Home Mangalorean News Kannada News ವಿ4 ನ್ಯೂಸ್ ಚಾನೆಲ್ ವತಿಯಿಂದ ಸಿಪಿಎಲ್ ಕಾಮಿಡಿ ರಿಯಾಲಿಟಿ ಶೋ

ವಿ4 ನ್ಯೂಸ್ ಚಾನೆಲ್ ವತಿಯಿಂದ ಸಿಪಿಎಲ್ ಕಾಮಿಡಿ ರಿಯಾಲಿಟಿ ಶೋ

Spread the love

ವಿ4 ನ್ಯೂಸ್ ಚಾನೆಲ್ ವತಿಯಿಂದ ಸಿಪಿಎಲ್ ಕಾಮಿಡಿ ರಿಯಾಲಿಟಿ ಶೋ

ಮಂಗಳೂರು: ವಿ4 ನ್ಯೂಸ್ ಚಾನೆಲ್ ಕಾಮಿಡಿ ಪ್ರಿಮಿಯರ್ ಲೀಗ್ ಯಾನೆ ಸಿಪಿಎಲ್ ಕಾಮಿಡಿ ರಿಯಾಲಿಟಿ ಶೋಗಾಗಿ ಸ್ಪರ್ಧೆ ಆಯೋಜಿಸಿದೆ.

ತುಳುನಾಡಿನ ಪರಿಚಿತ ಹಾಸ್ಯ ತಂಡಗಳು ಹೊಸ ತಂಡಗಳು, ಸಮಾನ ಸ್ಪರ್ಧೆಯನ್ನು ಒಡ್ಡುವ ರಿಯಲ್ ಮಿಕ್ಸ್ ಸಿಪಿಎಲ್ ಕಾಮಿಡಿ ರಿಯಾಲಿಟಿ ಶೋಗಾಗಿ ಮೆಗಾ ಅಡಿಶನ್ ನಲ್ಲಿ 25 ತಂಡಗಳು ಭಾಗವಹಿಸಿದ್ದವು. ಮೆಗಾ ಅಡಿಶನ್ ನಲ್ಲಿ ಫಿಲ್ಟರ್ ಮಾಡಿ 16 ಪ್ರಮುಖ ತಂಡವನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗಿದೆ.

ಮೆಗಾ ಆಡಿಷನ್ ನಲ್ಲಿ ಆಯ್ಕೆಯಾದ 16 ತಂಡಗಳ ನಡುವಿನ ಮುಖಾಮುಖಿ ಹೋರಾಟವೂ ಮುಗಿದಿದೆ,.ಈ ಸ್ಪರ್ಧೆಯಲ್ಲಿ ಆಯ್ಕೆಯಾದ 8 ತಂಡಗಳು, ಕಾಮಿಡಿ ಪ್ರಿಮಿಯರ್ ಲೀಗ್ ನ ಭಾಗವಾಗಿ ಮುಂದುವರಿಯಲಿವೆ. ನಿರಂತರ ಒಂದು ತಿಂಗಳು ರಿಯಲ್ ಮಿಕ್ಸ್ ಸಿಪಿಎಲ್ ಸ್ಪರ್ಧೆ ಮುಂದುವರಿಯಲಿವೆ.

