Home Mangalorean News Kannada News ವಿಶ್ವ ಎಂಡಿಆರ್‍ಟಿ ಮಹಾಸಭೆಯ ಸಭಾಪತಿಯಾಗಿ ಡಾ| ಆರ್.ಕೆ.ಶೆಟ್ಟಿ ಆಯ್ಕೆ

ವಿಶ್ವ ಎಂಡಿಆರ್‍ಟಿ ಮಹಾಸಭೆಯ ಸಭಾಪತಿಯಾಗಿ ಡಾ| ಆರ್.ಕೆ.ಶೆಟ್ಟಿ ಆಯ್ಕೆ

Spread the love

ವಿಶ್ವ ಎಂಡಿಆರ್‍ಟಿ ಮಹಾಸಭೆಯ ಸಭಾಪತಿಯಾಗಿ ಡಾ| ಆರ್.ಕೆ.ಶೆಟ್ಟಿ ಆಯ್ಕೆ
ಮುಂಬಯಿ: ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಬಯಿನ ಹೆಸರಾಂತ ಸಮಾಜ ಸೇವಕ, ಸಾಮಾಜಿಕ ವಲಯದ ಜನಪ್ರಿಯ ಸಮಾಜ ಸೇವಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಣಕಾಸು ತಜ್ಞ, ಡಾ| ಆರ್.ಕೆ ಶೆಟ್ಟಿ ಅವರು ಮತ್ತೆ ಈ ಬಾರಿ ಅಮೇರಿಕಾದ ಫ್ಲೋರಿಡಾ ಅಲ್ಲಿನ ಓರ್‍ಲ್ಯಾಂಡೋದಲ್ಲಿ ನಡೆಯಲಿರುವ ಜಾಗತಿಕ ಮಿಲಿಯನ್ ಡಾಲರ್ ರೌಡ್ ತೇಬಲ್ (ಎಂಡಿಆರ್‍ಟಿ) ಆಥಿರ್üಕ ತಜ್ಞರ ಮಹಾಸಭೆಯ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ.

ಇದೇ ಜೂನ್.07 ಬುಧವಾರ ಲ್ಲಿ ನಡೆಯಲಿರುವ ಸಮಾವೇಶದಲ್ಲಿ ವಿಶೇಷ ಬಾಷಣಕಾರರಾಗಿ (ಸ್ಪೀಕರ್) ಪಾಲ್ಗೊಂಡು `ಆರ್ಥಿಕ ವ್ಯವಹಾರದಲ್ಲಿ ಹೇಗೆ ತುದಿಗೇರುವುದು ಮತ್ತು ಅಲ್ಲೇ ಹೇಗೆ ವಾಸ್ತವ್ಯವಾಗುವುದು’ ವಿಷಯದಲ್ಲಿ ಸಮಾವೇಶವನ್ನುದ್ದೇಶಿಸಿ ಡಾ| ಶೆಟ್ಟಿ ಮಾತನಾಡಲಿದ್ದಾರೆ.

ಅಂತರಾಷ್ಟ್ರೀಯ ಆಥಿರ್üಕ ತಜ್ಞರ ಸಭೆಯಲ್ಲಿ ವಿಶೇಷ ತರಬೇತುದಾರರಾಗಿ ಭಾಗವಹಿಸಿದ್ದ ಡಾ| ಆರ್‍ಕೆಎಸ್ ಅವರ ಅತ್ಯಾದ್ಭುತ ಪಾಂಡಿತ್ಯ ಹಾಗೂ ವಾಕ್ಚಾತುರ್ಯತೆ ಪ್ರಶಂಸಿಸಿದ ಎಂಡಿಆರ್‍ಟಿ ಮಂಡಳಿ ಈ ಹಿಂದೆಯೂ ಹೆಗ್ಗಳಿಕೆಯೊಂದಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಿದ ಪ್ರಪ್ರಥಮ ಭಾರತೀಯನಾಗಿದ್ದಾರೆ. ಪ್ರಭಾವಿ ಭಾಷಣಕಾರರಾಗಿ ಗುರುತಿಸಲ್ಪಟ್ಟಿರುವ ಇವರು ತನ್ನ ಜ್ಞಾನ ಮತ್ತು ಕೌಶಲ್ಯವನ್ನು ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಹಂಚಿಕೊಂಡು ರಾಷ್ಟ್ರದ ಏಕೈಕ ಆರ್ಥಿಕ ಸಂಪನ್ಮೂಲ ವ್ಯಕ್ತಿ ಎಂದೆಣಿಸಿರುವುದು ಭಾರತೀಯರ ಹೆಮ್ಮೆಯಾಗಿದೆ. ತನ್ನ ಸಾಧನೆಗಳ ಜಗತ್ತಿನ ಅತ್ಯುನ್ನತ ಹಾಗೂ ಶ್ರೇಷ್ಠ ಆರ್ಥಿಕ ತಜ್ಞರ ಸಂಘಟನೆ ಆಗಿರುವ ಅಮೇರಿಕಾದ ಸಂಸ್ಥೆಯಲ್ಲಿ ಡಾ| ಆರ್‍ಕೆಎಸ್ ಕಳೆದ ಸುಮಾರು ಎರಡುವರೆ ದಶಕಗಳಿಂದ ಸದಸ್ಯರಾಗಿ ಸೆವಾ ನಿರತರಾಗಿದ್ದಾರೆ. ಎಲ್ಲೈಸಿ ಆಫ್ ಇಂಡಿಯಾದ ಪ್ರತಿಷ್ಠಿತ ಕ್ಲಬ್‍ನ ಸದಸ್ಯತನ ಪಡೆದ ಡಾ| ಶೆಟ್ಟಿ ಅಮೇರಿಕಾದ ಕಾಲೇಜ್‍ನಿಂದ ಎಲ್‍ಯುಟಿಸಿಎಫ್‍ನ ಪದವಿಧರಾರಗಿ ಸುಮಾರು ಇಪ್ಪತ್ತು ವರುಷಗಳಿಂದ ಎಂಡಿಆರ್‍ಟಿ ಸದಸ್ಯತ್ವ ಪಡೆದಿದ್ದಾರೆ.

