Home Mangalorean News Kannada News ವಿದ್ಯುತ್  ಬಿಲ್ ಪಾವತಿಸಲು ಕಾಲಾವಕಾಶ ನೀಡಲು ಜೆ. ಆರ್. ಲೋಬೊ ಮನವಿ

ವಿದ್ಯುತ್  ಬಿಲ್ ಪಾವತಿಸಲು ಕಾಲಾವಕಾಶ ನೀಡಲು ಜೆ. ಆರ್. ಲೋಬೊ ಮನವಿ

Spread the love

ವಿದ್ಯುತ್  ಬಿಲ್ ಪಾವತಿಸಲು ಕಾಲಾವಕಾಶ ನೀಡಲು ಜೆ. ಆರ್. ಲೋಬೊ ಮನವಿ

ಮಂಗಳೂರು: ವಿದ್ಯುತ್ ಬಿಲ್ ನಿಗದಿತ ಅವಧಿಯಲ್ಲಿ ಪಾವತಿ ಮಾಡದಿದ್ದರೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸುವ ಮೆಸ್ಕಾಂ ನಿರ್ಧಾರದ ವಿರುದ್ಧ ಮಾಜಿ ಶಾಸಕ ಜೆ. ಆರ್. ಲೋಬೊರವರ ನೇತೃತ್ವದ ಕಾಂಗ್ರೆಸ್ ನಿಯೋಗ ಮಂಗಳವಾರ  ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ಅಧೀಕ್ಷಕ ಇಂಜಿನಿಯರ್ ಗೆ ಮನವಿ ಸಲ್ಲಿಸಿತು.

 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ  ಜೆ. ಆರ್. ಲೋಬೊ, ಮೆಸ್ಕಾಂ ಧೋರಣೆಯಿಂದ ಜನ ಸಾಮಾನ್ಯರಿಗೆ ಹಾಗೂ ಗ್ರಾಹಕರಿಗೆ ಬಹಳಷ್ಟು ಸಮಸ್ಯೆ ಎದುರಾಗಿದೆ. ಸೆ.21ರಿಂದ ವಿದ್ಯುತ್ ಬಿಲ್ ವಿದ್ಯುತ್ ಬಿಲ್ ಬಾಕಿದಾರರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಮೆಸ್ಕಾಂ ನವರು ಮುಂದಾಗಿರುವುದು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಈ ಏಕಾಏಕಿ ನಿರ್ಧಾರದಿಂದ ಜನಸಾಮಾನ್ಯರಿಗೆ ಹಾಗೂ ಕೈಗಾರಿಕೆಗಳಿಗೆ ಬಹಳಷ್ಟು ತೊಂದರೆಯಾಗಿದೆ ಎಂದು ಹೇಳಿದರು.

ನೆಫ್ಟ್/ಆರ್ಟಿಜಿಎಸ್ ಮುಖಾಂತರ ಅಥವಾ ಆನ್ಲೈನ್ ಮುಖಾಂತರ ಬಿಲ್ ಪಾವತಿಸುವ ಗ್ರಾಹಕರಿಗೆ ಈಗಾಗಲೇ ಸಂಪೂರ್ಣ ಬಿಲ್ಲಿನ ಮೊತ್ತವನ್ನು ಕಟ್ಟುವ ಸೌಲಭ್ಯವಿದ್ದು, ಇದನ್ನು ಸಡಿಲಗೊಳಿಸಿ ಅವರಿಗೆ ಶಕ್ತಿಗಾನುಸಾರವಾಗಿ ಹಣ ಪಾವತಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಯಾವ ಬಳಕೆದಾರನಿಗೆ ಹಣಕಟ್ಟಲು ಶಕ್ತಿ ಇದೆಯೋಇಲ್ಲವೋಎಂಬುದನ್ನು ಗಮನಿಸಿ ಅವನ ಶಕ್ತಿಗನುಸಾರವಾಗಿ ಕಟ್ಟಲು ಅಂತಹವರು ಸ್ವಯಂ ಪ್ರೇರಣೆಯಿಂದ ಮೆಸ್ಕಾಂ ಬಿಲ್ ಕಟ್ಟುವಂತೆ ಜನಾಭಿಪ್ರಾಯ ರೂಪಿಸಬೇಕು. ಇದರ ಹೊರತಾಗಿ ಎಕಾಏಕಿ ವಿದ್ಯುತ್ ಸ್ಥಗಿತಗೊಳಿಸಬಾರದು ಎಂದರು.