ಸಿಪಿಎಲ್ ನಲ್ಲಿ ಭಾಗವಹಿಸುವ ತಂಡಗಳು 5 ಲಕ್ಷ ರೂ ಮೊತ್ತದ ಬಹುಮಾನ ಮತ್ತು ಗಿಫ್ಟ್ ಗಳನ್ನು ಪಡೆಯಲಿವೆ.
ಐಪಿಎಲ್, ಕೆಪಿಎಲ್ ಕ್ರಿಕೇಟ್ ಮ್ಯಾಚ್ ನಂತಿಯೇ ರಿಯಲ್ ಮಿಕ್ಸ್ ಸಿಪಿಎಲ್ ನಲ್ಲಿ ಕೊನೆಯ ಹಂತದವರೆಗೆ ಎಂಟೂ ತಂಡಗಳು ಸೆಣಸಾಡಲಿವೆ. ಪ್ರತಿ ಹಂತದ ಸ್ಪರ್ಧೆಯಲ್ಲೂ ಅಂಕಗಳನ್ನು ಕೊಡಲಾಗುತ್ತದೆ. ಯಾವ ತಂಡ ಹೆಚ್ಚು ಅಂಕಗಳನ್ನು ಗಳಿಸುತ್ತದೆಯೋ ಅದು ವಿಜಯಿ ಎಂದು ಘೋಷಿತವಾಗುತ್ತದೆ. ಕ್ರಿಕೆಟ್ ಮ್ಯಾಚ್ ನಂತೆಯೇ ತೀರ್ಪುಗಾರರು ಇಲ್ಲಿ ಒಂದು, ಎರಡು, ನಾಲ್ಕು, ಆರು ರನ್ ಗಳ ರೀತಿಯಲ್ಲಿಯೇ ಅಂಕಗಳನ್ನು ಕೊಡುತ್ತಾರೆ. ಈ ರನ್ನ್ ಗಳನ್ನು ಕೊಡುವ ಪ್ರಕ್ರಿಯೆ ಕಾಮಿಡಿ ಪ್ರದರ್ಶನವಾಗುವ ಹಂತದಲ್ಲಿ ಪಂಚಿಂಗ್ ಡೈಲಾಗ್, ಹಾವಭಾವವನ್ನು ಅವಲಂಬಿಸಿರುತ್ತದೆ. ಐಪಿಎಲ್, ಕೆಪಿಎಲ್ ಕ್ರಿಕೇಟ್ ನಲ್ಲಿ ತಂಡಕ್ಕೊಬ್ಬ ಮಾಲಕರಿರುವಂತೆ ರಿಯಲ್ ಮಿಕ್ಸ್ ಕಾಮಿಡಿ ಪ್ರಿಮಿಯರ್ ಲೀಗ್ ನಲ್ಲಿ ಮುಂದುವರಿಯುವ ಎಂಟು ತಂಡಗಳಿಗೂ ಮಾಲಕರನ್ನು ಒದಗಿಸುವ ಸಾಧ್ಯತೆಯ ಬಗ್ಗೆ ಚಿಂತಿಸಲಾಗುತ್ತಿದೆ.

ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಸಿಪಿಎಲ್ ವಿನೂತನ ಪ್ರಯೋಗ. ಒಂದು ಪ್ರದರ್ಶನದಲ್ಲಿ ವಿಫಲವಾಗುವ ತಂಡ ಮತ್ತೊಂದು ಪ್ರದರ್ಶನದ ಹೊತ್ತಿಗೆ ಪಿಕ್ಅಪ್ ಆಗುವ ಸಾಧ್ಯತೆ ಇದೆ. ಇಂತಹ ಸಾಧ್ಯತೆಯ ಅವಕಾಶಗಳು ರಿಯಲ್ ಮಿಕ್ಸ್ ಸಿಪಿಎಲ್ ನಲ್ಲಿ ತೆರೆದುಕೊಂಡಿವೆ. ನೈಜ ಪ್ರತಿಭಾವಂತರನ್ನು ಬೆಳಕಿಗೆ ತಂದು ಕಲಾಕ್ಷೇತ್ರಕ್ಕೆ ಕೊಡುಗೆ ಕೊಡುವ ಆಶಯವನ್ನು ವಿ4 ನ್ಯೂಸ್ ಚಾನೆಲ್ ಹೊಂದಿದೆ.

ಮೆಘಾ ಅಡೀಷನ್ನಲ್ಲಿ ತೀರ್ಪುಗಾರರರಾಗಿ ಮೈಮ್ ರಾಮ್ ದಾಸ್, ಸಾಹಿತಿ ಶಶಿರಾಜ್ ಕಾವೂರು, ನಟಿ ಆಶಿಕಾ ಸುವರ್ಣ ಕಾರ್ಯನಿರ್ವಸಿದ್ದಾರೆ.

