ವಿವೇಕಾನಂದ ತರಬೇತಿ ಕೇಂದ್ರ ಶೈಕ್ಷಣಿಕ ವರ್ಷದ ಉದ್ಘಾಟನೆ ಮತ್ತು ಬಡವಿದ್ಯಾರ್ಥಿಗಳಿಗೆ ಉಚಿತ ಶಾಲಾ ಸಾಮಗ್ರಿಗಳ ವಿತರಣೆ

Spread the love

ಮಂಗಳೂರು: ವಿವೇಕಾನಂದ ತರಬೇತಿ ಕೇಂದ್ರ (ಉಚಿತ ತರಬೇತಿ ಕೇಂದ್ರ) ದ  ‘ನೂತನ ಶೈಕ್ಷಣಿಕ ವರ್ಷದ ಉದ್ಘಾಟನೆ ಮತ್ತು ಬಡವಿದ್ಯಾರ್ಥಿಗಳಿಗೆ ಉಚಿತ ಶಾಲಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ’ ವನ್ನು  ಆದಿತ್ಯವಾರದಂದು  ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಿಷನ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು

 

ramakrishna_mission ramakrishna_mission-001 ramakrishna_mission-002 ramakrishna_mission-003

ಕಾರ್ಯಕ್ರಮವನ್ನು  ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿಯವರ ದಿವ್ಯ ಉಪಸ್ಥಿತಿಯಲ್ಲಿ ಆಲ್ ಕಾರ್ಗೊ ಲೊಜಿಸ್ಟಿಕ್ಸ್ ಮಂಗಳೂರು ವಿಭಾಗದ ಪ್ರಬಂಧಕರಾದ ಶ್ರೀ ನಕ್ರೆ ಸುರೇಂದ್ರ ಶೆಟ್ಟಿ ಅವರು ಉದ್ಘಾಟಿಸಿ ಶುಭ ಹಾರೈಸಿದರು ಮತ್ತು ಶಾಲಾ ಚೀಲ, ಸಮವಸ್ತ್ರ, ನೋಟ್‍ಪುಸ್ತಕಗಳು, ಹಾಗೂ ಇತರೆ ಶಾಲಾ ಸಾಮಗ್ರಿಗಳನ್ನು ವಿತರಿಸಿದರು. ಆಶ್ರಮವು ಸುಮಾರು ರೂ. 1 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಶಾಲಾಸಾಮಗ್ರಿಗಳನ್ನು 150 ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ವಿತರಿಸಿರುತ್ತದೆ.

ವಿವೇಕಾನಂದ ತರಬೇತಿ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ವಿಜಯಲಕ್ಷ್ಮಿ ಅವರು ವಾರ್ಷಿಕ ವರದಿಯನ್ನು ವಾಚಿಸಿದರು. ಶ್ರೀ ಸಂತೋಷ್ ಅಳ್ವ ಕಾರ್ಯಕ್ರಮವನ್ನು ನಿರೂಪಿಸಿದರು.


Spread the love