Home Mangalorean News Kannada News ವಿದೇಶದಿಂದ ಬಂದವರ ಕ್ವಾರಂಟೈನ್ ಗೊಂದಲ – ಜಿಲ್ಲಾಧಿಕಾರಿ ಭೇಟಿ ಮಾಡಿದ ಮುಸ್ಲಿಂ ಮುಖಂಡರು

ವಿದೇಶದಿಂದ ಬಂದವರ ಕ್ವಾರಂಟೈನ್ ಗೊಂದಲ – ಜಿಲ್ಲಾಧಿಕಾರಿ ಭೇಟಿ ಮಾಡಿದ ಮುಸ್ಲಿಂ ಮುಖಂಡರು

Spread the love

ವಿದೇಶದಿಂದ ಬಂದವರ ಕ್ವಾರಂಟೈನ್ ಗೊಂದಲ – ಜಿಲ್ಲಾಧಿಕಾರಿ ಭೇಟಿ ಮಾಡಿದ ಮುಸ್ಲಿಂ ಮುಖಂಡರು

ಮಂಗಳೂರು: ಲಾಕ್ ಡೌನ್ ಬಳಿಕ ನಿನ್ನೆ ದುಬೈಯಿಂದ ಮೊದಲ ವಿಮಾನ ಮಂಗಳೂರಿಗೆ ಆಗಮಿಸಿದ್ದು ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಆದ ಅವ್ಯವಸ್ಥೆ ಹಾಗೂ ಕ್ವಾರಂಟೈನ್ ಗೊಂದಲದ ಬಗ್ಗೆ ಅತೀ ಶೀಘ್ರವಾಗಿ ಗೊಂದಲ ಮತ್ತು ಅವ್ಯವಸ್ಥೆಯನ್ನು ಸರಿಪಡಿಸಲು ಆಗ್ರಹಿಸಿ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಚರ್ಚಿಸಲಾಯಿತು.

ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆಗೆ ಹೆಚ್ಚು ಸಮಯವಾಗುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ವಿಮಾನಗಳು ಆಗಮಿಸುವ ಸಂದರ್ಭದಲ್ಲಿ ಹೆಚ್ಚಿನ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಬೇಕೆಂದು, ಗರ್ಭಿಣಿಯರಿಗೆ ಹಾಗೂ ವಯಸ್ಕರಿಗೆ ಅನಾನು ಕೂಲವಾಗದಂತೆ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು,

ನಿಯೋಗದಲ್ಲಿ ವಿಧಾನಪರಿಷತ್ ಸದಸ್ಯ ಬಿಎಂ ಫಾರೂಕ್, ಮಾಜಿ ಶಾಸಕ ಬಿ. ಎ ಮೊಹಿದಿನ್ ಬಾವ, ಎಸ್. ಡಿ. ಪಿ.ಐ ಜಿಲ್ಲಾಧ್ಯಕ್ಷ ಅತಾವುಲ್ಲಾ ಜೋಕಟ್ಟೇ, ಇಬ್ರಾಹಿಂ ಕೋಡಿಜಾಲ್, ರಫೀಯುದ್ದೀನ್ ಕುದ್ರೋಳಿ, ಹಾಗೂ ಇತರ ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು ,


Spread the love

Exit mobile version