ವಿಜೆ ವಿನಿತ್ ಮತ್ತು ಹಾಸ್ಯ ಕಲಾವಿದ ಪ್ರವೀಣ್ ಮರ್ಕಮೆ ನಿರೂಪಕರಾಗಿದ್ದಾರೆ.

ಸಿಪಿಎಲ್ ಕಾಮಿಡಿ ರಿಯಾಲಿಟಿ ಶೋಗೆ ಸಾರ್ವಜನಿಕರಿಗೆ ಮುಕ್ತ ಆಹ್ವಾನವಿದೆ. ಬೊಕ್ಕಪಟ್ಣದ ನ್ಯಾಶನಲ್ ಎಂಬಲ್ಲಿಂದ ಬೋಟ್ನಲ್ಲಿ ಹವಾನ ಐಲೆಂಡ್ಗೆ ಉಚಿತವಾಗಿ ಕರೆದೊಯ್ಯಲಾಗುತ್ತದೆ. ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ಹವಾನಾ ಐಲೆಂಡ್ನ ಸಂದರ್ಶನದ ಉಚಿತ ಅವಕಾಶವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ.

ಮಂಗಳೂರು ನಗರದ ಹವಾನ ಐಲೆಂಡ್ ಈಗ ಸಾಂಸ್ಕೃತಿಕ ಕಾರ್ಯಕ್ರಮಗಳ ಕೇಂದ್ರವಾಗಿ ಮಾರ್ಪಟ್ಟಂತಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಲಕ್ಷ್ಮಣ್ ಕುಂದರ್ , ಆಡಳಿತ ನಿರ್ದೇಶಕ, ಎಲ್.ಎಸ್.ಮಿಡಿಯಾ. ಸೆಲ್-9243301874

ಸುತ್ತ ನೀರು ನಡುವೆ ದ್ವೀಪ ಮಂಗಳೂರಿನ ಹವಾನ ಐಲ್ಯಾಂಡ್

ಸುತ್ತ ನೀರು ನಡುವೆ ಒಂದು ಸಣ್ಣ ದ್ವೀಪ ಇದುವೇ ಮಂಗಳೂರಿನ ಹವಾನ ಐಲ್ಯಾಂಡ್. ದ್ವೀಪದಲ್ಲಿ ನೀವು  ನಿಮ್ಮದೇ ಲೋಕ, ನೀರಿನ ಮೇಲೆ ನಿರ್ಮಿಸಿದ ಹಟ್‍ನಲ್ಲಿ ನಿಮ್ಮವರೊಂದಿಗೆ ಸಮಯ ಕೂಡ ಕಳೆಯಬಹುದು, ಮರದ ಮೇಲಿನ ಅಟ್ಟಳಿಗೆಯಲ್ಲಿ ಪ್ರಕೃತಿ ರಮಣೀಯ ದೃಶ್ಯ ಸವಿಯಬಹುದು. ಇದರೊಂದಿಗೆ ದ್ವೀಪದ ನಡುವೆ ವಿಶಾಲ ಪ್ರಾಂಗಣ, ನೀವು ಬಯಸುವ ಸ್ವಾದಿಷ್ಠ ಆಹಾರ ಪಾನೀಯಗಳ ಜತೆ, ನಿಮಗೆ ಇಷ್ಟವೆನಿಸುವ ಮನರಂಜನೆ..ವಿವಿಧ ಕಾರ್ಯಕ್ರಮ ನಡೆಸಲು ಅನುಕೂಲವಾಗುವಂತೆ ಓಪನ್ ಸ್ಟೇಜ್…ನೆರಳು ನೀಡುವ ಮರಗಳು ತಂಪಾದ ಗಾಳಿ ಇಂಪಾದ ವಾತಾವರಣ.

