ವಿ4 ನ್ಯೂಸ್ ರಿಯಲ್ ಮಿಕ್ಸ್ ಸಿಪಿಎಲ್ ಅ.31ರಿಂದ

Spread the love

ವಿ4 ನ್ಯೂಸ್ ರಿಯಲ್ ಮಿಕ್ಸ್ ಸಿಪಿಎಲ್ ಅ.31ರಿಂದ
ಮಂಗಳೂರು: ಕ್ರೀಕೆಟ್ ಅಥವಾ ಇನ್ಯಾವುದೇ ಆಟವನ್ನು ಪ್ರಿಮಿಯರ್ ಲೀಗ್ ರೂಪದಲ್ಲಿ ಆಡುವುದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಸಾಂಸ್ಕøತಿಕ ಸ್ಪರ್ಧೆಯೊಂದನ್ನ ಪ್ರಿಮಿಯರ್ ಲೀಗ್ ರೂಪದಲ್ಲಿ ಇದೇ ಮೊದಬಾರಿ ಪ್ರದರ್ಶಿಸಲಾಗುತ್ತಿದೆ. ಅದು ವಿ4 ನ್ಯೂಸ್ ಮೂಲಕ.

ಮಂಗಳೂರಿನ ಪ್ರವಾಸಿ ತಾಣ ಹವಾನ ಐಲೆಂಡ್ ಮತ್ತು ಪ್ರತಿಷ್ಠಿತ ವಿಕಾಸ ಶಿಕ್ಷಣ ಸಂಸ್ಥೆಗಳು ಅರ್ಪಿಸುವ ಕಾಮಿಡಿ ಪ್ರಿಮಿಯರ್ ಲೀಗ್ ಅಗಸ್ಟ್ 31ರಿಂದ ಆಯೋಜಿಸಲಾಗುತ್ತಿದೆ. ಎಂಟು ಪ್ರಮುಖ ತಂಡಗಳು ಒಂದು ತಿಂಗಳು ಐದು ಲಕ್ಷ ರೂ ಮೊತ್ತದ ಸ್ಪರ್ಧೆಗಾಗಿ ಸೆಣೆಸಲಿವೆ.

ಪ್ರಿಮಿಯರ್ ಲೀಗ್ ಸ್ಪರ್ಧೆಯ ತಂಡಗಳನ್ನು ಅಂತಿಮ ಗೊಳಿಸುವ ಪೂರ್ವದಲ್ಲಿ ಆಡಿಶನ್ ಮತ್ತು ಮೇಘಾ ಆಡಿಶನ್ ನಡೆಸಲಾಗಿತ್ತು. ಮೇಘಾ ಆಡಿಶನ್‍ನಲ್ಲಿ ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಒಟ್ಟು 25 ತಂಡಗಳು ಭಾಗವಹಿಸಿದ್ದವು. ಮೇಘಾ ಆಡಿಶನ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳಲ್ಲಿ 16 ತಂಡಗಳಲ್ಲಿ ಆಂತರಿಕ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದ ಎಂಟು ತಂಡಗಳು ಈಗ ಕಾಮಿಡಿ ಪ್ರಿಮಿಯರ್ ಲೀಗ್‍ನಲ್ಲಿ ಮುಂದುವರಿಯಲಿವೆ. ನಾವೆಲ್ಲೆ ನೋಡಿರುವ ಕ್ರಿಕೆಟ್ ಪ್ರಿಮಿಯರ್ ಲೀಗ್‍ನಂತೆ ಇಲ್ಲಿಯೂ ಹೆಚ್ಚು ರನ್ ಬಾರಿಸಿದವರೇ ವಿನ್ ಆಗುತ್ತಾರೆ. ಆದರೆ ಇಲ್ಲಿ ರನ್‍ಗಳನ್ನು ಹೇಗೆ ಬಾರಿಸಲಾಗುತ್ತದೆ ಎಂಬುದೇ ವಿಶೇಷ. ಇದನ್ನು ನೋಡಿಯೇ ಆನಂದಿಸಬೇಕು.

ಒಂದು ಟೀಮ್‍ಗೆ 15 ನಿಮಿಷಗಳ ಪ್ರದರ್ಶನದ ಆವಕಾಶ ಇರುತ್ತದೆ. ಈ ಪ್ರದರ್ಶನದ ಅವಧಿಯ ಕಾಮಿಡಿ ಪಂಚ್‍ಗಳು ಹೇಗೆ ರನ್‍ಗಳಾಗಿ ಪರಿವರ್ತಿತವಾಗುತ್ತವೆ ಎಂಬುದನ್ನು ನೋಡುವ ಕುತೂಹಲ ಇರುವವರೆಲ್ಲರಿಗೂ ನಾವು ಸಿಪಿಎಲ್ ವೀಕ್ಷರಾಗಿ ಆಹ್ವಾನಿಸುತ್ತಿದ್ದೇವೆ. ತುಳುವರು ಕಾಮಿಡಿ ಪ್ರೀಯರು ಎಂಬುದು ಜಗಜ್ಜಾಹಿರ. ತುಳುವರ ಮನಗೆಲ್ಲುವ ಕಲಾವಿದರು ಯಾರು ಎಂಬುದು ಸಿಪಿಎಲ್‍ನಲ್ಲಿ ನಿರ್ಧರಿತವಾಗುತ್ತದೆ.

