ವಾಜಪೇಯಿ ಹುಟ್ಟು ಹಬ್ಬ- ವೈದ್ಯಕೀಯ ಶಿಬಿರ ಉದ್ಘಾಟನೆ
ಮಂಗಳೂರು: ವಾಜಪೇಯಿ ಯವರ ಹುಟ್ಟು ಹಬ್ಬದ ಅಂಗವಾಗಿ ಭಾರತೀಯ ಜನತಾ ಪಕ್ಷ ಮಂಗಳೂರು ಘಟಕ ಹಾಗೂ ಯೆನಪೋಯ ಡೆಂಟಲ್ ಆಂಡ್ ಮೆಡಿಕಲ್ ಕಾಲೇಜು ದೇರಳಕಟ್ಟೆ ಇವರ ಜಂಟಿ ಆಶ್ರಯದಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ ಬೊಳ್ಯಾರು ಉಳ್ಳಾಲ ಮಂಗಳೂರು ಇಲ್ಲಿ ಜರುಗಿತು.
ಶಿಬಿರವನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಹಿರಿಯ ಬಿಜೆಪಿ ನಾಯಕ ಮೋನಪ್ಪ ಭಂಡಾರಿ ಶಿಬಿರವನ್ನ ಉದ್ಘಾಟಿಸಿದರು.
ಬಿಜೆಪಿ ವೈದ್ಯಕೀಯ ಪ್ರಕೋಷ್ಠ ದ ರಾಜ್ಯ ಸಹ ಸಂಚಾಲಕ ಡಾ ಅಣ್ಣಯ್ಯ ಕುಲಾಲ್ ಉಳ್ತೂರು ಕ್ಯಾಂಪ್ ಹಾಗು ಸವಲತ್ತು ಬಗ್ಗೇ ತಿಳಿಹೇಳಿದರು ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ದ ಸಂಚಾಲಕ ಡಾ ರಾಘವೇಂದ್ರ ಭಟ್ ಯೆನಪೋಯ ಕಾಲೇಜು ಡೀನ್ ಶ್ರೀಪತಿ ಭಟ್ ಮಂಗಳೂರು ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ್ ಶೇಟ್ಟಿ ಹಾಗು ತಂಡ ಕಾರ್ಯಕ್ರಮ ವನ್ನ ಸಂಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಜಿಲ್ಲಾ ಪ್ರಕೋಷ್ಠ ದ ಸಹ ಸಂಚಾಲಕ ಡಾ ಹರೀಶ್ ಶೆಟ್ಟಿ ವಂದಿಸಿದರು ನೂರಾರು ರೋಗಿಗಳು ಕ್ಯಾಂಪ್ ನ ಸದುಪಯೋಗ ಪಡೆದು ಕೊಂಡರು.
ಬೊಳ್ಯಾರು ಗ್ರಾಮವನ್ನ ವೈದ್ಯಕೀಯ ಪ್ರಕೋಷ್ಠ ದಕ ಜಿಲ್ಲೆ, ಯೆನಪೋಯ ಡೆಂಟಲ್ ಅಂಡ್ ಮೆಡಿಕಲ್ ಕಾಲೇಜು ದೇರಳಕಟ್ಟೆ, ಬಿಜೆಪಿ ಮಂಗಳೂರು ಘಟಕ ,ಸೇರಿ ವೈದ್ಯಕೀಯ ಸೇವೆಗಾಗಿ ದತ್ತು ಪಡೆಯಲಾಯಿತು.
ಅಂತೆಯೇ ಜಿಲ್ಲೆಯ ವೈದ್ಯಕೀಯ ಪ್ರಕೋಷ್ಠದ ವಿವಿಧ ಘಟಕ ಗಳ ಆಶ್ರಯದಲ್ಲಿ ದಕ ಜಿಲ್ಲೆಯ ಇನ್ನುಳಿದ ಕ್ಯಾಂಪ್ ಗಳು ಕಿನ್ನಿಗೋಳಿ ಯುಗಪುರುಷ ,ಪೊಳಲಿ ಟೆಂಪಲ್ ಏರಿಯಾ ಪುತ್ತೂರು ಸಿಟಿ ,ಬೆಲ್ತಂಗಡಿ ,ಸುಳ್ಯ ,ಮಂಗಳೂರು ಬಲ್ಮಠ ಹೆಚ್ಚಿನ ಭಾಗಗಳಲ್ಲಿ ಕಾರ್ಯಕರ್ತರು ವೈದ್ಯರು ವಾಜಪೆಯೇಯಿ ಯವರ ಬಗೆಗಿನ ಗೌರವ ಹಾಗು ಪ್ರೀತಿ ಯಿಂದ ಮುತುವರ್ಜಿ ವಹಿಸಿ ರೋಗಿಗಳನ್ನ ಉಪಚರಿಸುವುದು ಕಂಡು ಬಂತು ಕೆಲವೊಂದು ತಜ್ಞ ವೈದ್ಯರು ಇ ಸಿ ಜಿ , ಕ್ಷ- ಕಿರಣ ಅಲ್ಟ್ರಾ ಸೌಂಡ್ ಸಕ್ಕರೆ ಕಾಯಿಲೆ ಹಾಗು ಎಲುಬು ಕೀಳು ತಪಾಸಣೆ ಗಳನ್ನ ಉಚಿತ ವಾಗಿ ಮಾಡಿ ಕೊಟ್ಟು ಈ ಅಟೋಗ್ಯಾ ಮೇಳದಲ್ಲಿ ಕೈಜೋಡಿಸಿದರು