ವಿಶ್ವ ಕೊಂಕಣಿ ಕೇಂದ್ರದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ

Spread the love

ವಿಶ್ವ ಕೊಂಕಣಿ ಕೇಂದ್ರದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ

  • ಭಾಷೆಯ ಅಸ್ವಿತ್ವದ ಜತೆಗೆ ಅಭಿವೃದ್ಧಿ ಕಾರ್ಯವೂ ಮಹತ್ವದ್ದು : ಡಾ ಕಸ್ತೂರಿ ಮೋಹನ ಪೈ

ಮಂಗಳೂರು: ನೆರೆಯ ಗೋವಾದಲ್ಲಿ ರಾಜ್ಯ ಭಾಷೆಯ ಸ್ಥಾನ ಮಾನ ಪಡೆದಿರುವ ಕೊಂಕಣಿ ಭಾಷೆಯನ್ನು ನಾವು ಕೊಕಣಿ ಭಾಷಿಗರು ಮಾತನಾಡಿದರೆ, ಭಾ಼ಷೆ ಅಸ್ತಿತ್ವದಲ್ಲಿದ್ದರೆ ಸಾಲದು ಅದು ಅಭಿವೃದ್ಧಿಯ ಹಾದಿಯಲ್ಲಿ ನಿರಂತರ ಬೆಳೆದಾಗ ನಿಜವಾದ ಸಾರ್ಥಕತೆ ಎಂದು ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಡಾ.ಕಸ್ತೂರಿ ಮೋಹನ ಪೈ ಹೇಳಿದರು. ಅವರು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯ ಅಂಗವಾಗಿ ದಿ. 20-08-2024 ರಂದು ಜರುಗಿದ ಸಭಾ ಕಾರ್ಯಕ್ರಮದಲ್ಲಿ ರಾಷ್ಟç ಮಾನ್ಯತೆಯ ಕೊಂಕಣಿ ಕುರಿತು ಮಾತನಾಡಿದರು.

1992ರಲ್ಲಿ ರಾಷ್ಟçಭಾಷೆಯ ಮಾನ್ಯತೆ ದೊರೆತ ಬಳಿಕ ಶಾಲೆಗಳಲ್ಲಿ ಕೊಂಕಣಿ ಕಲಿಕೆ ದಶಕಗಳಿಂದ ಸಕ್ರಿಂiÀi ವಾಗಿದೆ. ಈಗ ಎಂ.ಎ. ಶಿಕ್ಷಣವನ್ನೂ ಪಡೆಯಬಹುದಾಗಿದೆ. ಪಠ್ಯ ರಚನೆ, ಮುದ್ರಣ, ಶಿಕ್ಷಣ ಎಲ್ಲವನ್ನೂ ವ್ಯವಸ್ಥೆ ಮಾಡಲಾಗಿದೆ. ಕೊಂಕಣಿ ಅಕಾಡೆಮಿಯ ಸ್ಥಾಪನೆಯ ಬಳಿಕ ವಿಶ್ವ ಕೊಂಕಣಿ ಕೇಂದ್ರದ ಸ್ಥಾಪನೆಯ ಮೂಲಕ ಕೊಂಕಣಿ ಚಟುವಟಿಕೆಯಲ್ಲಿ ನಿರಂತರತೆ ಕಾಯ್ದುಕೊಂಡಿರುವುದು ಕೊಂಕಣಿ ಭಾಷಿಗರ ಭಾಷಾ ಪ್ರೇಮ, ವಿಶ್ವಾಸ, ಮೈತ್ರಿ ಭಾವ, ಸಂಘಟನಾಶಕ್ತಿಯ ಪ್ರತೀಕವಾಗಿದೆ ಎಂದವರು ಆಭಿಪ್ರಾಯಪಟ್ಟರು.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ. ನಂದಗೋಪಾಲ್ ಶೆಣೈ ದೀಪಬೆಳಗಿಸಿ, ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ದೇಶದಲ್ಲಿ ಸಾವಿರಾರು ಅಧಿಕ ಭಾಷೆಗಳಿದ್ದರೂ ರಾಷ್ಟç ಭಾಷೆಯ ಮಾನ್ಯತೆಯ 22 ಭಾಷೆಗಳ ಪೈಕಿ ಕೊಂಕಣಿಯೂ ಸ್ಥಾನ ಪಡೆದಿದೆ. ಭಾಷೆಯಿಂದ ನಾವು ಏನಾಗಿದ್ದೇವೆ. ಆದರೆ ನಾವು ಭಾಷೆಗಾಗಿ ಏನು ಮಾಡಿದ್ದೇವೆ ಎನ್ನುವ ವಿಮರ್ಶೆಗೆ ಇದು ಸಕಾಲ ಎಂದವರು ಹೇಳಿದರು.

