ವಿ.ವಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ
ಮ0ಗಳೂರು : ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು, ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವವು ಇತ್ತೀಚೆಗೆ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು. ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ನಿವೃತ್ತ ಪೋಲಿಸ್ ಸುಪರಿಡೆಂಟ್ ಆಗಿರುವ ಸನ್ಮಾನ್ಯ ಹರಿಶ್ಚಂದ್ರ ಪಿ. ಇವರು ಭಗವಿಸಿದ್ದರು. ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ.ಎ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಆರ್.ಲೋಹಿದಾಸ್ ಇವರು ವಾರ್ಷಿಕೋತ್ಸವ ವರದಿಯನ್ನು ಮಮಡಿಸಿದರು. ಸಂಘದ ಉಪಾಧ್ಯಕ್ಷ ಕರ್ನಲ್ ಶರತ್ ಭಂಡಾ, ಖಜಾಂಚಿ ಸಿ.ಎ. ರಾಮಮೋಹನ್ ರೈ, ಹಣಕಾಸಿನ ಸಮಿತಿ ಅಧ್ಯಕ್ಷ ಶುಭೋದಯ ಕೂಡ್ಲು, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಉಪಸ್ಥಿತರಿದ್ದರು. ನಿಟ್ಟೆ ಶಶಿಧರ ಶೆಟ್ಟಿ, ಜೊತೆ ಕಾರ್ಯದರ್ಶಿ ವಂದಿಸಿದರು.