ವಾಮಂಜೂರಿನಲ್ಲಿ ಬಸ್ಸನ್ನು ನಿಲ್ಲಿಸಿ ಆವಾಜ್, ಖಾಸಗಿ ಬಸ್ ಚಾಲಕನಿಗೆ ನಡುಬೀದಿಯಲ್ಲಿ ಹಲ್ಲೆ ಯತ್ನ ಆರೋಪಿಗಳು ಪೊಲೀಸರ ವಶಕ್ಕೆ

Spread the love

ವಾಮಂಜೂರಿನಲ್ಲಿ ಬಸ್ಸನ್ನು ನಿಲ್ಲಿಸಿ ಆವಾಜ್, ಖಾಸಗಿ ಬಸ್ ಚಾಲಕನಿಗೆ ನಡುಬೀದಿಯಲ್ಲಿ ಹಲ್ಲೆ ಯತ್ನ ಆರೋಪಿಗಳು ಪೊಲೀಸರ ವಶಕ್ಕೆ

ಮಂಗಳೂರು: ಬಸ್ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಕಾರಿಗೆ ತಾಗಿದೆಯೆಂದು ಯುವಕರ ತಂಡವೊಂದು ಬಸ್ಸನ್ನು ಅಡ್ಡಗಟ್ಟಿ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಯಾಣಿಕರ ಎದುರಲ್ಲಿ ಭೀತಿ ಸೃಷ್ಟಿಸಿದ ಘಟನೆ ವಾಮಂಜೂರಿನಲ್ಲಿ ನಡೆದಿದ್ದು ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಕಾರಿಗೆ ತಾಗಿದೆಯೆಂದು ಯುವಕರ ತಂಡವೊಂದು ಬಸ್ಸನ್ನು ಅಡ್ಡಗಟ್ಟಿ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಯಾಣಿಕರ ಎದುರಲ್ಲಿ ಭೀತಿ ಸೃಷ್ಟಿಸಿದ ಘಟನೆ ವಾಮಂಜೂರಿನಲ್ಲಿ ನಡೆದಿದ್ದು ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು – ಮೂಡುಬಿದ್ರೆ ಸಂಚರಿಸುವ ಎಪಿಎಂ ಹೆಸರಿನ ಖಾಸಗಿ ಬಸ್ಸನ್ನು ವಾಮಂಜೂರಿನಲ್ಲಿ ಅಡ್ಡ ಹಾಕಿದ ಮುಸ್ಲಿಂ ಯುವಕರ ತಂಡವು ಚಾಲಕನಿಗೆ ಹಲ್ಲೆ ಮಾಡಲು ಯತ್ನಿಸಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಚಾಲಕನನ್ನು ಬಸ್ಸಿನಿಂದ ಇಳಿಯುವಂತೆ ಜೋರು ಮಾಡುವ ವಿಡಿಯೋ ಸೆರೆಯಾಗಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ. ಆನಂತರ ಬಸ್ ಸಿಬಂದಿ ಮತ್ತು ಯುವಕರ ನಡುವೆ ನಡುಬೀದಿಯಲ್ಲಿ ಹೊಯ್ ಕೈ ಆಗಿದೆ.

ಇದರ ಬೆನ್ನಲ್ಲೇ ಎರಡೂ ತಂಡಗಳ ವಿರುದ್ಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಸ್ ನಿಲ್ಲಿಸಿ ಗೂಂಡಾಗಿರಿ ತೋರಿಸಿದ ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಎರಡೂ ಕಡೆಯವರು ದೂರು ಕೊಡಲು ಒಪ್ಪದೆ ರಾಜಿಯಲ್ಲಿ ಪ್ರಕರಣ ಇತ್ಯರ್ಥ ಪಡಿಸಲು ಒಪ್ಪಿಕೊಂಡಿದ್ದಾರೆ.

ಹಲ್ಲೆಗೆ ಯತ್ನಿಸಿದ ರಫಿ ಅಫ್ರೀದ್, ಅಕ್ಟರ್, ಜಾಕಿರ್ ಹುಸೇನ್, ಸಾಹಿಲ್, ಮಯತಿ, ಬದ್ರುದ್ದೀನ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಮುಚ್ಚಳಿಕೆ ಬರೆಸಿ ಕಳಿಸಿದ್ದಾರೆ. ಅಲ್ಲದೆ, ಬಿಎನ್ಎಸ್ 119(4) ಅಡಿ ಕೇಸು ದಾಖಲಿಸಿದ್ದಾರೆ.


Spread the love