ಮಾನ್ಯತಾ ದಿನದ ಸಂಭ್ರಮದ ಹಿನ್ನೆಲೆಯಲ್ಲಿ ಭಾಷಾ ಮಾನ್ಯತೆಗೆ ಶ್ರಮಿಸಿದ ತಂಡದಲ್ಲಿದ್ದ ಕುಡ್ಪಿ ಜಗದೀಶ್ ಶೆಣೈ ಮತ್ತು ಗಿಲ್ಬರ್ಟ್ ಡಿ ಸೋಜಾ ಅವರನ್ನು ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಕೊಂಕಣಿ ಸಾಧಕರ ಕೀರ್ತಿ ಮಂದಿರದಲ್ಲಿ ದಿಯೋಗ್ ¨ಸ್ತಾö್ಯಂವ್ ಸಿದ್ಧಿ ಭಾವಚಿತ್ರವನ್ನು ಅವರ ಪತ್ನಿ ಮೇರಿ ಮಾರ್ಗರೆಟ್ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು ಹಾಜರಿದ್ದರು.

ಸಿದ್ದಿ ಸಮುದಾಯದ ಸಾವೇರ್ ಸಿದ್ಧಿ ಮಾತನಾಡಿ ಕೊಂಕಣಿ ಭಾಷಿಗ ಸಿದ್ಧಿ ಸಮುದಾಯದ ಭಾಷಾ ಶಬ್ದಗಳ ಸಂಗ್ರಹ ಕೋಶ ಯೋಜನೆಯ ಕನಸಿಗೆ ಎಲ್ಲರ ಸಹಕಾರ ಕೋರಿದರು.

ಕೊಂಕಣಿ ಎಂ.ಎ. ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತಲಾ ಹತ್ತು ಸಾವಿರ ರೂ.ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಅನಿವಾಸಿ ಭಾರತೀಯ ಸಂಘಟನೆಯಲ್ಲಿರುವ ಡಾ. ಆಸ್ಟಿನ್ ಡಿ ಸೋಜಾ ಪ್ರಭು, ಚಿಕಾಗೋದ ಸಪನ್ ಶೆಣೈ ದೇವಿಕಾ ಶೆಣೈ ಕ್ಯಾಲಿಫೋರ್ನಿಯಾದಿಂದ ನೀಡಿದ ಸಂದೇಶ ಪ್ರಸಾರ ಮಾಡಲಾಯಿತು.

ಶಿರಸಿಯ ನಿಸರ್ಗ ಸಾಂಸ್ಕೃತಿಕ ಕಲಾ ಟ್ರಸ್ಟ್ ಕೋಟೆ ಮನೆ ಇಲ್ಲಿನ ಲಕ್ಷಿö್ಮÃ ಸಿದ್ಧಿ ಮತ್ತು ಬಳಗದ ವತಿಯಿಂದ ಸಿದ್ಧಿ ಜಾನಪದ ನೃತ್ಯ ವೈವಿಧ್ಯ, ಬಜ್ಪೆ ಕುಡುಬಿ ಸಮಾಜ ಸೇವಾ ಸಂಘದ ಶೇಖರ ಗೌಡ ಮತ್ತು ಬಳಗದಿಂದ ಕುಡುಬಿ ಜಾನಪದ ನೃತ್ಯ ವೈವಿಧ್ಯ,ಮರೋಳಿ ಸಬಿತಾ ಕಾಮತ್ ತಂಡದವರಿAದ ಜಿ.ಎಸ್. ಬಿ ಸಮಾಜದ ನವವಧುವನ್ನು ಪತಿಯ ಮನೆಯವರು ಬರಮಾಡಿಕೊಳ್ಳುವ ಸಂಪ್ರದಾಯದ ಶೋಭಾನೆ ಗೀತೆಗಳ ಪ್ರದರ್ಶನ ನಡೆಯಿತು.

ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಗಿಲ್ಬರ್ಟ್ ಡಿ.ಸೋಜಾ ವಂದಿಸಿದರು. ವಿಶ್ವಸ್ಥ ಮಂಡಳಿಯ ವಿಶ್ವಸ್ಥ ಮಂಡಳಿಯ ಕೋಶಾಧಿಕಾರಿ ಬಿ.ಆರ್. ಭಟ್, ಡಿ. ರಮೇಶ್ ನಾಯಕ್, ಶಕುಂತಲಾ ಆರ್. ಕಿಣಿ, ಬ್ಯಾಂಕ ಆಫ್ ಮಹಾರಾಷ್ಟç ನಿವೃತ್ತ ಅಧಿಕಾರಿ ಅಲೆನ ಸಿ ಎ ಪಿರೆರಾ, ದಾಯ್ಜಿ ವಲ್ಡ ಮುಖ್ಯಸ್ಥ ಹೇಮಾಚರ‍್ಯ, ಪ್ರಭಾಕರ ಜೋಷಿ, ಸಿ.ಡಿ ಕಾಮತ, ಬಜ್ಪೆ ಕುಡುಬಿ ಸಮಾಜದ ಗುರಿಕಾರ ಮೋಹನ ಗೌಡ, ಸಿ.ಎ ಜಯಂತ ಶೆಣೈ ನಗರ, ಕೇಂದ್ರದ ಆಡಳಿತಾಧಿಕಾರಿ ಡಾ. ದೇವದಾಸ್ ಪೈ, ಉಪಸ್ಥಿತರಿದ್ದರು. ಸುಚಿತ್ರಾ ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು.


Spread the love