Home Mangalorean News Kannada News ವೃದ್ಧ ದಂಪತಿಗಳಿಗೆ ನೆರವಾಗಿ ಮತ್ತೊಮ್ಮೆ ಮಾನವೀಯತೆ ಮೆರೆದ ಸಚಿವ ಯು.ಟಿ. ಖಾದರ್

ವೃದ್ಧ ದಂಪತಿಗಳಿಗೆ ನೆರವಾಗಿ ಮತ್ತೊಮ್ಮೆ ಮಾನವೀಯತೆ ಮೆರೆದ ಸಚಿವ ಯು.ಟಿ. ಖಾದರ್

Spread the love

ವೃದ್ಧ ದಂಪತಿಗಳಿಗೆ ನೆರವಾಗಿ ಮತ್ತೊಮ್ಮೆ ಮಾನವೀಯತೆ ಮೆರೆದ  ಸಚಿವ ಯು.ಟಿ. ಖಾದರ್

ಮಂಗಳೂರು: ಮಾನವೀಯತೆ ಮೆರೆಯುವುದರಲ್ಲಿ ರಾಜ್ಯದ ಆಹಾರ ಸಚಿವ ಯು.ಟಿ. ಖಾದರ್ ಎತ್ತಿದ ಕೈ. ಯಾರಾದರೂ ತೊಂದರೆಯಲ್ಲಿ ಇದ್ದಿರುವುದು ತನ್ನ ಕಣ್ಣಿಗೆ ಬಿದ್ದರೆ ಸಾಕು ಸ್ವತಃ ತಾನೇ ಅವರ ಬಳಿಗೆ ತೆರಳಿ ಸಹಾಯ ನೀಡುವ ವಿಶೇಷ ಗುಣವನ್ನು ಹೊಂದಿರುವ ವ್ಯಕ್ತಿ ಯು ಟಿ ಖಾದರ್

ಹೌದು ಕಳೆದ ವಾರ ತನ್ನ ಕ್ಷೇತ್ರದ ಸೋಮೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಪಲದಲ್ಲಿ ರಸ್ತೆ ವೀಕ್ಷಣೆಗೆ ತೆರಳಿದ ಸಂದರ್ಭದಲ್ಲಿ  ಕುಂಪಲದ ಅಮೃತ ನಗರದ ಬಳಿ ಸಚಿವರ ಕಾರನ್ನು ಕಂಡು ಕುಂಟುತ್ತಾ ಬಂದ 79 ವರ್ಷ ಪ್ರಾಯದ ಯಶವಂತ  ಆಚಾರಿಯವರು ತನ್ನ ಅಳಲನ್ನು ತೋಡಿಕೊಂಡರು. ತನ್ನ ಬಳಿ ರೇಶನ್ ಕಾರ್ಡ್ ಇಲ್ಲ ,ಜೀವನ ರೂಪಿಸಲು ಕಷ್ಟ ಸಾದ್ಯವಾಗಿದೆ ತನ್ನ ಪತ್ನಿಯ ಒಂದು ಬಾಗ ಇಲ್ಲದೆ ನಡೆಯಲೂ ಸಾದ್ಯವಿಲ್ಲ ಎಂದು ತಿಳಿಸಿದಾಗ ಆಹಾರ ಸಚಿವ ಯು.ಟಿ.ಖಾದರ್ ಅವರು ಆ  ವಯೋ ವೃದ್ದ ದಂಪತಿಗಳ ಮನೆಗೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷ ಸುರೇಶ್ ಭಟ್ನಗರ ಮತ್ತು ದೀಪಕ್ ಪೂಜಾರಿ ಪಿಲಾರ್ ಅವರ ನೇತೃತ್ವದಲ್ಲಿ ರೇಶನ್ ಕಾರ್ಡ್ ಮಾಡಿ ಕೊಡಲು ಕಳಿಸಿದರು.

 ಇದೇ ಸಂದರ್ಭದಲ್ಲಿ ಮನೆಯಲ್ಲಿ ದಂಪತಿಗಳ ಬೆರಳಚ್ಚು (tumb ) ಆಗದಿದ್ದಾಗ ಸುರೇಶ್ ಭಟ್ನಗರ ಅವರು ತನ್ನ ವಾಹನದಲ್ಲೇ ದೇರಳಕಟ್ಟೆಯ ಬೆಳ್ಮ ಗ್ರಾಮ ಪಂಚಾಯತ್ ಉಪಾಧ್ಯಕ್ಷರ ಸತ್ತಾರ್ ಮಾಲಕತ್ವದ  ಗ್ರಾಹಕ ಸೇವಾ ಕೇಂದ್ರದಲ್ಲಿ ಕರೆ ತಂದು ರೇಶನ್ ಕಾರ್ಡ್ ಮಾಡಿಸಿ ಕೊಡುವಳ್ಳಿ ಯಶಸ್ವಿಯಾಗಿದ್ದಾರೆ. ಹಾಗೂ ಆ ವೃದ್ದ ದಂಪತಿಗೆ ಸರಕಾರದಲ್ಲಿ ಸಿಗುವ ಅನಿಲ ಬಾಗ್ಯ ಯೋಜನೆಯಲ್ಲಿ ಗ್ಯಾಸ್  ನೀಡುವ ಭರವಸೆ ನೀಡಿದರು. ಮತ್ತು ವೃದ್ದ ದಂಪತಿಗೆ ಆಹಾರ ಸಚಿವರು ಆಸರೆ ಯಾಗುವ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ವೃದ್ದ ದಂಪತಿಗಳು  ಆನಂದ ಬಾಷ್ಮ ದಿಂದ   ಬಾವುಕರಾಗಿ ಆಹಾರ ಸಚಿವ ಯು.ಟಿ.ಖಾದರ್ ಅವರಿಗೆ ಅಭಿನಂದನೆ ಸಲ್ಲಿಸಿ ,ಮುಂದಿನ ದಿನಗಳಲ್ಲಿ  ತಾವುಗಳು ರಾಜಕೀಯದಲ್ಲಿ ಉನ್ನತ ಮಟ್ಟಕ್ಕೆ ಬೆಳೆದು  ಇಡೀ ರಾಷ್ಟಕ್ಕೆ ಕೀರ್ತಿ ತನ್ನಿ ಎಂದು ಆಶೀರ್ವದಿಸಿದರು

 ಇದೇ ಸಂದರ್ಭದಲ್ಲಿ ರಮೇಶ್ ಕೊಲ್ಯ, ಕಿಶೋರ್ ಗಟ್ಟಿ,ಸೋಮೇಶ್ವರ ಯುವ ಕಾಂಗ್ರೆಸ್ ಅಧ್ಯಕ್ಷ ಲವೀಶ್ ಶೆಟ್ಟಿ ಪಿಲಾರ್ ಮಂಗಳೂರು ಯೂತ್  ಕಾಂಗ್ರೆಸ್ ಅಧ್ಯಕ್ಷ ರವೂಫ್ ಉಪಸ್ಥಿತರಿದ್ದರು.


Spread the love

Exit mobile version