ಸದ್ರಿ ಮೆಸ್ಕಾಂ ನೀಡುವ ಬಿಲ್ಲುಗಳಲ್ಲಿ ಸರಿಯಾದ ವಿವರಗಳು ಇಲ್ಲದೇ ಇರುವುದರಿಂದ ಗ್ರಾಹಕರಿಗೆ ನೀಡುವ ಬಿಲ್ಲಿನಲ್ಲಿ ಸರಿಯಾದ ವಿವರವನ್ನು ನೀಡಬೇಕು. ಅಂಗಡಿಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವುದರಿಂದ ಅನೇಕ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಜನರಿಗೆ ಕೆಲಸವಿಲ್ಲದೆ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಮೆಸ್ಕಾಂ ರವರ ದುಬಾರಿ ಬಿಲ್ ಕಟ್ಟಲು ಪರದಾಡುತ್ತಿರುವಂತಹ ಸಂದರ್ಭ ಎದುರಾಗಿದೆ.  ಕಂತುಗಳ ಮುಖಾಂತರ ಗ್ರಾಹಕರಿಗೆ ಬಿಲ್ ಕಟ್ಟಲು ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕವನ್ನು ನಿಲ್ಲಸಲು ಪ್ರಯತ್ನಿಸಬಾರದು ಎಂದರು.

 ಗ್ರಾಹಕರ ವಿದ್ಯುತ್ ಸಮಸ್ಯೆಯನ್ನು ನೀಗಿಸಲು ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.  ರಾಜ್ಯ ಸರ್ಕಾರ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಸರ್ಕಾರ ಮೆಸ್ಕಾಂ ಸಂಸ್ಥೆಗೆ ಆರ್ಥಿಕ ಸಹಕಾರ ನೀಡುವುದರ ಜೊತೆಗೆ ಜನರಿಗೆ ಕಂತುಗಳ ಮುಖಾಂತರ ಬಿಲ್ ಪಾವತಿಸಲು ಅನುವು ಮಾಡಿಕೊಡಬೇಕು.  ಸ್ಥಳೀಯ ಸಂಸದರು ಮತ್ತು ಶಾಸಕರು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಜನಸಾಮಾನ್ಯರಿಗೆ ಆಗುವ ತೊಂದರೆಗಳನ್ನು ತಿಳಿಸಲಿ ಎಂದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಹರಿನಾಥ್, ಮಾಜಿ ಉಪ ಮೇಯರ್ ಹಾಗೂ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಂ. ಮಾಜಿ ಕಾರ್ಪೊರೇಟರ್ ಗಳಾದ ದೀಪಕ್ ಪೂಜಾರಿ, ಪ್ರಕಾಶ್ ಸಾಲಿಯಾನ್, ಮಾಜಿ ಮೆಸ್ಕಾಂ ನಿರ್ದೇಶಕ ಸದಾಶಿವ ಅಮೀನ್, ಕಾಂಗ್ರೆಸ್ ನಾಯಕರುಗಳಾದ ಟಿ.ಕೆ.ಸುಧೀರ್, ನೀರಜ್ ಚಂದ್ರ ಪಾಲ್, ಶುಭೋದಯ ಆಳ್ವ, ಮೋಹನ್ ಶೆಟ್ಟಿ,  ಸುಮಂತ್ ರಾವ್, ಡೆನಿಸ್ ಡಿಸಿಲ್ವ,  ರಮಾನಂದ ಪೂಜಾರಿ, ಲಾರೆನ್ಸ್, ಶಾಂತಲ ಗಟ್ಟಿ, ಟಿ.ಹೊನ್ನಯ್ಯ,  ಉದಯ ಕುಂದರ್, ಸಮರ್ಥ್ ಭಟ್,  ವಿನಯ್ ಮಸ್ಕರೇನಸ್ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version