ವಿದ್ಯುತ್ ಕೇಬಲ್ ನ್ನು ಕಳ್ಳತನ ಮಾಡಿದ ಐದು ಡಕಾಯಿತರ ಬಂಧನ
ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದಲ್ಲಿ ವಿದ್ಯುತ್ ಚಾಲಿತ ರೈಲ್ವೆ ಕಾಮಗಾರಿಗೆಂದು ತ್ರಿಮೂರ್ತಿ ಕಂಪೆನಿಯವರು ಕೆಂಜಾರು ಮೂಡಾಯಿ ಮಠ ಎಂಬಲ್ಲಿ ಶೇಖರಿಸಿಟ್ಟಿದ್ದಂತಹ ವಿದ್ಯುತ್ ಕೇಬಲ್ ನ್ನು ಕಳ್ಳತನ ಮಾಡಿದ ಐದು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕಿನ್ನಿಗೋಳಿ ಕಾಪಿಕಾಡ್ ನಿವಾಸಿ್ ಆರೀಫ್ @ ಮೊಹಮ್ಮದ್ ಆರೀಫ್ @ ಮುನ್ನ (28), ಬಜಪೆ ಕಿನ್ನಿಪದವು ನಿವಾಸಿ ರಮ್ಲಾನ್ ಇದ್ದಿನ್ @ಕಮಲ್ (20), ಮಂಗಳೂರು ಕಳವಾರು ನಿವಾಸಿ ಅಜರುದ್ದಿನ್ @ ಅಜರ್ (23), ಎಕ್ಕಾರು ಗ್ರಾಮ ನಿವಾಸಿ ಅಬ್ದುಲ್ ಹಮೀದ್ @ ಅದ್ರಮೋನು (24), ಕೆಂಜಾರು ನಿವಾಸಿ ಮೊಹಮ್ಮದ್ ಹಕೀಂ @ ಅಕ್ಕಿ (21) ಎಂದು ಗುರುತಿಸಲಾಗಿದೆ.
ಸದ್ರಿ ಆರೋಪಿತರು ಸುಮಾರು 2 ಲಕ್ಷ ಮೌಲ್ಯದ ಸಂಪೂರ್ಣ ಸ್ವತ್ತನ್ನು ಹಾಗೂ ಕೃತ್ಯಕ್ಕೆ ಬಳಸಿದ ಸಿಲ್ವರ್ ಬಣ್ಣದ ಕೆ.ಎ 21 ಪಿ 0479 ನಂಬ್ರದ ಓಮ್ನಿ ಕಾರಿನ್ನು ವಶಕ್ಕೆ ಪಡೆಯಲಾಗಿರುತ್ತದೆ. ಈ ಮೇಲ್ಕಂಡ ಆರೋಪಿಗಳ ವಿರುದ್ದ ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ ದರೋಡೆ, ಕಳ್ಳತನ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿರುತ್ತದೆ.
ಈ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರಾದ ಟಿ.ಆರ್ ಸುರೇಶ್, ಐ.ಪಿ.ಎಸ್. ರವರ ನಿರ್ದೇಶನದಂತೆ ಉಮಾ ಪ್ರಶಾಂತ್, ಉಪ ಪೊಲೀಸ್ ಆಯುಕ್ತರು (ಅಪರಾಧ&ಸಂಚಾರ) ರವರ ಮತ್ತು ರಾಜೇಂದ್ರ ಡಿ.ಎಸ್, ಸಹಾಯಕ ಪೊಲೀಸ್ ಆಯುಕ್ತರು ಪಣಂಬೂರು ರವರ ಮಾರ್ಗದರ್ಶನದಲ್ಲಿ ಬಜಪೆ ಪೊಲೀಸ್ ಠಾಣಾ ನಿರೀಕ್ಷಕರಾದ ಎಸ್. ಪರಶಿವಮೂರ್ತಿ, ಪಿ.ಎಸ್.ಐ ಶಂಕರ ನಾಯರಿ, ಎ.ಎಸ್.ಐ ಪೊವಪ್ಪ, ಎ.ಎಸ್.ಐ ರಾಮಚಂದ್ರ, ಎ.ಎಸ್.ಐ ಜನಾರ್ಧನ ಗೌಡ, ಹೆಚ್.ಸಿ 2082 ಪ್ರಕಾಶ್ ಮೂರ್ತಿ, ಹೆಚ್.ಸಿ 552 ಚಂದ್ರ ಮೋಹನ್, ಹೆಚ್,ಸಿ 510 ರಾಜೇಶ್, ಪಿ.ಸಿ 892, ಭರತ್ ಪಿ.ಸಿ 990 ಶಶಿಧರ್, ಪಿ.ಸಿ 436 ಪ್ರೇಮಾನಂದ,ಪಿ.ಸಿ 648 ಲಕ್ಷ್ಮಣ ಕಾಂಬ್ಳೆ ರವರು ಭಾಗಹಿಸಿರುತ್ತಾರೆ.