Home Mangalorean News Kannada News ವೀರ ಕೇಸರಿ ಬೆಳ್ತಂಗಡಿ ಇದರ ವತಿಯಿಂದ ವಿವಿಧ ಸೇವಾ ಯೋಜನೆಗಳಿಗೆ ಆರ್ಥಿಕ ಸಹಾಯ ಹಸ್ತಾಂತರ

ವೀರ ಕೇಸರಿ ಬೆಳ್ತಂಗಡಿ ಇದರ ವತಿಯಿಂದ ವಿವಿಧ ಸೇವಾ ಯೋಜನೆಗಳಿಗೆ ಆರ್ಥಿಕ ಸಹಾಯ ಹಸ್ತಾಂತರ

Spread the love

ವೀರ ಕೇಸರಿ ಬೆಳ್ತಂಗಡಿ ಇದರ ವತಿಯಿಂದ ವಿವಿಧ ಸೇವಾ ಯೋಜನೆಗಳಿಗೆ ಆರ್ಥಿಕ ಸಹಾಯ ಹಸ್ತಾಂತರ

ಬೆಳ್ತಂಗಡಿ : ಸಮಾಜ ಸೇವೆಯೇ ನಮ್ಮ ಉಸಿರು ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಸೇವೆಗಾಗಿ ಸಂಭಾಷಣೆ ಎಂಬ ಕಲ್ಪನೆಯ ಮೂಲಕ ಆರಂಭಗೊಂಡ ವೀರಕೇಸರಿ ಬೆಳ್ತಂಗಡಿ ಸಂಘಟನೆ ಕಳೆದ 4 ವರ್ಷ 4 ತಿಂಗಳುಗಳಲ್ಲಿ 121 ಸೇವಾಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದೆ.

ನೊಂದ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಯಶಸ್ವಿ 5ನೇ ವರ್ಷದ ಪಯಣದಲ್ಲಿ 5 ಕುಟುಂಬಗಳಿಗೆ ನೆರವಾಗುವ ಮೂಲಕ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ

ತಂಡದ 117ನೇ_ಸೇವಾಯೋಜನೆಯಾಗಿ ಉಡುಪಿಯ ಕುಕ್ಕೇಹಳ್ಳಿ ನಿವಾಸಿಯಾಗಿರುವ ನಿರ್ಮಲ ಜೋಯಿಸ್ ಇವರು ಕಳೆದ 3 ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸಾ ವೆಚ್ಚಕ್ಕಾಗಿ 20,000 ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿಸಲಾಗಿದ್ದು 118ನೇ_ಸೇವಾಯೋಜನೆಯಾಗಿ ಮಂಗಳೂರು ತಾಲೂಕಿನ, ಮುಲ್ಕಿ ಆಚಾರಿಬೆಟ್ಟು, ಶಿವಾನುಗ್ರಹ ನಿವಾಸಿ ವಿಠಲ ಆಚಾರ್ಯ ಇವರ ಪತ್ನಿ ಬ್ರೈನ್ ಹ್ಯಮರೇಜ್ನಿಂದ ಬಳಲುತ್ತಿದ್ದು, ಇವರ ಕುಟುಂಬ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಇವರ ಕುಟುಂಬಕ್ಕೆ 15,000 ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿದೆ.

