Home Mangalorean News Kannada News ವಿಧಾನ ಪರಿಷತ್ ಉಪಚುನಾವಣೆ – ಮತ ಎಣಿಕೆ ಆರಂಭ

ವಿಧಾನ ಪರಿಷತ್ ಉಪಚುನಾವಣೆ – ಮತ ಎಣಿಕೆ ಆರಂಭ

Spread the love

ವಿಧಾನ ಪರಿಷತ್ ಉಪಚುನಾವಣೆ – ಮತ ಎಣಿಕೆ ಆರಂಭ

ಮಂಗಳೂರು: ಕರಾವಳಿಯಲ್ಲಿ ನಡೆದ ವಿಧಾನ ಪರಿಷತ್ ಉಪಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ ನಗರದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭಗೊಂಡಿದೆ

ಬ್ಯಾಲೆಟ್ ಪೇಪರ್ ಮೂಲಕ ನಡೆದ ಮತದಾನ ಪ್ರಕ್ರಿಯೆಯ ಎಣಿಕೆಗೆ ಕಾಲೇಜಿನ ಒಂದು ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು ಮತ ಪತ್ರಗಳ ಎಣಿಕೆಗೆ 12 ಮೇಜುಗಳ ವ್ಯವಸ್ಥೆಗೊಳಿಸಲಾಗಿದೆ.

ಪ್ರತಿ ಮೇಜಿಗೆ ಒಬ್ಬ ಎಣಿಕೆ ಮೇಲ್ವಿಚಾರಕ, ಒಬ್ಬರು ಸಹಾಯಕರು ಮತ್ತು ಒಬ್ಬರು “ಡಿ” ಗ್ರೂಪ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು ಒಟ್ಟು 392 ಮತ ಪೆಟ್ಟಿಗೆಗಳನ್ನು ಪ್ರತಿ ಟೇಬಲ್ ಗೆ 33 ರಂತೆ ಮತಪೆಟ್ಟಿಗೆಗಳನ್ನು ಹಂಚಿಕೆ ಮಾಡಲಾಗಿದೆ.

ಉಭಯ ಜಿಲ್ಲೆಯಲ್ಲಿರುವ 6,032 ಮತದಾರ ಪೈಕಿ 5906 ಮತದಾರರಿಂದ ಮತದಾನ ಮಾಡಿದ್ದು ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ.

ಬಿಜೆಪಿಯಿಂದ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಪುತ್ತೂರು ಅಭ್ಯರ್ಥಿಯಾಗಿದ್ದು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು


Spread the love

Exit mobile version