ವೇಶ್ಯಾವಟಿಕೆ ನಡೆಸುತಿದ್ದ ಮೂವರ ಸೆರೆ, ಇಬ್ಬರು ಕೊಲ್ಕತ್ತ ಮೂಲದ ಮಹಿಳೆಯರ ರಕ್ಷಣೆ
ಮಂಗಳೂರು: ನಗರದ , ಬಿಜೈ, ಕಾಪಿಕಾಡ್ ಬಳಿಯ ಸೂರ್ಯ ಕಂಫರ್ಟ್ ಲಾಡ್ಜ್ ನಲ್ಲಿ ಕೊಲ್ಕತ್ತ ಮೂಲದ ಮಹಿಳೆಯರನ್ನು ಬಳಸಿ ವೇಶ್ಯಾವಟಿಕೆ ನಡೆಯುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೋಲಿಸರು ದಾಳಿ ಮಾಡಿ ವೇಶ್ಯಾವಟಿಕೆ ನಡೆಸುತ್ತಿದ್ದ ಚಂದ್ರಶೇಖರ್ (36) ಬಂಟ್ವಾಳ, ನಾಸೀರ್ (26) ಉಪ್ಪಿನಂಗಡಿ, ಅಶೋಕ (24) ಮಣ್ಣಗುಡ್ಡೆ ಎಂಬವರನ್ನು ವಶಕ್ಕೆ ತೆಗೆದುಕೊಂಡು ವೇಶ್ಯಾವಟಿಕೆ ಬಳಸಿದ 5 ಮೊಬೈಲ್ ಪೋನ್ ಗಳು ಮತ್ತು ನಗದು ಹಣ 19,500ರೂಪಾಯಿ, ಒಂದು ಆಲ್ಟೋ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ನೊಂದ ಇಬ್ಬರು ಕೊಲ್ಕತ್ತ ಮೂಲದ ಯುವತಿಯರನ್ನು ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕಕ್ಕೆ ಓಪ್ಪಿಸಲು, ರಕ್ಷಿಸಲಾಗಿದೆ. ಲಾಡ್ಜಿನ ಮಾಲಿಕ ಅಬ್ದುಲ್ ರಜಾಕ್ , ಪಿಂಪ್ ಜೀವನ್ ತಪ್ಪಿಸಿಕೊಂಡಿರುತ್ತಾರೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಇಕಾನಮಿಕ್ & ನಾರ್ಕೋಟಿಕ್ ಪೋಲಿಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಐ.ಪಿ.ಎಸ್, ಪೊಲೀಸ್ ಉಪ ಆಯುಕ್ತರಾದ ಹನುಮಂತರಾಯ, (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಉಮಾ ಪ್ರಶಾಂತ್ (ಅಪರಾಧ & ಸಂಚಾರ) ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತಾರಾಮ, ಇಕಾನಮಿಕ್ & ನಾರ್ಕೋಟಿಕ್ ಪೋಲಿಸ್ ಠಾಣೆ ಇನ್ಸಪೆಕ್ಟರ್, ರಾಮಕೃಷ್ಣ , ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.