Home Mangalorean News Kannada News ವಿಹಿಂಪ ಕೈಕಂಬ ಅಧ್ಯಕ್ಷ ಹರೀಶ್ ಶೆಟ್ಟಿ ಮೇಲಿನ ಹಲ್ಲೆ – ಬಜರಂಗದಳ ಖಂಡನೆ

ವಿಹಿಂಪ ಕೈಕಂಬ ಅಧ್ಯಕ್ಷ ಹರೀಶ್ ಶೆಟ್ಟಿ ಮೇಲಿನ ಹಲ್ಲೆ – ಬಜರಂಗದಳ ಖಂಡನೆ

Spread the love
RedditLinkedinYoutubeEmailFacebook MessengerTelegramWhatsapp

ವಿಹಿಂಪ ಕೈಕಂಬ ಅಧ್ಯಕ್ಷ ಹರೀಶ್ ಶೆಟ್ಟಿ ಮೇಲಿನ ಹಲ್ಲೆ – ಬಜರಂಗದಳ ಖಂಡನೆ

ಮಂಗಳೂರು: ಗುರುಪುರ ಕೈಕಂಬದ ವಿಶ್ವಹಿಂದೂ ಪರಿಷದ್ ಅಧ್ಯಕ್ಷಾರದ ಹರೀಶ್ ಶೆಟ್ಟಿ ಮೇಲೆ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಘಟನೆಯನ್ನು ವಿಶ್ವ ಹಿಂದುಪರಿಷದ್ ಬಜರಂಗದಳ ಖಂಡಿಸಿದೆ.

ಕರ್ನಾಟಕದಲ್ಲಿ ನಿರಂತರ ಹಿಂದು ಕಾರ್ಯಕರ್ತರ ಕೊಲೆ ಹಾಗು ಮಾರಣಾಂತಿಕ ದಾಳಿಯ ಮುಂದುವರಿದ ಭಾಗ ಇದಾಗಿದ್ದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಕೂಡಲೇ ಎಚ್ಚೆತ್ತು ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕೆಂದು ವಿಶ್ವ ಹಿಂದುಪರಿಷದ್ ಬಜರಂಗದಳ ಒತ್ತಾಯಿಸಿದೆ.

ಈ ಕೃತ್ಯದಲ್ಲಿ ಭಾಗಿಯಾಗಿರುವ ಅಫರಾದಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಂಡು ಶಿಕ್ಷೆಗೆ ಗುರಿಪಡಿಸಬೇಕೆಂದು ವಿಶ್ವಹಿಂದೂ ಪರಿಷದ್ ಮಂಗಳೂರು ಜಿಲ್ಲಾಧ್ಯಕ್ಷರಾದ ಜಗದೀಶ್ ಶೇಣವ, ವಿಶ್ವಹಿಂದೂ ಪರಿಷದ್ ಮಂಗಳೂರು ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಹಾಗು ಮಂಗಳೂರು ಬಜರಂಗದಳ ಸಂಚಾಲಕ್ ಪ್ರವೀಣ್ ಕುತ್ತಾರ್ ಆಗ್ರಹಿಸಿದರು


Spread the love
RedditLinkedinYoutubeEmailFacebook MessengerTelegramWhatsapp

Exit mobile version