Home Mangalorean News Kannada News ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕ್ಯಾ. ಗಣೇಶ್ ಕಾರ್ಣಿಕ್ ಮನವಿ

ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕ್ಯಾ. ಗಣೇಶ್ ಕಾರ್ಣಿಕ್ ಮನವಿ

Spread the love

ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕ್ಯಾ. ಗಣೇಶ್ ಕಾರ್ಣಿಕ್ ಮನವಿ

ಮಂಗಳೂರು: 2018 ಜೂನ್ 8 ರಂದು ನಡೆಯಲಿರುವ ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕ ಹಾಗೂ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ದಕ್ಷಿಣ  ಶಿಕ್ಷಕರ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ನಾನು ಮತ್ತು  ಆಯನೂರು ಮಂಜುನಾಥ್ ಹಾಗೂ ಪ್ರೊ. ನಿರಂಜನ ಮೂರ್ತಿಯವರು ದಿನಾಂಕ 21.05.2018 ರಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿರುತ್ತೇವೆ ಎಂದು ನೈರುತ್ಯ ಶಿಕ್ಷಕ ಹಾಗೂ ನೈರುತ್ಯ ಪದವೀಧರ ಕ್ಷೇತ್ರ  ಬಿಜೆಪಿ ಅಭ್ಯರ್ಥಿ ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು  .

ನಾಮಪತ್ರ ಸಲ್ಲಿಸುವ ಮುನ್ನ ನಡೆದ ಸಮಾರಂಭದಲ್ಲಿ ಸಾವಿರಾರು ಮತದಾರರ ಸಮ್ಮುಖದಲ್ಲಿ ರಾಜ್ಯದ ಮಾಜಿ ಉಪಮುಖ್ಯಮಂತ್ರಿ, ವಿಧಾನ ಪರಿಷತ್ತಿನ  ನಿಕಟಪೂರ್ವ ವಿಪಕ್ಷ ನಾಯಕ ಹಾಗೂ ಹಾಗೂ ಶಾಸಕರಾದ ಸನ್ಮಾನ್ಯ ಕೆ.ಎಸ್. ಈಶ್ವರಪ್ಪನವರು ಸಭೆಯನ್ನುದ್ದೇಶಿಸಿ ಮಾತನಾಡಿ ಪಕ್ಷದ ಅಭ್ಯರ್ಥಿಗಳಿಗೆ ಮತದಾರರ ಸಹಕಾರವನ್ನು ಕೋರಿದರು. ಸಂಸದರಾದ ನಳಿನ್ ಕುಮಾರ್ ಕಟೀಲ್, ಕು| ಶೋಭಾ ಕರಂದ್ಲಾಜೆ, ವಿಧಾನ ಸಭಾ ಚುನಾವಣೆಯಲ್ಲಿ ಹೊಸದಾಗಿ ಚುನಾಯಿತರಾದ ನೈರುತ್ಯ ಮತ್ತು ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಭಾರತೀಯ ಜನತಾ ಪಾರ್ಟಿಯ ಶಾಸಕರು ಹಾಗೂ ಪಕ್ಷದ ಹಿರಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಕಳೆದ ಐದು ವರ್ಷಗಳಲ್ಲಿ ನೆನೆಗುದಿಗೆ ಬಿದ್ದಿರುವ ಅನುದಾನ ಪ್ರಕ್ರಿಯೆ, ಶಿಕ್ಷಕರ ವರ್ಗಾವಣೆ ಹಾಗೂ ನೇಮಕಾತಿ ಗೊಂದಲಗಳು, ಇಲಾಖೆಯಲ್ಲಿ ಮಿತಿಮೀರಿದ ಭ್ರಷ್ಠಾಚಾರ, ವಿಶ್ವವಿದ್ಯಾನಿಲಯಗಳ ಕಾನೂನಿನ ಬದಲಾವಣೆ ನೆಪದಲ್ಲಿ ರಾಜಕೀಯ ಹಸ್ತಕ್ಷೇಪ, ಲೋಪದೋಷಗಳಿಂದ ಕೂಡಿದ ಹಾಗೂ ಎನ್.ಸಿ.ಇ.ಆರ್.ಟಿ. ಮಾನದಂಡಗಳನ್ನು ಅನುಸರಿಸದೆ ಪಠ್ಯಪುಸ್ತಕಗಳನ್ನು ಮುದ್ರಿಸಿದ ಸರ್ಕಾರದ ಬೇಜವಾಬ್ದಾರಿ ನಡೆ, ವರ್ಗಾವಣೆಯಲ್ಲಿ ಗೊಂದಲಗಳು, ಹೆಚ್ಚುವರಿ ಶಿಕ್ಷಕರ ಸಮಸ್ಯೆ, ಅತಿಥಿ ಉಪನ್ಯಾಸಕರ ಸಮಸ್ಯೆ, ದೈಹಿಕ ಶಿಕ್ಷಕರ ಸಮಸ್ಯೆ, ಐಟಿಐ ಸಿಬ್ಬಂದಿಗಳ ಸಮಸ್ಯೆ ಮುಂತಾದ ಅನೇಕ ವಿಷಯಗಳು ಅತ್ಯಂತ ಪ್ರಮುಖವಾಗಬೇಕಿದ್ದ ಶಿಕ್ಷಣ ಕ್ಷೇತ್ರವನ್ನು ಈ ಹಿಂದಿನ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದ್ದಕ್ಕೆ ಸಾಕ್ಷಿಯಾಗಿದ್ದು ಈ ಹಿಂದಿನ ಸರ್ಕಾರದ ವಿರುದ್ಧ ಶಿಕ್ಷಕ ಉಪನ್ಯಾಸಕರು ಭರವಸೆ ಕಳೆದು ಕೊಂಡಿರುತ್ತಾರೆ.