 ಇದೆಲ್ಲ ಇರೋದು ಮಂಗಳೂರು ನಗರದ ನೂತನ ಪ್ರವಾಸಿ ತಾಣವಾದ `ಹವಾನಾ ಐಲ್ಯಾಂಡ್‍ನಲ್ಲಿ’ ಈ ಪ್ರವಾಸಿ ತಾಣವು ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಮುನ್ನುಡಿ ಬರೆಯುತ್ತಿದೆ. ಕರಾವಳಿಯ ಅತ್ಯುತ್ತಮ ಪ್ರವಾಸಿ ತಾಣವಾಗಿ  ‘ಹವಾನಾ ಐಲ್ಯಾಂಡ್’ ಹೆಸರನ್ನಿಟ್ಟು ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಖಾಸಗಿ ಪಾಲುದಾರಿಕೆಯಲ್ಲಿ ಪಿಕ್ನಿಕ್ ತಾಣವಾಗಿ ಸಿದ್ದಗೊಳಿಸಲಾಗಿದೆ. ಎಲ್ಲ ವರ್ಗದ ಜನರಿಗೆ ಮನೋರಂಜನೆ, ಸಭೆ ಸಮಾರಂಭಗಳಿಗೆ ಬಳಕೆ ಮಾಡಿಕೊಳ್ಳಲು ಇಲ್ಲಿ ಅವಕಾಶಗಳಿವೆ ಮತ್ತು ರಜಾದಿನಗಳು ಮತ್ತು ವಿಶೇಷ ಕಾರ್ಯಕ್ರಮ ನಡೆಸಲು ಬೇಕಾದ ಸಂಗೀತ ರಸಸಂಜೆ ಮತ್ತಿತರ ಸೌಲಭ್ಯವನ್ನು ಇಲ್ಲಿ ಮಾಡಿಕೊಡಲಾಗುತ್ತದೆ. ಇಲ್ಲಿ ನಿರ್ಮಿಸಿರುವ ರೆಸ್ಟೋರೆಂಟ್‍ನಲ್ಲಿ ಪ್ರತಿದಿನವೂ ಊಟೋಪಚಾರ, ತಾಜಾ ಮೀನಿನ ಖಾದ್ಯಗಳು, ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಹವಾನಾ ಐಲ್ಯಾಂಡ್ ತಲುಪಲು ಬೊಕ್ಕಪಟ್ಣದಲ್ಲಿ ನಿರ್ಮಿಸಿದ ಜೆಟ್ಟಿ ಮೂಲಕ ಪ್ರಯಾಣಿಕರ  ‘ದೋಣಿ’ ಪ್ರತಿದಿನ ಸಂಚರಿಸಲಿದೆ. ಇದರಲ್ಲಿ ದೋಣಿಯ ವಿಹಾರದ ಜತೆಗೆ, ಭೋಜನ, ಉಪಹಾರ ವ್ಯವಸ್ಥೆ ಇದೆ. ಅದರ ಮೂಲಕ ಮಕ್ಕಳಿಗೆ ಲೈಫ್ ಜಾಕೆಟ್ ಸಹಿತ ಸೊಂಟಕ್ಕೆ ಹಗ್ಗ ಕಟ್ಟಿ ಈಜಾಟ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯುತ್ ದೀಪಗಳ ಮನಮೋಹಕ ಅಲಂಕಾರದಿಂದ ವಿಭಿನ್ನ ಗೆಟಪ್‍ನಲ್ಲಿ ಹವಾನಾ ಐಲ್ಯಾಂಡ್ ನಿರ್ಮಾಣಗೊಂಡಿದ್ದು ನೈಸರ್ಗಿಕ ಈಜುಕೊಳ, ಮರದ ಜೋಕಾಲಿ, ಬಿದಿರಿನ ಮನೆಗಳು, ಮರದ ಮೇಲಿನ ಮನೆಗಳು, ತಿರುಗುವ ತೊಟ್ಟಿಲು ಮುಂತಾದ ಹಲವು ವ್ಯವಸ್ಥೆಗಳನ್ನು ಈ ಪ್ರವಾಸಿ ತಾಣವು ಒಳಗೊಂಡಿದೆ.


Spread the love

Exit mobile version