ವಿದ್ಯಾರ್ಜನೆಗೆ ಸಮಯ ನಿರ್ವಹಣೆಯೇ ಅತ್ಯಂತ ದೊಡ್ಡ ಸಂಪನ್ಮೂಲ – ಲಲಿತಾ ಮಲ್ಯ

Spread the love

ವಿದ್ಯಾರ್ಜನೆಗೆ ಸಮಯ ನಿರ್ವಹಣೆಯೇ ಅತ್ಯಂತ ದೊಡ್ಡ ಸಂಪನ್ಮೂಲ – ಲಲಿತಾ ಮಲ್ಯ

ಮಂಗಳೂರು :ವಿದ್ಯಾರ್ಥಿಗಳು ಅಧ್ಯಾಯನಶೀಲತೆಯಲ್ಲಿ ಸಮಯ ನಿರ್ವಹಣೆ ಮತ್ತು ಪರಿಣಾಮಕಾರಿಯಾದ ಅಧ್ಯಾಯನದ ಕೌಶಲ್ಯಗಳನ್ನು ಅಳವಡಿಸಿಕೊಂಡರೆ ಯಶಸ್ಸನ್ನು ಗಳಿಸಬಹುದು ಎಂದು ಇಂಡಿಯನ್ ಸ್ಕೂಲ್ ಮಸ್ಕತ್, ಒಮನ್ ಇಲ್ಲಿನ ಜೀವಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಲಲಿತಾ ಮಲ್ಯ ಹೇಳಿದರು.

ಅವರು ಎಕ್ಸ್‍ಪರ್ಟ್ ಪದವಿ ಪೂರ್ವ ಕಾಲೇಜು ಮಂಗಳೂರು ಇವರ ಆಶ್ರಯದಲ್ಲಿ ನಡೆದ ‘ವಿದ್ಯಾರ್ಥಿಗಳ ಅಧ್ಯಾಯನಶೀಲತೆಯಲ್ಲಿ ಸಮಯದ ನಿರ್ವಹಣೆ’ ಎಂಬ ವಿಷಯದ ಕುರಿತು ವಿಶೇಷವಾದ ಉಪನ್ಯಾಸವನ್ನು ನೀಡಿದರು.

lalita-mallya-talk-expert

ಅವರು ಮಾತನಾಡುತ್ತ ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ಪರಿಣಾಮಕಾರಿಯಾಗಿ ಸಮಯ ಪರಿಪಾಲನೆಯನ್ನು ಅನುಸರಿಸಿದರೆ ವಿದ್ಯಾರ್ಥಿಗಳ ಭವಿಷ್ಯವೇ ಬದಲಾವಣೆಯಾಗುತ್ತದೆ. ಇಂದಿನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಸಮಯವನ್ನು ವ್ಯಯಮಾಡುತ್ತಾರೆ. ಆದರೆ ಅಧ್ಯಾಯನಕ್ಕೆ ಯಾವುದೇ ಸಮಯವನ್ನು ಮೀಸಲಿಡದೆ ಸೋಲನ್ನು ಅನುಭವಿಸುತ್ತಾರೆ. ಸಮಯದ ನಿರ್ವಹಣೆಯ ಬಗ್ಗೆ ಸರಿಯಾದ ಪರಿಕಲ್ಪನೆ ಇದ್ದಾಗ ಸಾಧನೆಯ ಪಥವನ್ನು ಮುಟ್ಟಬಹುದು. ಸಮಯದ ವೇಳಾಪಟ್ಟಿ ಹಾಗೂ ನಿರಂತರವಾದ ಪ್ರಯತ್ನವಿದ್ದಾಗ ಯಶಸ್ಸು ಸಿಗುತ್ತದೆ. ಬಿಡುವಿಲ್ಲದೆ ಅಧ್ಯಾಯನಶೀಲತೆಯಲ್ಲಿ ತೊಡಗಿಸಿಕೊಂಡಾಗ ಯಶಸ್ಸು ಕಟ್ಟಿಟ್ಟಬುತ್ತಿ. ಪರೀಕ್ಷೆಗಳಲ್ಲಿ ಕೊನೆಯ ಕ್ಷಣದ ತಯಾರಿಯು ಯಾವುದೇ ರೀತಿಯ ಯಶಸ್ಸನ್ನು ತಂದಕೊಡುವುದಿಲ್ಲ. ಪಠ್ಯಕ್ರಮವನ್ನು ಅಭ್ಯಾಸ ಮಾಡಲು ನಿಗದಿತವಾದ ವೇಳಾಪಟ್ಟಿಯನ್ನು ಗುರುತಿಸಿಕೊಂಡು ಅನುಸರಿಸಬೇಕು. ನಿರಂತರವಾಗಿ ಅಧ್ಯಾಯನದಲ್ಲಿ ತೊಡಗಿಸಿಕೊಂಡಾಗ ವಿಷಯವನ್ನು ಆಳವಾಗಿ ಗ್ರಹಿಸಿ ವಿಷಯದ ಮೇಲೆ ಪ್ರಬುದ್ಧತೆಯನ್ನು ಪಡೆಯಬಹುದು ಎಂದು ಹೇಳಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರಾಮಚಂದ್ರ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕ್ಷಿಥಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


Spread the love