ವೇಶ್ಯಾವಾಟಿಕೆ ಅಡ್ಡೆಗೆ ಧಾಳಿ ಐವರ ರಕ್ಷಣೆ, ಮೂವರ ಬಂಧನ
ಮಂಗಳೂರು: ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೋಲಿಸರು ಧಾಳಿ ನಡೆಸಿ ಐವರು ಮಹಿಳೆಯರನ್ನು ರಕ್ಷಿಸಿ ಮೂವರು ವ್ಯಕ್ತಿಗಳನ್ನು ಬಂಧಿಸಿ ನಾಗೋರಿಯಲ್ಲಿ ಭಾನುವಾರ ನಡೆದಿದೆ.
ಬಂಧಿತ ಆರೋಪಿಗಳನ್ನು ಮನು ಅಲಿಯಾಸ್ ಮನೋಜ್, ಹರೀಶ್ ಶೆಟ್ಟಿ ಮತ್ತು ದುರ್ಗೆಶ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿಯನ್ನು ಆಧರಿಸಿ ನಾಗೋರಿಯ ಕಟ್ಟಡವೊಂದರ ಮೇಲೆ ಧಾಳಿ ನಡೆಸಿದ ಕಂಕನಾಡಿ ಪೋಲಿಸರು ಮೂವರು ಪುರುಷರನ್ನ ಬಂಧಿಸಿದ್ದು; ಐವರನ್ನು ರಕ್ಷಿಸಿದ್ದಾರೆ,
ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಂಕನಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.