ಔದ್ಯೋಗಿಕ ಮತ್ತು ಸಮಾಜ ಸೇವೆಯ ವಿವಿಧ ಸ್ತರಗಳಲ್ಲಿ ಸಾಧನೆಗಳ ಶಿಖರವೇರಿ ನಿಂತಿರುವ, ಅಂತರಾಷ್ಟ್ರೀಯ ಖ್ಯಾತಿಯ ಆಥಿರ್üಕ ತಜ್ಞ, ತುಳು ಕನ್ನಡಿಗ ಡಾ| ಆರ್.ಕೆ.ಶೆಟ್ಟಿ (ರಾಧಾಕೃಷ್ಣ ಕೃಷ್ಣ ಶೆಟ್ಟಿ) ಕರ್ನಾಟಕದ ಚಿಕ್ಕಮಂಗಳೂರಿನ ಕಂಬಿಹಳ್ಳಿಯಲ್ಲಿ ಕೃಷ್ಣ ಕೆ.ಶೆಟ್ಟಿ ಮತ್ತು ಅಪ್ಪಿ ಕೆ.ಶೆಟ್ಟಿ ದಂಪತಿ ಸುಪುತ್ರರು. ಸದಾ ಹಸನ್ಮುಖಿಯಾಗಿದ್ದು ಸರಳ ಸಜ್ಜನಿಕೆಯ ನೇರ ನಡೆನುಡಿಯ ಅಜಾತ ಶತ್ರು ಎಂದೇ ಗುರುತಿಸಿ ಕೊಂಡಿರುವ ಡಾ| ಆರ್.ಕೆ ಶೆಟ್ಟಿ ಅರ್ಥಶಾಸ್ತ್ರದಲ್ಲಿನ ವಾಣಿಜ್ಯ ಪದವಿ ಗಳಿಸಿ ಹಣಕಾಸು ನಿರ್ವಹಣೆಯಲ್ಲಿ , ಅಮೇರಿಕಾದ ವಿಮಾ ಕಾಲೇಜಿನಿಂದ ಪದವಿಧರರಾಗಿರುವರು. ಪ್ರಪಂಚದ ಅತೀ ಶ್ರೇಷ್ಠರಲ್ಲಿ ಅಗ್ರಗಣ್ಯ ವಿತ್ತೀಯ ಸಲಹೆಗಾರ ಪರಮೋಚ್ಛ ಸಂಘಟನೆಯಾದ ಕೋರ್ಟ್ ಆಫ್ ಟೇಬಲ್‍ನ ಹಲವಾರು ಸಾಧನಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಂಡಿಆರ್‍ಟಿಯ ವಿಭಾಗೀಯ ಉಪಾಧ್ಯಕ್ಷ (ಡಿವಿಪಿ)ರಾಗಿ ಸೇವೆ ಸಲ್ಲಿಸಲಿರುವ ಭಾರತದ ಪ್ರಥಮ ಎಂಡಿಆರ್‍ಟಿ ಸದಸ್ಯರಾಗಿರುವ ಇವರು ಪ್ರಪಂಚದ ಅತ್ಯುನ್ನತ ಗೌರವದ ಟಾಪ್ ಆಫ್ ದಿ ಟೇಬಲ್ ಪ್ರಶಸ್ತಿಯನ್ನೂ ಮುಡಿಗೇರಿಸಿ ಕೊಂಡ ತುಳುಕನ್ನಡಿಗ. ಸಾಮಾಜಿಕ ಕಳಕಳಿಯನ್ನೂ ಹೊಂದಿ ತೆರೆಯ ಮರೆಯಲ್ಲಿದ್ದೇ ಕಾರ್ಯೋನ್ಮುಖರಾಗಿರುವರು. ಅಲ್ಲದೆ ಸಾವಿರಾರು ಜನರ ಬದುಕಿನ ಕನಸನ್ನು ಅವರೊಂದಿಗೆ ಹಂಚಿಕೊಳ್ಳುವ ಮೂಲಕ ತಮ್ಮ ಜೀವನದ ಯಶೋಗಾಥೆಯನ್ನು ಆರಂಭಿಸಿದ ಇವರು ತನ್ನ ಯಶಸ್ಸಿನ ಗುಟ್ಟನ್ನು ಕೇವಲ ಭಾರತೀಯ ನಿವಾಸಿಗಳು ಮಾತ್ರವಲ್ಲ ಇತರೇ ರಾಷ್ಟ್ರಗಳ ನಿವಾಸಿಗಳ ಜೊತೆ ಹಂಚಿಕೊಂಡಿರುವ ಸರ್ವೋನ್ನತ ಭಾರತಿಯರೂ, ಕರ್ನಾಟಕದ ನಿಷ್ಠಾವಂತ ಕನ್ನಡಿಗನಾಗಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತೌಳವ ಸುಪುತ್ರನಾಗಿ ಒಟ್ಟು ಕೀರ್ತಿಯನ್ನು ವಿಶ್ವಕ್ಕೆ ಪರಿಚಯಿಸಿ ತನ್ನ ಹಿರಿಮೆಯನ್ನು ಹೆಚ್ಚಿಸಿ ಕೊಂಡ ತುಳು-ಕನ್ನಡಿಗರಾಗಿದ್ದಾರೆ.

 


Spread the love

Exit mobile version