119ನೇ_ಸೇವಾಯೋಜನೆಯಾಗಿ ಉಡುಪಿ ಮುದ್ರಾಡಿಯ ಅನ್ವಿತ್ ನಿಲಯ ನಿವಾಸಿಯಾಗಿರುವ ನಿಮಿತ ಇವರ ಪತಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸಾ ವೆಚ್ಚಕ್ಕಾಗಿ 15,000 ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿಸಲಾಗಿದ್ದು , 120ನೇ_ಸೇವಾಯೋಜನೆಯಾಗಿ ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕು, ಕೊಕ್ಕರ್ಣೆ ನಿವಾಸಿ ಶೃಂಗೇರಿ ಇವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು ಇವರ ಮಗಳು ಆರಾಧ್ಯ ಇವರ ಕಣ್ಣು ಈಗ ಮಂದವಾಗಿದ್ದು ಇವರ ಚಿಕಿತ್ಸಾ ವೆಚ್ಚಕ್ಕಾಗಿ 15,000 ರೂಪಾಯಿಗಳ ಚೆಕ್ ಅನ್ನು ನೀಡಲಾಗಿದ್ದು, 121ನೇ_ಸೇವಾಯೋಜನೆಯಾಗಿ ಉಡುಪಿ ಜಿಲ್ಲೆ ಸೂಡ ಗ್ರಾಮದ, ಕುಂಬ್ಳೆ ಭಾಗದ ಅಮಣಿ ಮೂಲ್ಯರವರು ಹಲವು ವರ್ಷಗಳಿಂದ ವಾಸವಾಗಿದ್ದ ಮನೆ ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿದ ವಿಪರೀತ ಮಳೆಗೆ ಕುಸಿದು ಬಿದಿದ್ದು ಇವರ ಕುಟುಂಬಕ್ಕೆ ತುರ್ತುಸೇವಾಯೋಜನೆಯಾಗಿ 10,000 ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿಸಲಾಗಿದೆ

ಈ 5 ಸೇವಾಯೋಜನೆಗಳಿಗೆ ಒಟ್ಟು ರೂ 75,000ರೂ ಗಳನ್ನು ವೀರಕೇಸರಿ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು.

ಈ ವೇಳೆ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಗೀತಾಂಜಲಿ ಸುವರ್ಣ, ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲೆ ಇದರ ಕಾರ್ಯದಶಿ೯ ಮಹೇಶ್ ಬೈಲೂರು, ಉಪಾಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಬಜರಂಗದಳ ಕಾಪು ಪ್ರಖಂಡ ಸಂಚಾಲಕ ಸುಧೀರ್ ಸೋನು, ಯುವ ವಾಗ್ಮಿ ಹಾಗೂ ವಕೀಲರಾದ ಸಹನಾ ಕುಂದರ್ ಸೂಡ, ಉಡುಪಿ ತಾಲೂಕು ಎಪಿ ಎಂ ಸಿ ಅಧ್ಯಕ್ಷರಾದ ಸತೀಶ್ ಶೆಟ್ಟಿ, ಲೆಕ್ಕಪರಿಶೋಧಕರು ಹಾಗೂ ತೆರಿಗೆ ಸಲಹೆಗಾರರಾದ ಕೃಷ್ಣ ಮೂರ್ತಿ, ಯುವಜನ ಸೇವಾ ಕ್ರೀಡಾ ಇಲಾಖೆ ಉಡುಪಿ ಇದರ ರಘುನಾಥ್ ಎಸ್, ಪಡುಬೆಳ್ಳೆ ವಿಶ್ವ ಹಿಂದೂ ಪರಿಷತ್ ಸ್ಥಾಪಕ ಅಧ್ಯಕ್ಷರಾದ ಬೆಳ್ಳೆ ದೊಡ್ಡಮನೆ ಅಜಿತ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಶಿರ್ವ ವಲಯ ಅಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ ಪಡುಬೆಳ್ಳೆ, ವೀರಕೇಸರಿ ಬೆಳ್ತಂಗಡಿ ಇದರ ಸಂಚಾಲಕರಾದ ಸತೀಶ್ ಶೆಟ್ಟಿ ಮತ್ತು ವೀರಕೇಸರಿಯ ಸದಸ್ಯರು ಉಪಸ್ಥಿತರಿದ್ದರು.


Spread the love
1 Comment
Inline Feedbacks
View all comments
Vijaya R prakash
4 years ago

Nannah aunty (kusuma UDUPI Inna dahvaru) Sahaa strokenindahgi
Bengaluru a NEMMDI Andrahall ill CHIKTHSE
Padeyuthidahre Thingallige 10000 rindah15000
Karchu agthideh.
SAHAAYADAH agathyavide

wpDiscuz
Exit mobile version