ಭಾರತೀಯ ಜನತಾ ಪಾರ್ಟಿ ಕರ್ನಾಟಕದಲ್ಲಿ ಆಡಳಿತದಲ್ಲಿದ್ದಾಗ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಅದ್ಭುತ ಸಾಧನೆಗಳು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಾದ ದಾಖಲೆಯ ಅನುದಾನ (ರೂ 4,800 ಕೋಟಿಯಿಂದ ರೂ 18,666 ಕೋಟಿ), ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಿರುವುದು, ಖಾಲಿ ಹುದ್ದೆಗಳನ್ನು ತುಂಬಲು ಅನುಮತಿ ನೀಡಿರುವುದು, ಜೆಒಸಿ, ಮೊರಾರ್ಜಿ ಮತ್ತು ವಸತಿ ಶಾಲೆಗಳ ಸಮಸ್ಯೆಗೆ ಶಾಶ್ವತ ಪರಿಹಾರ, 191 ಸರ್ಕಾರಿ ಪದವಿ ಕಾಲೇಜುಗಳ ಸ್ಥಾಪನೆ, ಸರ್ಕಾರಿ ಇಂಜನಿಯರಿಂಗ್ ಕಾಲೇಜಗಳು, ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ಪಶುವೈದ್ಯಕೀಯ, ಕೃಷಿ, ತೋಟಗಾರಿಕೆ, ಕಾನೂನು, ಸಂಗೀತ, ಜಾನಪದ ಹಾಗೂ ಸಂಸ್ಕೃತ ವಿಶ್ವವಿದ್ಯಾನಿಲಯಗಳ ಸ್ಥಾಪನೆ, ಜ್ಞಾನ ಆಯೋಗದ ರಚನೆ, ಕೌಶಲ್ಯ ಆಯೋಗದ ರಚನೆ ಹಾಗೂ ಇನ್ನಿತರ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿರುವುದು ನಮ್ಮ ಸರ್ಕಾರದ ಸಾಧನೆ.

