ವಿವೇಕ ಮತ್ತು ಧೈರ್ಯದಿಂದ ಅಡೆತಡೆಗಳನ್ನು ಎದುರಿಸಿ ನ್ಯಾಯಕ್ಕಾಗಿ ಎದ್ದೇಳಿರಿ: ಮೌಲಾನ ಖಲೀಲುರ್ರಹ್ಮಾನ್ ಸಜ್ಜಾದ್ ನುಮಾನಿ

Spread the love

 ವಿವೇಕ ಮತ್ತು ಧೈರ್ಯದಿಂದ ಅಡೆತಡೆಗಳನ್ನು ಎದುರಿಸಿ ನ್ಯಾಯಕ್ಕಾಗಿ ಎದ್ದೇಳಿರಿ: ಮೌಲಾನ ಖಲೀಲುರ್ರಹ್ಮಾನ್ ಸಜ್ಜಾದ್ ನುಮಾನಿ

ದೇಶದಲ್ಲಿ ಭಯ ಮತ್ತು ಅಭದ್ರತೆ ನೆಲೆಗೊಳ್ಳುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮುಸ್ಲಿಮ್ ಸಮುದಾಯವು ವಿವೇಚನೆ ಮತ್ತು ಧೈರ್ಯದಿಂದ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಳ್ಳಬೇಕು ಎಂದು ಪ್ರಭಾವೀ ವಿದ್ವಾಂಸ, ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ನ ಕಾರ್ಯಕಾರಿ ಸಮಿತಿಯ ಸದಸ್ಯ ಮೌಲಾನ ಖಲೀಲುರ್ರಹ್ಮಾನ್ ಸಜ್ಜಾದ್ ನುಮಾನಿ ಕರೆ ನೀಡಿದ್ದಾರೆ. ಅವರು ಹೊಸದಿಲ್ಲಿಯಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಧಾನ ಕಚೇರಿಯಲ್ಲಿ ನಡೆಯುವ ಮಾಸಿಕ ತರಗತಿ( ಪಾಪ್ಯುಲರ್ ಲೆಕ್ಚರ್) ಯಲ್ಲಿ ಉಪನ್ಯಾಸ ನೀಡುತ್ತಿದ್ದರು. “ಇಸ್ಲಾಮಿನ ದೃಷ್ಟಿಕೋನದಲ್ಲಿ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ” ಎಂಬ ವಿಷಯದಡಿ ಆಯೋಜಿಸಲಾದ ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಮಹಿಳೆಯರು ಸೇರಿದಂತೆ ಹಲವು ಮಂದಿ ಆಹ್ವಾನಿತರು ಭಾಗವಹಿಸಿದ್ದರು.

ನಾವು ಇಂದು ಧರ್ಮದ ಅನುಸರಣೆ ಎಂದರೆ ಕೇವಲ ಪ್ರಾರ್ಥನೆ ಮತ್ತು ಉಪವಾಸ ಮುಂತಾದ ಆರಾಧನಾ ಕರ್ಮಗಳಿಗೆ ಮಾತ್ರ ಸೀಮಿತಗೊಳಿಸಿದ್ದೇವೆ. ಆದರೆ ಕೇವಲ ಅದರಿಂದ (ಇಬಾದತ್) ಮಾತ್ರ ಓರ್ವ ಮುಸ್ಲಿಮನ ಜವಾಬ್ಧಾರಿಯನ್ನು ಪರಿಪೂರ್ಣಗೊಳ್ಳುವುದಿಲ್ಲ. ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಶಕ್ತಿಮೀರಿ ಪ್ರಯತ್ನಿಸುವುದು ನಮ್ಮ ಕರ್ತವ್ಯಗಳ ಒಂದು ಭಾಗವಾಗಿದೆ ಎಂದು ಮೌಲಾನ ಹೇಳಿದರು. ಜನರನ್ನು ಮನುಷ್ಯನ ಗುಲಾಮತ್ವದಿಂದ ಸೃಷ್ಟಿಕರ್ತನ ದಾಸನಾಗುವ ಕಡೆಗೆ ಮುನ್ನಡೆಸುವುದು ಮುಸ್ಲಿಮರಾಗಿದ್ದುಕೊಂಡು ನಮ್ಮ ಹೊಣೆಗಾರಿಕೆಯಾಗಿದೆ. ನಾವು ನಮ್ಮ ಜೀವನ ಶೈಲಿಯನ್ನು ಮತ್ತು ವ್ಯಕ್ತಿತ್ವವನ್ನು ದೈವಿಕ ಸಿದ್ಧಾಂತಗಳ ಪ್ರಕಾರ ರೂಪಿಸಿಕೊಳ್ಳಬೇಕು. ಇದರಿಂದಾಗಿ ಜನರು ನಮ್ಮ ಗುಣಗಳನ್ನು ಕಂಡು ಇಸ್ಲಾಮನ್ನು ಅರಿಯುವಂತಾಗುತ್ತದೆ. ಜನರ ಬಳಿ ಇದ್ದುಕೊಂಡು ಅವರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಸಮಯವಿದು. ಒಂದು ವೇಳೆ ನಾವು ಕೋಮುವಾದ ಮತ್ತು ಕಾರ್ಪೊರೇಟ್ ಫ್ಯಾಶಿಸಮ್ ವಿರುದ್ಧ ಹೋರಾಡಲು ಸಿದ್ಧರಾಗದಿದ್ದರೆ; ಕಾಲದ ಬೇಡಿಕೆಯಂತಿರುವ ಈ ದೌತ್ಯವನ್ನು ನಿರ್ವಹಿಸಲು ನಮ್ಮ ಬದಲಿಗೆ ಅಲ್ಲಾಹನು ಹೋರಾಟಕ್ಕೆ ಸಿದ್ಧರಿರುವ ಇನ್ನೊಂದು ಜನರ ಗುಂಪನ್ನು ಇಲ್ಲಿ ನಿಯೋಜಿಸುವನು. ಆದರೆ ನಾವು  ತೀರಾ ನಿರಾಸೆಗೊಳಗಾಗಬಾರದು ಮತ್ತು ಮಿತಿಮೀರಿದ ಉದ್ವೇಗಕ್ಕೂ ಒಳಗಾಗಬಾರದು. ಹಿಮ್ಮತ್ (ಧೈರ್ಯ) ಮತ್ತು ಹಿಕ್ಮತ್ (ತಂತ್ರಗಾರಿಕೆ)  ಎಂಬುದು ಮಾನವನ ಅವಳಿ ಸೌಲಭ್ಯಗಳಾಗಿದ್ದು ಅದನ್ನು ಪ್ರಸಕ್ತ ಮುಸ್ಲಿಮರು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಬೇಕಾಗಿದೆ.

