ವಿರೋಧಗಳ ನಡುವೆಯೂ ಬೋಳೂರಿನಲ್ಲಿ ಕೋವಿಡ್ ನಿಂದ ಮೃತಪಟ್ಟ ಯುವಕನ ಅಂತ್ಯ ಸಂಸ್ಕಾರ

Spread the love

ವಿರೋಧಗಳ ನಡುವೆಯೂ ಬೋಳೂರಿನಲ್ಲಿ ಕೋವಿಡ್ ನಿಂದ ಮೃತಪಟ್ಟ ಯುವಕನ ಅಂತ್ಯ ಸಂಸ್ಕಾರ

ಮಂಗಳೂರು: ಹಲವಾರು ವಿರೋಧಗಳ ನಡುವೆಯೂ ಸಹ ಕೊರೊನಾ ಸೋಂಕಿಗೆ ಬಲಿಯಾಗಿ ಮೃತಪಟ್ಟ ಯುವಕನ ಅಂತ್ಯ ಸಂಸ್ಕಾರವನ್ನು ಬೋಳಾರ ಮಸೀದಿಯ ಆವರಣದಲ್ಲಿ ಭಾನುವಾರ ನೆರವೇರಿತು.

ಈ ಮೊದಲು ಮೃತದೇಹವನ್ನು ಇಡಿಯಾ ಮಸೀದಿಗೆ ಸೇರಿದ ಇಡಿಯಾ ಬರಿಯಲ್ ಮೈದಾನದಲ್ಲಿ ಹೂಳಲು ನಿರ್ಧರಿಸಲಾಗಿತ್ತು, ಆದರೆ ಮಳೆಯಿಂದಾಗಿ, ಅಗೆದ ಸಮಾಧಿಗಳಲ್ಲಿ ನೀರು ತುಂಬಿತ್ತು. ಆದ್ದರಿಂದ ಶವವನ್ನು ಬೋಳೂರು ಮಸೀದಿ ಸ್ಮಶಾನದಲ್ಲಿ ಹೂಳಲು ಸಮುದಾಯದ ಮುಖಂಡರು ನಿರ್ಧರಿಸಿದರು. ಶವವನ್ನು ಸ್ಮಶಾನಕ್ಕೆ ತಲುಪಿದಾಗ ಸ್ಥಳೀಯರು ಇದನ್ನು ವಿರೋಧಿಸಿದರು. ಆದ್ದರಿಂದ ಶವವನ್ನು ಮತ್ತೆ ಸಮಾಧಿಗಾಗಿ ಚೊಕ್ಕಬೆಟ್ಟಿಗೆ ಕೊಂಡೊಯ್ಯಲಾಯಿತು.

ಶವ ಚೊಕ್ಕಬೆಟ್ಟು ತಲುಪಿದಾಗ, ಜಿಲ್ಲಾಧಿಕಾರಿಗಳು ಮುಸ್ಲಿಮರ ಸಮಾಧಿ ಸ್ಥಳವನ್ನು ಈಗಾಗಲೇ ಗುರುತಿಸಿದ್ದರಿಂದ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಅವರು ಅಧಿಕಾರಿಗಳನ್ನು ಕರೆದು ಶವವನ್ನು ಮತ್ತೆ ಬೋಳೂರಿಗೆ ತರಲು ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಸೂಚನೆಯಂತೆ, ಶವವನ್ನು ಸಮಾಧಿಗಾಗಿ ಮತ್ತೆ ಬೋಳೂರಿಗೆ ತಂದು ಶವ ಸಂಸ್ಕಾರವನ್ನು ನಡೆಸಲಾಯಿತು.


Spread the love