ವಿಶ್ವ ಕೊಂಕಣಿ ಸಾಹಿತ್ಯ ಸಮಾರೋಹ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ-2017
ಮಂಗಳೂರು : ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು ಸಂಸ್ಥೆ ಆಯೋಜಿಸುತ್ತಿರುವ ಸಾಹಿತ್ಯ ಸಮಾರೋಹವು ಎರಡು ದಿವಸಗಳು 2017 ಇದೇ ನವೆಂಬರ ತಿಂಗಳ ದಿ. 19 ಹಾಗೂ 20 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ದೇಶದ ಪ್ರಸಿದ್ಧ ಕನ್ನಡ ಭಾಷಾ ಮಕ್ಕಳ ಸಾಹಿತ್ಯ ಪಿತಾಮಹ ದಿ. ಪಂಜೆ ಮಂಗೇಶರಾವ್ ವೇದಿಕೆಯಲ್ಲಿ ಜರುಗಲಿರುವುದು. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಸಂಸ್ಥೆಗಳ ಸಹಯೋಗದೊಡನೆ ವಿಶ್ವ ಕೊಂಕಣಿ ಸಾಹಿತ್ಯ ಸಮಾರೋಹದ ಸಮಾರಂಭವು ಜರುಗಲಿದೆ.
ಖ್ಯಾತ ಕೊಂಕಣಿ ಸಾಹಿತಿಗಳು ಹಾಗೂ ಇತರ ಭಾಷಾ ಹೆಸರಾಂತ ವಿದ್ವಾಂಸರುಗಳು ಭಾಗವಹಿಸುವ ವಿವಿಧ ವಿಚಾರ ಗೋಷ್ಠಿಗಳು ಜರುಗುವವು. ನವೆಂಬರ 19 ರಂದು ಬೆಳಗ್ಗೆ ಮಂಗಳೂರು ವಿಶ್ವ ವಿದ್ಯಾನಿಲಯದ ಉಪ ಕುಲಪತಿಗಳಾದ ಪ್ರೊ. ಕೆ. ಭೈರಪ್ಪ ಮತ್ತು ಗೋವಾ ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಪ್ರೊ. ವರುಣ್ ಸಾಹನಿ ಹಾಗೂ ಕೇರಳದ ಖ್ಯಾತ ಮಳಯಾಳಂ ಬರಹಗಾರ ಶ್ರೀ ಎನ್. ಎಸ. ಮಾಧವನ್ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಾನ್ಯ ನಿರ್ದೇಶಕ ಶ್ರೀ ಎನ. ಆರ್. ವಿಶುಕುಮಾರ, ನವದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಭಾಷಾ ಸಂಚಾಲಕ ಡಾ. ತಾನಾಜಿ ಹಳರಣಕರ, ಗೋವಾ ವಿಶ್ವ ವಿದ್ಯಾನಿಲಯದ ಭಾಷಾ ಶಾಸ್ತ್ರ ಹಾಗೂ ಸಾಹಿತ್ಯ ವಿಭಾಗದ ಮಾಜಿ ಮುಖ್ಯಸ್ಥರಾದ ಡಾ. ಕಿರಣ್ ಬುಡ್ಕುಳೆ ಮೊದಲಾದ ಗಣ್ಯರು ಉಪಸ್ಥಿತರಿರುವರು.
ಅಲ್ಲದೇ ದಿ. 20-11-2017 ರಂದು ಸಂಜೆ 4.30 ಗಂಟೆಗೆ ಮಂಗಳೂರಿನ ಡೊಂಗರಕೇರಿ ಕೆನರಾ ಗಲ್ರ್ಸಹೈಸ್ಕೂಲ್ನ ಶ್ರೀ ಸುಧೀಂದ್ರ ಸಭಾ ಭವನದಲ್ಲಿ ವಿಶ್ವ ಕೊಂಕಣಿ ಕೇಂದ್ರದ -2017ರ ಸಾಲಿನ ‘ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ’ ಹಾಗೂ ‘ಶ್ರೀ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ’ ಪ್ರಶಸ್ತಿ ಪ್ರದಾನ ಸಮಾರಂಭವು ಜರುಗಲಿರುವುದು. ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಉಪ ಕುಲಪತಿ ಪ್ರೊ. ಬಿ. ಎ. ವಿವೇಕ ರೈ, ಮಣಿಪಾಲ ಗ್ಲೋಬಲ್ ಎಜುಕೇಶನ ಸಂಸ್ಥೆಯ ಚೆಯರ್ಮೆನ ಶ್ರೀ ಟಿ. ವಿ. ಮೋಹನದಾಸ ಪೈ, ಶ್ರೀಮತಿ ವಿಮಲಾ ವಿ. ಪೈ, ಬೆಂಗಳೂರು ಶ್ರೀ ಸಿದ್ಧಾರ್ಥ ಎಮ್. ಪೈ, ವಿಶ್ವ ಕೊಂಕಣಿ ಕೇಂದ್ರದ ಚೆಯರ್ಮೆನ ಡಾ. ಪಿ. ದಯಾನಂದ ಪೈ ಮೊದಲಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿರುವರು ಎಂದು ವಿಶ್ವ ಕೊಂಕಣಿ ಕೇಂದ್ರದ ಪ್ರಕಟಣೆ ತಿಳಿಸಿದೆ.