ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅನುಕಂಪದ ಬದಲು ಅವಕಾಶ ನೀಡಬೇಕು – ವಂ|ಡೆನಿಸ್ ಡೆಸಾ

Spread the love

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅನುಕಂಪದ ಬದಲು ಅವಕಾಶ ನೀಡಬೇಕು – ವಂ|ಡೆನಿಸ್ ಡೆಸಾ

ಮಲ್ಪೆ: ವಿಶೇಷ ಅಗತ್ಯವುಳ್ಳ ಮಕ್ಕಳು ಎಂದಿಗೂ ಹೊರೆಯಲ್ಲ ಅವರಿಗೆ ಸೂಕ್ತ ಪ್ರೋತ್ಸಾಹ ಬೆಂಬಲ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ಮೂಲಕ ಅವರೂ ಕೂಡ ಸಮಾಜದ ಆಸ್ತಿಯಾಗಿಸಲು ಸಾಧ್ಯವಿದೆ ಎಂದು ತೊಟ್ಟಂ ಸಂತ ಅನ್ನಮ್ಮ ದೇವಾಲದಯ ಧರ್ಮಗುರು ವಂ|ಡೆನಿಸ್ ಡೆಸಾ ಹೇಳಿದರು.

ಅವರು ಗುರುವಾರು ನೇಜಾರು ಸ್ಪಂದನ ವಿಶೇಷ ಶಾಲೆಯಲ್ಲಿ ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ಇದರ ವತಿಯಿಂದ ಆಯೋಜಿಸಲಾಗಿದ್ದ ಸರ್ವಧರ್ಮ ದೀಪಾವಳಿ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ವಿಶೇಷ ಅಗತ್ಯವುಳ್ಳ ಮಕ್ಕಳು ಬೆಳಗುವ ದೀಪಗಳಂತೆ. ದೀಪಕ್ಕೆ ಎಣ್ಣೆ ಹೇಗೆ ಅಗತ್ಯವೋ ಅಂತೆಯೇ ಈ ಮಕ್ಕಳಿಗೆ ಅನುಕಂಪ ತೋರುವ ಬದಲು ಅವಕಾಶ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತಂದಾಗ ಪ್ರಕಾಶಮಾನವಾಗಿ ತಮ್ಮ ಪ್ರತಿಭೆಗಳನ್ನು ಬೆಳಗಿಸಲು ಸಾಧ್ಯವಿದೆ.

ವಿಶೇಷ ಅಗತ್ಯತೆವುಳ್ಳ ಮಕ್ಕಳ ಪಾಲನೆ, ಕಲಿಕೆ ಸುಲಭದ ಕೆಲಸವಲ್ಲ ಅವರ ಅಗತ್ಯತೆಗೆ ತಕ್ಕಂತೆ ಅವರನ್ನು ಸಮಾಜದಲ್ಲಿ ಬೆಳೆಯಲು ಅವಕಾಶವನ್ನು ನೀಡಿ ಈ ಮೂಲಕ ಅವರೂ ಕೂಡ ಇತರರಂತೆ ಸಾಧನೆ ತೋರುವ ನಿಟ್ಟಿನಲ್ಲಿ ಸ್ಪಂದನಾ ಸಂಸ್ಥೆ ಮಾಡುತ್ತಿರುವ ಸೇವೆಗೆ ಬೆಲೆಕಟ್ಟಲು ಸಾಧ್ಯವಿಲ್ಲ

ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ಅಧ್ಯಕ್ಷರಾದ ರಮೇಶ್ ತಿಂಗಳಾಯರವರು ಮಾತನಾಡಿ ಬಾಹ್ಯ ಆಡಂಬರದ ಆಚರಣೆಗಿಂತ ಇವತ್ತಿನ ಆಚರಣೆ ಬಲು ಅರ್ಥಪೂರ್ಣ. ಇಲ್ಲಿ ಸೇವೆ ನೀಡುವ ಉಮೇಶ್ ಹಾಗೂ ತಂಡದವರ ಕೆಲಸ ತುಂಬಾ ಶ್ಲಾಘನೀಯ ಎಂದರು.

ಇದೇ ವೇಳೆ ಸಮಿತಿಯ ವತಿಯಿಂದ ಸ್ಪಂದನಾ ಸಂಸ್ಥೆಗೆ ರೂ 10 ಸಾವಿರ ಮೌಲ್ಯದ ದಿನಸಿ ವಸ್ತಗಳನ್ನು ಜೊತೆಗೆ ರೂ ಹತ್ತು ಸಾವಿರ ನಗದು ಹಣವನ್ನು ನೀಡಲಾಯಿತು. ವಿಶೇಷ ಮಕ್ಕಳಿಗಾಗಿ ಮನೋರಂಜನೆಯ ಆಟಗಳನ್ನು ಸಿಸ್ಟರ್ ಸುಶ್ಮಾ ನಡೆಸಿದರು.

ಕಾರ್ಯಕ್ರಮದಲ್ಲಿ, ಸಮನ್ವಯ ಸಮಿತಿಯ ಉಪಾಧ್ಯಕ್ಷರಾದ ಆಗ್ನೆಲ್ ಫೆರ್ನಾಂಡಿಸ್, ಶಬೀರ್, ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸುನೀಲ್ ಫೆರ್ನಾಂಡಿಸ್ ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ , ತೊಟ್ಟಂ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಸುಶ್ಮಾ , ಸಿಸ್ಟರ್ ಪ್ರೀಯಾ , ಸಿ ಮರೀನಾ, ವನಿತಾ ಫೆರ್ನಾಂಡಿಸ್ ರಾಮಪ್ಪ ಸುವರ್ಣ, ಗಣೇಶ್ ಕುಂದರ್, ವಿಲಾಸ್ ಸುವರ್ಣ, ಹರೀಶ್, ವತ್ಸಲಾ, ಬಿಲಾಲ್ ಸಾಹೇಬ್, ಅನ್ವರ್ ಸಾಹೇಬ್, ವಾಸಿಮ್ ಸಾಹೇಬ್ ಹಾಗೂ ಇತರರು ಉಪಸ್ಥಿತರಿದ್ದರು

ಲೆಸ್ಲಿ ಲವೀನಾ ಆರೋಝಾ ಪ್ರಾರ್ಥನೆ ನೆರವೇರಿಸಿದರೆ, ಸ್ವಂದನ ಮ್ಯಾನೆಜಿಂಗ್ ಟ್ರಸ್ಟಿ ಉಮೇಶ್ ಸ್ವಾಗತಿಸಿದರು. ಲೆಸ್ಲಿ ಆರೋಜಾ ಧನ್ಯವಾದವಿತ್ತರು.


Spread the love