ವಿದ್ಯುತ್ ಅವಘಡ: ಎಸ್ಡಿಪಿಐ ಪುತ್ತೂರು ನಗರ ಸಮಿತಿ ಅಧ್ಯಕ್ಷ ಮೃತ್ಯು

Spread the love

ವಿದ್ಯುತ್ ಅವಘಡ: ಎಸ್ಡಿಪಿಐ ಪುತ್ತೂರು ನಗರ ಸಮಿತಿ ಅಧ್ಯಕ್ಷ ಮೃತ್ಯು

ಪುತ್ತೂರು: ವಿದ್ಯುತ್ ಆಘಾತದಿಂದ ಎಸ್ಡಿಪಿಐ ಪುತ್ತೂರು ನಗರ ಸಮಿತಿಯ ಅಧ್ಯಕ್ಷ ಸ್ಥಳದಲ್ಲೇ ಮೃತಪಟ್ಟ ಘಟನೆ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಪುತ್ತೂರು ನಗರದ ದರ್ಬೆ ಬಳಿ ಸಂಭವಿಸಿದೆ.

ಮೃತರನ್ನು ಕೂರ್ನಡ್ಕ ನಿವಾಸಿ ಹಂಝ ಅಫ್ನಾನ್ (40) ಎಂದು ಗುರುತಿಸಲಾಗಿದೆ.

ಕಾರ್ಯಕ್ರಮ ಒಂದರ ಫ್ಲೆಕ್ಸ್ ಅಳವಡಿಸುತ್ತಿದ್ದ ವೇಳೆ ಮಂಗಳೂರಿನಲ್ಲಿ ಕಾರ್ಯಕ್ರಮ ಮುಗಿಸಿ ಕುಟುಂಬದೊಂದಿಗೆ ಹಿಂದಿರುಗುತ್ತಿದ್ದ ಹಂಝ ಅವರು ಕಾರಿನಿಂದ ಇಳಿದು ಫ್ಲೆಕ್ಸ್ ಸರಿಪಡಿಸಲು ಯತ್ನಿಸಿದ ವೇಳೆ ಪಕ್ಕದಲ್ಲೇ ಇದ್ದ ವಿದ್ಯುತ್ ತಂತಿ ಸ್ಪರ್ಷಗೊಂಡು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಮೃತರು ಕೂರ್ನಡ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಪತ್ನಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.


Spread the love