ಕ್ರಿಕೆಟ್ ಪ್ರಿಮಿಯರ್ ಲೀಗ್‍ಗಳಲ್ಲಿ ಇರುವಂತೆ ಇಲ್ಲಿಯೂ ಎಂಟು ಕಾಮಿಡಿ ತಂಡಗಳಿಗೆ ಮಾಲಕರಿರುತ್ತಾರೆ. ಈಗಾಗಲೇ ಎಂಟು ಮಾಲಕರು ನಿಗದಿಯಾಗಿದ್ದಾರೆ. ಅವರು ಆಯ್ದು ಕೊಳ್ಳಬೇಕಾದ ತಂಡಗಳು ನಿರ್ಧರಿತವಾಗಿದೆ ಮತ್ತು ಇಂದು (ಆಗಸ್ಟ್ 20) ಪ್ರತಿಷ್ಠಿ ಓಶಿಯನ್ ಪರ್ಲ್ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೀಮ್‍ಗಳ ಪರಿಚಯ, ಲೋಗೋ ಲಾಂಚ್, ಜರ್ಸಿ ಬಿಡುಗಡೆ ನಡೆಯಿತು. ಮಾಲಕರೊಂದಿಗೆ ಗೆಟ್‍ಟುಗೆದರ್ ಕೂಡ ನಡೆಯಿತು.

ಎಂಟು ತಂಡಗಳ ಮಾಲಕರ ಪಟ್ಟಿ
ಮಾಲಕ 1. ಶಾಸಕ ಮೋಯ್ದಿನ್ ಬಾವಾ
ಮಾಲಕ 2. ಉದ್ಯಮಿ, ಬಿಜೆಪಿ ನಾಯಕ ವೇದವ್ಯಾಸ್ ಕಾಮತ್
ಮಾಲಕ 3. ಪ್ಲ್ಯಾನೆಟ್ ಜಿ ಸಂಸ್ಥೆಯ ಮಾಲಕರಾದ ಗುರುದತ್ ಕಾಮತ್ ಮತ್ತು ಅವರ ಪುತ್ರ ರಾಹುಲ್ ಕಾಮತ್
ಮಾಲಕ 4. ಮೂಡಬಿದ್ರೆಯ ಜೋಸ್ ಫರ್ನಿಚರ್ ಮಾಲಕ ಜೆಡಿಎಸ್ ನಾಯಕ ಅಶ್ವಿನ್ ಪಿರೇರಾ
ಮಾಲಕ 5. ಜುಗಾರಿ ಚಿತ್ರದ ನಿರ್ಮಾಪಕ ಪಮ್ಮಿ ಕೊಡಿಯಾಲ್‍ಬೈಲ್ ಮತ್ತು ಚಿತ್ರ ನಿರ್ಮಾಪಕ ನಿರ್ದೇಶಕ ಜೆಡಿಎಸ್ ನಾಯಕ ಆರ್.ಧನರಾಜ್
ಮಾಲಕ 6. ಹ್ಯಾವನ್ ರೋಸ್ ಸಂಸ್ಥೆಯ ಮಾಲಕ ಮುಸ್ತುಫಾ ಪ್ರೇಮಿ
ಮಾಲಕ 7. ಗ್ಲಿಡ್ಸ್ ಎಂಟರ್‍ಟೈನ್‍ಮೆಂಟ್‍ನ ದೀಪ್ತಿ ಸುವರ್ಣ
ಮಾಲಕ 8. ಶಾರದಾ ಪ್ರಿಂಟರ್ಸ್ ಮಾಲಕ ಕೃಷ್ಣ ಶೆಟ್ಟಿ ಮತ್ತು ಅವರ ಪುತ್ರ ಕೀರ್ತನ್ ಶೆಟ್ಟಿ