ನೈರುತ್ಯ ಶಿಕ್ಷಕ ಹಾಗೂ ನೈರುತ್ಯ ಪದವೀಧರ ಕ್ಷೇತ್ರವು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲೂಕಿನ ವ್ಯಾಪ್ತಿಯನ್ನು ಹೊಂದಿದ್ದು ಇಡೀ ರಾಜ್ಯದಲ್ಲಿ ಗುಣಮಟ್ಟದ, ಶಿಸ್ತಿನ ಹಾಗೂ ಸಂಸ್ಕಾರಯುತ ಶಿಕ್ಷಣಕ್ಕೆ ಪ್ರಸಿದ್ಧವಾಗಿದೆ. ರಾಜ್ಯಮಟ್ಟದ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪರೀಕ್ಷೆಗಳಲ್ಲಿ ನಿರಂತರವಾಗಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಈ ಭಾಗದ ಶಿಕ್ಷಕ, ಉಪನ್ಯಾಸಕ ಬಂಧುಗಳು ಉತ್ತಮ ಶಿಕ್ಷಕರಾಗಿ ಶಿಸ್ತು, ಪ್ರಾಮಾಣಿಕತೆ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುವುದರಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಈ ಕ್ಷೇತ್ರದ ಶಿಕ್ಷಕ ಮತ್ತು ಪದವೀಧರ ಮತದಾರ ಬಂಧುಗಳು ರಾಜ್ಯದ ಬೇರೆ ಭಾಗದಲ್ಲಿ ಕಂಡು ಬರುವ ಪ್ರಲೋಭಗಳಿಗೆ ಮರುಳಾಗದೇ ಮೇಲ್ಮನೆಯ ಚುನಾವಣೆಯ ಘನತೆ ಗೌರವಗಳನ್ನು ಎತ್ತಿಹಿಡಿದು ರಾಜ್ಯಕ್ಕೆ ಮಾದರಿಯಾಗುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಕಳೆದ ಮೂರು-ನಾಲ್ಕೂ ದಶಕಗಳಿಂದ ಮೇಲ್ಮನೆಯ ಚುನಾವಣೆಯಲ್ಲಿ ನಿರಂತರವಾಗಿ ಭಾರತೀಯ ಜನತಾ ಪಾರ್ಟಿಯ  ಅಭ್ಯರ್ಥಿಗಳಿಗೆ ಅಶಿರ್ವಾದ ಮಾಡಿರುವ ಶಿಕ್ಷಕ ಮತ್ತು ಪದವೀಧರ ಮತದಾರರನ್ನು ಅಭಿನಂದಿಸುತ್ತಾ ನಿಮ್ಮೆಲ್ಲರ ಸಹಕಾರವನ್ನು ಕೊರುತ್ತೇನೆ.

ನೈರುತ್ಯ ಶಿಕ್ಷಕ ಹಾಗೂ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ 5 ಜನ ಸಂಸದರು ಹಾಗೂ 30 ವಿಧಾನ ಸಭಾ ಕ್ಷೇತ್ರದಲ್ಲಿ 27 ಜನ ಶಾಸಕರು ಭಾರತೀಯ ಜನತಾ ಪಾರ್ಟಿಯಿಂದ ಆಯ್ಕೆಯಾಗಿರುವುದು ಈ ಭಾಗದ ಜನತೆ ನಮ್ಮ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ ಅಭಿಮಾನಗಳಿಗೆ ಸಾಕ್ಷಿಯಾಗಿದ್ದು, ಪರಿವರ್ತನೆಯ ಈ ಕಾಲಘಟ್ಟದಲ್ಲಿ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಈ ಚುನಾವಣೆಯಲ್ಲಿ ತಮ್ಮ ಪ್ರಥಮ ಪ್ರಾಶಸ್ತ್ಯದ ಮತವನ್ನು ನನಗೆ ನೀಡಿ ನನ್ನನ್ನು ನೈರುತ್ಯ ಶಿಕ್ಷಕ ಕ್ಷೇತ್ರದ ಪ್ರತಿನಿಧಿಯಾಗಿ ಆಯ್ಕೆಮಾಡಬೇಕೆಂದು ಹಾಗೂ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಶ್ರೀ ಆಯನೂರು ಮಂಜುನಾಥರವರನ್ನು  ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಬೇಕಾಗಿ ತಮ್ಮ ಮೂಲಕ ಮತದಾರರನ್ನು ವಿನಂತಿಸುತ್ತೇನೆ.


Spread the love

Exit mobile version