ವಿದ್ಯಾದಾಯಿನಿ ಸಭಾದ ವತಿಯಿಂದ ನಾರಾಯಣಗುರು ಜಯಂತಿ, ಮುಂದೆ ಒಳ್ಳೆಯ ದಿನಗಳು ಬರಲಿದೆ – ರಾಜೇಶ್ ಭಟ್
ಮುಂಬಯಿ : ಕೆನರಾ ರಾತ್ರಿ ಶಾಲೆಯ ಸಂಚಾಲಕರಾದ ವಿದ್ಯಾದಾಯಿನಿ ಸಭಾದ ವತಿಯಿಂದ ನಾರಾಯಣಗುರುಗಲ 166 ನೇ ಜಯಂತಿಯನ್ನು ಸೆ. 2ರಂದು ಸಭಾದ ಕಾರ್ಯಾಲಯದಲ್ಲಿ ಸಮಾಜಿಕ ಅಂತರವನ್ನು ಕಾಪಾಡಿಕೊಂಡು ಸರಳ ರೀತಿಯಲ್ಲಿ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಭುವನೇಶ್ವರಿ ಕ್ಷೇತ್ರದ ಧರ್ಮದರ್ಶಿ ರಾಜೇಶ್ ಭಟ್ ಅವರು ಸದ್ಯದ ಪರಿಸ್ಥಿತಿಯಲ್ಲಿ ಇಡಿ ವಿಶ್ವವೇ ಮಹಾಮಾರಿ ಕೋವಿಡ್ ನಿಂದ ತೊಂದರೆಗೊಳಗಾಗಿದ್ದು ಇದೆಲ್ಲಾ ಮಾನವನಿಗೆ ದೇವರು ಕೊಟ್ಟ ಪರೀಕ್ಷೆ ಹಾಗೂ ಪ್ರಪಂಚದಲಿ ಪ್ರಕೃತಿ ಮಾತೆಗಿಂತ ಬೇರೊಂದಿಲ್ಲ. ಇದು ಸಭಾದ ಶತಮಾನದ ವರ್ಷವಾಗಿದ್ದು ಇಂದಿನ ಈ ಪರಿಸ್ಥಿತಿಯಲ್ಲಿ ಈ ಸಂಘಟನೆಗೆ ಸಂಮಂಧಿಸಿದ ಹೆಚ್ಚಿನವರಿಗೆ ಪಾಲುಗೊಳ್ಳಲು ಅಸಾದ್ಯವಾಗಿದೆ ಆದರೂ ಮುಂದಿನ ದಿನಗಳಲ್ಲಿ ಎಲ್ಲರಿಗೂ ದೇವರು ಭಾಗ್ಯವನ್ನು ಕರುಣಿಸಿ ಸಭಾದ ಜನಪರ ಸೇವೆಯು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಸಭಾದ ಭಜನಾ ಸಮಿತಿಯ ಪ್ರಮುಖರಾದ ಸದಾನಂದ ಪೂಜಾರಿ ಪೂಜೆಯ ವಿಧಿ ವಿದಾನವನ್ನು ನೆರವೇರಿಸಿದರು. ಸಭಾದ ಭಜನಾ ಮಂಡಳಿ ಮತ್ತು ವೆಸ್ಟರ್ನ್ ಇಂಡಿಯಾ ಶನೀಶ್ವರ ಪೂಜಾ ಸಮಿತಿಯವರು ಭಜನಾ ಕಾರ್ಯವನ್ನು ನಡೆಸಿದ್ದು ಜಯಾನಂದ ಪೂಜಾರಿ, ಸತೀಶ್ ಶೆಟ್ಟಿ, ರಾಜು ಪೂಜಾರಿ ಮರವಂತೆ ಸಹಕರಿಸಿದರು.
ಶಾಲಾಧಿಕಾರಿ ಡಾ. ಪ್ರಕಾಶ್ ಮೂಡಬಿದ್ರೆಯವರು ಆಡಳಿತಿ ಸಮಿತಿಯ ಪರವಾಗಿ ಮಾತನಾಡಿ ಈ ಕಠಿಣ ಪರಿಸ್ಥಿತಿಯಲ್ಲಿಯೂ ಗುರು ಜಯಂತಿಯನ್ನು ಆಚರಿಸಿದ ಎಲ್ಲರಿಗೂ ಹಾಗೂ ಉಪಸ್ಥಿತರಿದ್ದು ಆಶ್ರೀರ್ವದಿಸಿದ ರಾಜೇಶ್ ಭಟ್ ಇವರಿಗೂ ವಂದಿಸಿದರು.
ಮಂಗಳಾರತಿ ಹಾಗೂ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್