ಹವಾನಾ ಐಲೆಂಡ್ ಮತ್ತು ವಿಕಾಸ ಕಾಲೇಜ್ ಮಂಗಳೂರು ಸಂಸ್ಥೆಗಳು ಅರ್ಪಿಸುವ ಕಾಮಿಡಿ ಪ್ರಿಮಿಯರ್ ಲೀಗ್ ಸ್ಪರ್ಧೆಗಳನ್ನು ವಿವಿಧೆಡೆಗಳಲ್ಲಿ ಆಯೋಜಿಸಲಾಗುತ್ತಿದೆ.
ಸಿಪಿಎಲ್‍ನ ಮೊದಲ ಸ್ಪರ್ಧೆ ಆ.31ರಂದು ಮಧ್ಯಾಹ್ನ 12 ಗಂಟೆಗೆ ಕೊಟ್ಟಾರ ಚೌಕಿಯಲ್ಲಿರುವ ಕರಾವಳಿ ಕಾಲೇಜಿನಲ್ಲಿ ನಡೆಯಲಿದೆ. ಕರಾವಳಿ ಶಿಕ್ಷಣ ಸಂಸ್ಥೆಯ ಗಣೇಶ್ ರಾವ್ ಇದರ ಪ್ರಾಯೋಜಕರಾಗಿರುತ್ತಾರೆ.
ಎರಡನೆ ಸ್ಪರ್ಧೆ ಸೆ.13ರಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ. ಇದರ ಪ್ರಾಯೋಜಕರು ತಂಡದ ಮಾಲಕರಲ್ಲೋರ್ವರಾದ ಉದ್ಯಮಿ ಅಶ್ವಿನ್ ಪಿರೇರಾ ಆಗಿರುತ್ತಾರೆ.
ಮೂರನೆ ಸ್ಪರ್ಧೆ ಬಂಟ್ವಾಳದಲ್ಲಿ ದಸರಾ ಸಂಭ್ರಮದಲ್ಲಿ ನಡೆಯಲಿದೆ. ಸೆ.29ರಂದು ನಡೆಯುವ ಈ ಸ್ಪರ್ಧೆಯ ಪ್ರಾಯೋಜಕರು ಬಂಟ್ವಾಳದ ವಿಎನ್‍ಆರ್ ಗೋಲ್ಡ್ ಚಿನ್ನಾಭರಣ ಸಂಸ್ಥೆ.
ನಾಲ್ಕನೆ ಸ್ಪರ್ಧೆ ಮುಲ್ಕಿ ಬಪ್ಪನಾಡು ಕ್ಷೇತ್ರದ ಸಭಾಭವನದಲ್ಲಿ ನಡೆಯಲಿದೆ. ಈ ಸ್ಪರ್ಧೆಯ ಪ್ರಾಯೋಜಕರು ಸಿಪಿಎಲ್ ಮಾಲªಋಕರಲ್ಲೋರ್ವರಾದ ಕೃಷ್ಣ ಶೆಟ್ಟಿ ಮತ್ತು ಕೀರ್ತನ್ ಶೆಟ್ಟಿ.
ಐದನೆ ಸ್ಪರ್ಧೆ ಉಡುಪಿಯ ಶಾಮಿಲಿ ಸಭಾಂಗಣದಲ್ಲಿ ನಡೆಯಲಿದೆ. ಈ ಸ್ಪರ್ಧೆಯ ಪ್ರಾಯೋಜಕರು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್
ಆರನೆ ಸ್ಪರ್ಧೆ ಮಂಗಳೂರು ನಗರದ ಫೆÇೀರಂ ಫಿಜಾ ಮಾಲ್‍ನಲ್ಲಿ ನಡೆಯಲಿದೆ, ಈ ಸ್ಪರ್ಧೆಯ ಪ್ರಾಯೋಜಕರು ತಂಡದ ಮಾಲಕರಲ್ಲೊಬ್ಬರಾದ ಶಾಸಕ ಮೊಯ್ದಿನ್ ಬಾವಾ
ಸೆಮಿ ಫೈನಲ್ ಹಾಗೂ ಫೈನಲ್ ಪಂದ್ಯಗಳು ಮಂಗಳೂರಿನ ಪವಾನ ಐಲೆಂಡ್‍ನಲ್ಲಿ ನಡೆಯಲಿವೆ.
ಸ್ಪರ್ಧೆಯಲ್ಲಿ ಭಾಗಿಯಾಗುವ ತಂಡಗಳ ಪಟ್ಟಿ ಇಂತಿದೆ
1 ಮಂಗಳೂರು ಯುನೈಟೆಡ್ ಹರೀಣಿ
2 ಡಿವಿಕೆ ಫ್ರೆಂಡ್ಸ್
3 ಪ್ಲ್ಯಾನೆಟ್ ಜಿ ವೈಷ್ಣವಿ
4 ಐಕೇರ್ ಕಲಾವಿದೆರ್ ಬೆದ್ರ
5 ಜುಗಾರಿ ಜಾಲಿ ಫ್ರೆಂಡ್ಸ್
6 ಹ್ಯಾವನ್ ರೋಸ್ ಕಲಾಶ್ರೀ
7 ಗ್ಲಿಡ್ಸ್ ಕುಡ್ಲ ಕುಸಾಲ್
8 ಟೀಮ್ ಮೂಲ್ಕಿ ಸಾಕ್ಷಿ


Spread the love