ವೀರರಾಣಿ ಅಬ್ಬಕ್ಕ ಉತ್ಸವ – ರಾಜ್ಯ ಮಟ್ಟದ ಮುಕ್ತ ಹಾಫ್ ಮ್ಯಾರಥಾನ್ ಸ್ಪರ್ಧೆ
ಮಂಗಳೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಆಶ್ರಯದಲ್ಲಿ ನಡೆಯುವ ವೀರ ರಾಣಿ ಅಬ್ಬಕ್ಕೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಹಾಫ್ ಮ್ಯಾರಥಾನ್ ಸ್ಪರ್ಧೆಗೆ ಇಂದು ಬೆಳಗ್ಗೆ ಉಳ್ಳಾಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್ ಅವರು ಚಾಲನೆ ನೀಡಿದರು.
“ರಾಣಿ ಅಬ್ಬಕ್ಕ ಸ್ವಾಭಿಮಾನಿ ಓಟ” ಎಂಬ ಹೆಸರಿನ ರಾಜ್ಯ ಮಟ್ಟದ ಈ ಹಾಫ್ ಮ್ಯಾರಥಾನ್ ಓಟ ಉಳ್ಳಾಲದ ಅಬ್ಬಕ್ಕ ವೃತ್ತದಲ್ಲಿ ಆರಂಭಗೊಂಡು ಕೊಣಾಜೆಯ ಮಂಗಳಗಂಗೋತ್ರಿಯಲ್ಲಿ ಸಮಾಪ್ತಿಗೊಂಡಿತು. ಸುಮಾರು 300 ಪುರುಷರು ಹಾಗೂ 53 ಮಹಿಳೆಯರು ಮ್ಯಾರಥಾನ್‍ನಲ್ಲಿ ಪಾಲ್ಗೊಂಡರು ಎಂದು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಪ್ರದೀಪ್ ಡಿ ಸೋಜಾ ತಿಳಿಸಿದರು. ಪುರುಷರಿಗೆ 21 ಕಿ.ಮೀ.ಹಾಗೂ ಮಹಿಳೆಯರಿಗೆ 8 ಕಿ.ಮೀ. ಓಟದ ಸ್ಪರ್ಧೆ ಇದಾಗಿತ್ತು, ಪುರಷರ ಓಟದ ಮಾರ್ಗ ಅಬ್ಬಕ್ಕ ವೃತ್ತದಿಂದ ತೊಕ್ಕೊಟು ಮಾರ್ಗವಾಗಿ ಕುತ್ತಾರು ಎಲ್ಯಾರು ಪದವು, ನ್ಯೂಪಡ್ಪು, ಗ್ರಾಮಚಾವಡಿಯಾಗಿ ಕೊಣಾಜೆ ವಿವಿ ಕೀಡಾಂಗಣದಲ್ಲಿ ಮುಕ್ತಾಯಗೊಂಡಿತು. ಮಹಿಳೆಯರ ಓಟದ ಮಾರ್ಗ ಅಬ್ಬಕ್ಕ ವೃತ್ತದಿಂದ ತೊಕ್ಕೊಟು ಮಾರ್ಗವಾಗಿ ಕುತ್ತಾರು, ದೇರಳಕಟ್ಟೆ, ಅಸೈಗೋಳಿಯಾಗಿ ಕೋಣಾಜೆ ವಿವಿಯ ಕ್ರೀಡಾಂಗಣದಲ್ಲಿ ಪೂರ್ಣಗೊಂಡಿತು.
