ವಿಧಾನಸಭಾ ಚುನವಾಣೆ, ಮತ ಎಣಿಕೆ ಪ್ರಯುಕ್ತ ಮದ್ಯಮಾರಾಟ ನಿಷೇಧ
ಮಂಗಳೂರು; ರಾಜ್ಯ ವಿಧಾನಸಭೆಗೆ ಮತದಾನ ಮೇ 12 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಶಾಂತಿಯುತ ಮತದಾನ ನಡೆಸಲು ಜಿಲ್ಲಾಡಳಿತ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದೆ.
ಚುನಾವಣೆಯ ವೇಳೆ ಮತದಾನವು ಮುಕ್ತ, ನಿಷ್ಪಕ್ಷಪಾತ, ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಪಾಲಿಸುವ ದಷ್ಟಿಯಿಂದ ಜಿಲ್ಲೆಯಾದ್ಯಂತ ಮೇ 10 ರ ಸಂಜೆ 6ಗಂಟೆಯಿಂದ ಮೇ 12 ರ ಸಂಜೆ 6 ಗಂಟೆಯವರೆಗೆ ಮತ್ತು ಮತ ಎಣಿಕೆಯ ಪ್ರಯುಕ್ತ ಮೇ 14ರ ಸಂಜೆ 6ರಿಂದ ಮದ್ಯರಾತ್ರಿ 12 ರವರೆಗೆ ಮದ್ಯ ಮಾರಾಟ ನಿಷೇಧ ಜಾರಿಗೊಳಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.