Home Mangalorean News Kannada News ವಿಜಯಬ್ಯಾಂಕ್ ವಿಲೀನ: ಸಂಸದ ಕಟೀಲ್ ನೇರ ಹೊಣೆ – ಜೆಡಿಎಸ್ 

ವಿಜಯಬ್ಯಾಂಕ್ ವಿಲೀನ: ಸಂಸದ ಕಟೀಲ್ ನೇರ ಹೊಣೆ – ಜೆಡಿಎಸ್ 

Spread the love

ವಿಜಯಬ್ಯಾಂಕ್ ವಿಲೀನ: ಸಂಸದ ಕಟೀಲ್ ನೇರ ಹೊಣೆ – ಜೆಡಿಎಸ್ 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಣ್ಣಿನ ಮಹಾನಾಯಕರ ಪರಿಶ್ರಮದಿಂದ ಸ್ಥಾಪಿತಗೊಂಡ ವಿಜಯ ಬ್ಯಾಂಕ್ ಈ ರಾಷ್ಟ್ರಕ್ಕೆ ವಿಷೇಶ ಕೊಡುಗೆಯನ್ನು ನೀಡಿದೆ. ಇದೀಗ ನಷ್ಟದಲ್ಲಿರುವ ಬರೋಡ ಬ್ಯಾಂಕಿನೊಡನೆ ವಿಲೀನಗೊಳಿಸುವ ಕೇಂದ್ರ ಸರಕಾರದ ನಿರ್ದಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಪೂರ್ಣ ನಿರ್ಲಕ್ಷತೆಯನ್ನು ತೋರಿಸುತ್ತದೆ. ಈ ಬಗ್ಗೆ ಯಾವುದೇ ಹೇಳಿಕೆ,ಪ್ರತಿರೋದ ನೀಡದ ಸಂಸದ ನಳೀನ್ ಕುಮಾರ ಕಟೀಲ್ ಹಾಗೂ ಜಿಲ್ಲೆಯ ಶಾಸಕರು ಅವರ ಜಿಲ್ಲೆಯ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿವಿದೆ ಎಂದು ತೋರಿಸುತ್ತದೆ.

ಮಂಗಳೂರು ವಿಮಾನ ನಿಲ್ದಾಣ ಖಾಸಗಿಕರಣ, ಟೋಲ್ ಗೇಟ್, ಪಂಪ್ ವೆಲ್ ಹಾಗೂ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಕೆಯಲ್ಲಿ ಸಂಪೂರ್ಣ ವಿಫಲರಾದ ಸಂಸದರು. ಕೇವಲ ಕೇಂದ್ರದ ಕೈಗೊಂಬೆ ವಿನಹ ಅವರಿಗೆ ಜಿಲ್ಲೆಯ ಅಭಿವ್ರದ್ದಿ ಬಗ್ಗೆ ಚಿಂತನೆವಿಲ್ಲ ಎಂಬುವುದು ಸ್ವಷ್ಟ. ಇದೀಗ ಬ್ಯಾಂಕ್ ವಿಲೀನದ ಬಗ್ಗೆ ಪ್ರತಿಭಟನೆ, ಬಂದ್ ಇವು ನಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುವುದು ಸಹಜ. ಆದರೆ ಇದರ ಜೊತೆಗೆ ಸಮಾನ ಮನಸ್ಕರು ಜತೆಗೂಡಿ ಕೇಂದ್ರದ ಮೇಲೆ ಒತ್ತಡ ಹಾಗೂ ಕಾನೂನು ಕ್ರಮ ಕೈಗೊಳ್ಳುವುದು ಸೂಕ್ತವೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಇ” ಹಾಗೂ ಜೆಡೀಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ತಿಳಿಸಿದ್ದಾರೆ.


Spread the love

Exit mobile version