ಮೌಲಾನಾ ಅಸಮತೋಲನಗಳನ್ನು ಮತ್ತಷ್ಟು ಹಿಡಿದಿಡುವ ನಿಕಟ ಬಂಡವಾಳಶಾಹಿ ನೀತಿಗಳನ್ನು ಟೀಕಿಸಿದರು. “ನಾವು ಸಣ್ಣ ವಸ್ತುಗಳನ್ನು ಕೂಡ ಖರೀದಿಸಿದಾಗ, ನಾವು ಕಷ್ಟಪಟ್ಟು ಗಳಿಸಿದ ಹಣವನ್ನು ತೆರಿಗೆಯಾಗಿ ನಾವು ಪಾವತಿಸಬೇಕಾಗಿದೆ ಮತ್ತು ಹಣವು ಅಂತಿಮವಾಗಿ ಕಾರ್ಪೋರೆಟ್ಗಳನ್ನು ಅಲಂಕರಿಸಲು ಹೋಗುತ್ತಿದೆ.  ಒಂದು ವೇಳೆ ನಮ್ಮ ದೇಹದಲ್ಲಿನ  ಅಂಗವು ದಪ್ಪವಾಗಿದ್ದರೆ, ಅದು ನಮ್ಮ ಆರೋಗ್ಯದ ಸಂಕೇತವಲ್ಲ; ಬದಲಿಗೆ ಇದು ರೋಗದ ಲಕ್ಷಣವಾಗಿದೆ. ಅದೇ ರೀತಿ, ಅಸಮಾನ ಮತ್ತು ಅನೈತಿಕ ಅಭಿವೃದ್ಧಿ ಮಾದರಿಯಿಂದ ಶ್ರೀಮಂತ ಜನರು ಶ್ರೀಮಂತರೂ ಮತ್ತು ಬಡವರು ಮತ್ತಷ್ಟು  ಬಡವರಾಗುತ್ತಿದ್ದಾರೆ.

ದೇಶದ ಸಂಪತ್ತು ನಿಯಂತ್ರಿಸುವ ಶ್ರೀಮಂತ ಕಾರ್ಪೊರೇಟ್ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಮಾತ್ರ ಸರಕಾರ ಪೂರೈಸುತ್ತಿದ್ದು, ದೇಶದಲ್ಲಿನ ಬಹುಪಾಲು ಜನರ ಜೀವನೋಪಾಯದ ಮೂಲಭೂತ ವಿಧಾನಗಳನ್ನು ಸಹ ನಿರಾಕರಿಸುತ್ತಿದೆ. ಈ ವಾಸ್ತವಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು, ಸರಕಾರವು ಉದ್ದೇಶಪೂರ್ವಕವಾಗಿ ಗೋ ರಕ್ಷಣೆ ಮತ್ತು ಕಪ್ಪು ಹಣವನ್ನು ಬೇಟೆಯಾಡುವಂತಹ ವಿಚಾರಗಳನ್ನು ಸೃಷ್ಟಿಸಿ ಜನರು ಇದರಲ್ಲೇ ನಿರತರಾಗಿರುವಂತೆ ನೋಡಿಕೊಳ್ಳುತ್ತಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಇ.ಎಂ.ಅಬ್ದುಲ್ ರಹಿಮಾನ್ ವಹಿಸಿದ್ದರು. ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಅನೀಶ್ ಅಹಮದ್ ಕಾರ್ಯಕ್ರಮವನ್ನು ನಿರೂಪಿಸಿದರು.  ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಫಿ ಅತಿಥಿಗಳನ್ನು ಪರಿಚಯಿಸಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೆಹಲಿ ರಾಜ್ಯಾಧ್ಯಕ್ಷರು ಪರ್ವೇಝ್ ಅಹಮದ್ ಮತ್ತು  ಕಾರ್ಯದರ್ಶಿ  ಗುಲ್ಫಾಮ್ ಹುಸೈನ್  ಕಾರ್ಯಕ್ರಮದ ಸ್ವಾಗತ ಭಾಷಣ ಮತ್ತು ಧನ್ಯವಾದ ಕಾರ್ಯಕ್ರಮವನ್ನು ನೆರವೇರಿಸಿದರು.

 


Spread the love