ವೈದ್ಯರ ಚೀಟಿ ಇಲ್ಲದೆ ಔಷದ ಮಾರಾಟ ಮಾಡಿದ ಮೆಡಿಕಲ್ ಪರಿವಾನಿಗೆ ರದ್ದು
ಮಂಗಳೂರು: ವೈದ್ಯರ ಚೀಟಿ ಇಲ್ಲದೆ ಮತ್ತು ಬರಿಸುವ ಔಷದಗಳನ್ನು ಮಾರಾಟ ಮಾಡುತ್ತಿದ್ದ ಮೆಡಿಕಲ್ ಶಾಪಿಗೆ ಪೋಲಿಸರು ಸೋಮವಾರ ಧಾಳಿ ನಡೆಸಿದ್ದಾರೆ.
ಜುಲೈ 18ರಂದು ಮಂಗಳೂರು ಪಿವಿಎಸ್ ಬಳಿಯ ಪಿ ಕೆ ಹೆಲ್ತ್ ಕ್ಯೂರ್ ಮೆಡಿಕಲ್ ಶಾಪಿನಲ್ಲಿ ಯಾವುದೇ ವೈದ್ಯರ ಸಲಹಾ ಚೀಟಿ ಇಲ್ಲದೆ ಮತ್ತು ಭರಿಸುವ ಔಷದಗನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಂತೆ ಕೇಂದ್ರ ಉಪವಿಭಾಗದ ಸಹಾಯಕ ಪೋಲಿಸ್ ಆಯೂಕ್ತರ ನೇತೃತ್ವದಲ್ಲಿ ಉರ್ವ ಪೋಲಿಸ್ ಠಾಣಾ ನಿರೀಕ್ಷಕರು ಹಾಗೂ ಮಂಗಳೂರು ಪೂರ್ವ ಪೋಲಿಸ್ ಠಾಣಾ ನಿರೀಕ್ಷಕರು ಹಾಗೂ ಸಿಬಂದಿಗಳ ನೇತೃತ್ವದಲ್ಲಿ ದಾಳಿ ಮಾಡಿದ್ದು, ಪ್ರಕರಣ ದಾಖಲಾಇಗರುತ್ತದೆ.
ಪ್ರಕರಣದ ತನಿಖೆಯ ಸಮಯದಲ್ಲಿ ಮೆಡಿಕಲ್ ಶಾಪಿನವರು ನಿಯಮ ಉಲ್ಲಂಘಿಸಿ ವ್ಯಾಪಾರದಲ್ಲಿ ತೊಡಗಿದ್ದು ಧೃಡಪಟ್ಟ ಕಾರಣ ಸಂಸ್ಥೆಯ ಪರವಾನಿಗೆಯನ್ನು ರದ್ದುಗೊಳಿಸಿದ್ದಾರೆ.