  ಜನ್ಮನಕ್ಷತ್ರ ಪ್ರಯುಕ್ತ ‘ಜನ್ಮದಿನಮಿದಂ’  ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

Spread the love

ವಸಂತಿ ರಾಮ ಭಟ್  ಜನ್ಮನಕ್ಷತ್ರ ಪ್ರಯುಕ್ತ ‘ಜನ್ಮದಿನಮಿದಂ’  ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಉಡುಪಿ: ಉಡುಪಿಯ ಹಿರಿಯ ವಯೋಲಿನ್ ವಾದಕಿ ವಸಂತಿ ರಾಮ ಭಟ್ ಅವರ ಜನ್ಮನಕ್ಷತ್ರ ಪ್ರಯುಕ್ತ ‘ಜನ್ಮದಿನಮಿದಂ’ ವಿಶೇಷ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಿತು. ಸಂಗೀತ ವಿದ್ವಾಂಸ ಮದೂರು ಪಿ ಬಾಲಸುಬ್ರಹ್ಮಣ್ಯಂ ಉದ್ಘಾಟಿಸಿದರು.

ಅಂತರರಾಷ್ಟ್ರೀಯ ಖ್ಯಾತಿಯ ವಯೋಲಿನ್ ವಾದಕ ವಿದ್ವಾನ್ ಎಂ.ಮಂಜುನಾಥ್ ಮಾತನಾಡಿ, ಸಂಗೀತ ಒಂದು ದೊಡ್ಡ ಪ್ರಪಂಚ. ಕಛೇರಿ ಮತ್ತು ಕಾರ್ಯಕ್ರಮಗಳು ಕೇವಲ ಅದರ ಒಂದು ಮುಖ. ಭಕ್ತಿ ಅರ್ಪಣೆಗೆ ಸಂಗೀತ ಒಂದು ಬಹುಮುಖ್ಯ ಮಾಧ್ಯಮ ಎಂದರು. ಕಲಾವಿದೆ ಪ್ರತಿಭಾ ಸಾಮಗ ಅವರು ವಸಂತಿ ರಾಮ ಭಟ್ ಕುರಿತು ಅಭಿನಂದನಾ ಭಾಷಣ ಮಾಡಿದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ಅಧ್ಯಕ್ಷತೆ ವಹಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಕಲಾವಿದರಾದ ಮೈಸೂರು ಸಹೋದರರು ( ಎಂ.ನಾಗರಾಜ್- ಎಂ.ಮಂಜುನಾಥ್) ಅವರ ದ್ವಂದ್ವ ವಯೋಲಿನ್ ವಾದನ ನಡೆಯಿತು. ರಾಗಧನ ಸಂಸ್ಥೆಯ ಅಧ್ಯಕ್ಷ ಡಾ.ಶ್ರೀಕಿರಣ ಹೆಬ್ಬಾರ್ ಸ್ವಾಗತಿಸಿದರು. ಉಮಾ ಮಹೇಶ್ವರಿ ವಂದಿಸಿದರು. ಉಮಾಶಂಕರಿ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version