ರಾಣಿ ಅಬ್ಬಕ್ಕ ಸ್ವಾಭಿಮಾನಿ ಓಟದ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನಗಳೊಂದಿಗೆ ಆಳ್ವಾಸ್ ಕಾಲೇಜಿನ ಸ್ಟೋರ್ಟ್ ಕ್ಲಬ್‍ನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದರು. ಮೊದಲು ನಡೆದ ಮಹಿಳೆಯರ ವಿಭಾಗದಲ್ಲಿ ಚೈತ್ರಾ ದೇವಾಡಿಗ 46 ನಿಮಿಷದಲ್ಲಿ ಗುರಿಯನ್ನು ತಲುಪಿ ಮೊದಲ ಸ್ಥಾನ. ಪ್ರಿಯಾ ಎಲ್.ಡಿ. 48 ನಿಮಿಷದಲ್ಲಿ ಗುರಿಯನ್ನು ತಲುಪಿ ಎರಡನೇಯ ಸ್ಥಾನ. ಶಾಲಿನಿ ಕೆ.ಎಸ್.50 ನಿಮಿಷದಲ್ಲಿ ಗುರಿ ತಲುಪಿ ಮೂರನೆಯ ಸ್ಥಾನ. ಮತ್ತು ಪುರುಷರ ವಿಭಾಗದಲ್ಲಿ ಬಸವರಾಜ್ ಎನ್. ಗೋಡಿ. 1 ಗಂಟೆ 5 ನಿಮಿಷದಲ್ಲಿ ಗುರಿಯನ್ನು ತಲುಪಿ ಮೊದಲ ಸ್ಥಾನ. ಕೆ. ಮಹೇಶ 1 ಗಂಟೆ 6 ನಿಮಿಷದಲ್ಲಿ ಗುರಿಯನ್ನು ತಲುಪಿ ಎರಡನೇಯ ಸ್ಥಾನ. ಮತ್ತು ಪ್ರಶಾಂತ್ ಕುಮಾರ್ 1 ಗಂಟೆ 7 ನಿಮಿಷದಲ್ಲಿ ಗುರಿ ತಲುಪಿ ಮೂರನೇಯ ಸ್ಥಾನ. ಮುಕ್ತಾಯ ಗುರಿಯನ್ನು ತಲುಪಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.
ಕ್ರೀಡಾ ಸಮಿತಿ ಅಧ್ಯಕ್ಷರೂ ಹಾಗೂ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಮಹೇಶ್, ಕೆ ಎಸ್ ಆರ್ ಪಿ ಅಸಿಸ್ಟೆಂಟ್ ಕಮಾಂಡೆಂಟ್ ಶರತ್, ನಗರಸಭೆ ಪೌರಾಯುಕ್ತ ವಾಣಿ ವಿ ಆಳ್ವ, ಕ್ರೀಡಾ ಸಮಿತಿ ಸಂಚಾಲಕರಾದ ತಾರನಾಥ್ ರೈ, ಕ್ರೀಡಾ ಇಲಾಖೆ ಅಧಿಕಾರಿ ಲಿಲ್ಲಿ ಪಾಯಸ್ ಮುಂತಾದವರಿದ್ದರು.
ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಫುಟ್‍ಬಾಲ್ ಪಂದ್ಯಾಟದಲ್ಲಿ ಒಟ್ಟು 8 ತಂಡಗಳು ಪಾಲ್ಗೊಂಡವರು. ಭಾರತ್ ಪ್ರೌಢಶಾಲೆಯು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯಿತು. ಪಂದ್ಯಾಟವನ್ನು ಕ್ರೀಡಾ ಸಮಿತಿ ಅಧ್ಯಕ್ಷರೂ ಹಾಗೂ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಮಹೇಶ್ ಉದ್ಘಾಟಿಸಿದರು. ಸಾಜಿದ್ ಉಳ್ಳಾಲ, ಬಿಇಒ ಲೋಕೇಶ್, ಕೌನ್ಸಿಲರ್ ಅಶ್ರಫ್, ಜಿಲ್ಲಾ ದೈಹಿಕ ಕ್ರೀಡಾಧಿಕಾರಿ, ಸ್ಥಳೀಯ ಶಾಲಾ ಮುಖ್ಯೋಪಾಧ್ಯಾಯರು ಪಾಲ್ಗೊಂಡರು.