ವೇಣೂರು: ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಆಡಳಿತದ ಪರಿಣಾಮ ಇಂದು ಭಾರತಕ್ಕೆ ಜಾಗತಿಕ ನೇತೃತ್ವ ದೊರಕಿದ್ದು, ಇದರ ಆನಂದವನ್ನು ಪ್ರತಿಯೋರ್ವ ನಾಗರಿಕರೂ ಅನುಭವಿಸುತ್ತಿದ್ದಾರೆ. ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರೇರಣೆ ಹಾಗು ಬಿಜೆಪಿಯ ನಾಯಕತ್ವದಿಂದ ಸಾಧ್ಯವಾಗಿದೆಯೆಂದು ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಅಭಿಪ್ರಾಯ ಪಟ್ಟಿದ್ದಾರೆ.
ವೇಣೂರಿನ ಕರಂಬಳ್ಳಿ ಸಂಜೀವ ಶೆಟ್ಟಿ ಸಭಾ ಭವನದ ಡಾ| ವಿ.ಎಸ್.ಆಚಾರ್ಯ ವೇದಿಕೆಯಲ್ಲಿ ದಕ್ಷಿಣ ಕನ್ನಡ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪ್ರಶಿಕ್ಷಣ ವರ್ಗದಲ್ಲಿ ಸಮಾರೋಪ ಭಾಷಣ ಮಾಡಿದ ಸಿ.ಟಿ.ರವಿ ನಮ್ಮ ನಮ್ಮ ಗ್ರಾಮಗಳಲ್ಲಿ ನಾವುಗಳು ಬದಲಾವಣೆಯ ಹರಿಕಾರರಾಗಬೇಕು, ಸಾಮಾಜಿಕ ಪಿಡುಗಾದ ಅಸ್ಪøಶ್ಯತೆ, ನಿರುದ್ಯೋಗ, ನಿರ್ವಸತಿಗಳನ್ನು ತೊಡೆದು ಹಾಕಲು ಪ್ರತಿಯೋರ್ವರು ಸ್ವಯಂ ಪ್ರೇರಣೆಯಿಂದ ಮುಂದಾಗಿ, ಕತ್ತಲು ತುಂಬಿದ ಜಗತ್ತಿನಲ್ಲಿ ಕತ್ತಲು ಎಂದು ಗೋಳಿಡುವ ಬದಲು ಹಣತೆಯನ್ನು ಹಚ್ಚಿ, ದೀಪದಿಂದ ದೀಪ ಬೆಳಗಿಸಿ ಮೌಡ್ಯವನ್ನು ಹೋಗಲಾಡಿಸುವಂತೆ ಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಕೆ.ಪ್ರತಾಪ್ ಸಿಂಹ ನಾಯಕ್ ಮೂರು ದಿನಗಳ ಕಾಲ ಅಭ್ಯಾಸವರ್ಗದಲ್ಲಿ ಕೌಟುಂಬಿಕ ವಾತಾವರಣ ಮೂಡಿದ್ದು ಜೀವಮಾನದಲ್ಲಿ ನೆನಪಿಟ್ಟು ಕೊಳ್ಳ ಬಹುದಾದ ಸಂಗತಿ ಎಂದು ಪ್ರಸ್ತಾಪಿಸಿ ಯಶಸ್ವಿಗೆ ಕಾರಣೀಕರ್ತರಾದವರಿಗೆ ಅಭಿನಂದನ ಸಲ್ಲಿಸಿದರು.
ಆಶಾ ತಿಮ್ಮಪ್ಪ ಗೌಡ ವೈಯಕ್ತಿಕ ಗೀತೆ ಹಾಡಿದರು ಸಂತೋಷ್ ಕುಮಾರ್ ಬೋಳಿಯಾರ್ ಸ್ವಾಗತಿಸಿ, ಚೆನ್ನಪ್ಪ ಕೋಟ್ಯಾನ್ ವಂದಿಸಿದರು, ದೇವಾದಾಸ್ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದ ವೇದಿಕೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಸುಲೋಚನಾಭಟ್, ವಿಭಾಗ ಪ್ರಶಿಕ್ಷಣ ಸಂಚಾಲಕ ಗೋಪಾಲ ಕೃಷ್ಣ ಹೇರಳೆ, ವರ್ಗಪ್ರಮುಖ್ ರುಕ್ಮಯ್ಯ ಪೂಜಾರಿ ಉಪಸ್ಥಿತರಿದ್ದರು.ಮೂರು ದಿನಗಳ ಕಾಲ ನಡೆದ ಪ್ರಶಿಕ್ಷಣ ವರ್ಗದಲ್ಲಿ ಹತ್ತು ಅವದಿಗಳು ನಡೆದಿದ್ದು ,ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ.ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ಸುರಾನ ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಣಿತರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.ಕಾರ್ಯಕ್ರಮ ನಡೆದ ವಿವಿಧ ವಿಭಾಗಗಳಿಗೆ ಜಿಲ್ಲೆ ಹಾಗೂ ರಾಷ್ಟ್ರ ನಾಯಕರಾಗಿದ್ದ ದಿ|ವೀರ ಸಿಂಹನಾಯಕ್, ದಿ|ನಾರಾಯಣ ಶೆಟ್ಟಿ,ದಿ| ಬಾವುರಾವು ದೇಶಪಾಂಡೆ, ರಾಜಮಾತೆ ವಿಜಯೇರಾಜೇಸಿಂಧ್ಯರ ಹೆಸರನ್ನಿಟ್ಟು ಸ್ಮರಿಸಿಕೊಳ್ಳಲಾಗಿತ್ತು