ವಿದ್ವಂಸಕ ಕೃತ್ಯ ತಪಾಸಣಾ ಸ್ಪರ್ಧೆ ಶಂಕರ್ ಕುಲಾಲ್ ಅವರಿಗೆ ಕಂಚಿನ ಪದಕ
ಉಡುಪಿ: ಉತ್ತರಪ್ರದೇಶದಲ್ಲಿ ನಡೆದ ರಾಷ್ಟ್ರಮಟ್ಟದ ವಿದ್ವಂಸಕ ಕೃತ್ಯ ತಪಾಸಣಾ ಸ್ಪರ್ಧೆಯಲ್ಲಿ ಭಾಗವಹಿಸಿದ ಕರ್ನಾಟಕ ತಂಡದ ಉಡುಪಿ ಜಿಲ್ಲೆಯಿಂದ ಭಾಗವಹಿಸಿದ ಶಂಕರ ಕುಲಾಲ್ ಸ್ಪರ್ಧೆಯಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ಒಳ್ಳೆಯ ಅಂಕಗಳನ್ನು ಪಡೆದು ಮೂರನೇ ಸ್ಥಾನವನ್ನು ಪಡೆದಿರುತ್ತಾರೆ.
ಕಂಚಿನ ಪದಕವನ್ನು ಪಡೆದ ಇವರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ ರವರು ಕಂಚಿನ ಪದಕವನ್ನು ನೀಡಿ ಗೌರವಿಸಿದರು