Home Mangalorean News Kannada News ವೈಭವಪೂರ್ಣ ಶೋಭಾಯಾತ್ರೆಯೊಂದಿಗೆ  ಸರ್ವಜ್ಞ ಪೀಠವೇರಿದ ಅದಮಾರು ಶ್ರೀ

ವೈಭವಪೂರ್ಣ ಶೋಭಾಯಾತ್ರೆಯೊಂದಿಗೆ  ಸರ್ವಜ್ಞ ಪೀಠವೇರಿದ ಅದಮಾರು ಶ್ರೀ

Spread the love

ವೈಭವಪೂರ್ಣ ಶೋಭಾಯಾತ್ರೆಯೊಂದಿಗೆ  ಸರ್ವಜ್ಞ ಪೀಠವೇರಿದ ಅದಮಾರು ಶ್ರೀ

ಉಡುಪಿ: ಉಡುಪಿಯ ಅದಮಾರು ಶ್ರೀಗಳ ಪರ್ಯಾಯ ಮಹೋತ್ಸವ ಅದ್ದೂರಿಯಾಗಿ ನೇರವೇರಿತು. ಸರ್ವಜ್ನ ಪೀಠವನ್ನೇರುವ ಮೂಲಕ ಎರಡು ವರುಷಗಳ ಪೂಜಾ ಕೈಂಕರ್ಯವನ್ನು ಅಧಿಕಾರವನ್ನು ಅದಮಾರು ಶ್ರೀಗಳು ಪಲಿಮಾರು ಶ್ರೀಗಳಿಂದ ಪಡೆದುಕೊಂಡರು. ಅದಮಾರು ಈಶಪ್ರಿಯ ಶ್ರೀಗಳ ಪೀಠಾರೋಹಣದೊಂದಿಗೆ ಉಡುಪಿಯಲ್ಲಿ 250 ನೇ ಪರ್ಯಾಯ ಸಂಪನ್ನಗೊಂಡಿತು.

ಉಡುಪಿ ಸಹಿತ ನಾಡಿನ ಮೂಲೆಮೂಲೆಯ ಭಕ್ತರು ಪರ್ಯಾಯದ ಅದ್ದೂರಿತನ ಮತ್ತು ವೈಭವಕ್ಕೆ ಸಾಕ್ಷಿಯಾದರು. ಮುಂಜಾನೆ ಪರ್ಯಾಯದ ಮೆರವಣಿಗೆ ,ಸರ್ವಜ್ನ ಪಿಠಾರೋಹಣ -ಅಕ್ಷಯಪಾತ್ರೆ ಹಸ್ತಾಂತರ ಕಾರ್ಯಕ್ರಮಗಳೊಂದಿಗೆ ಪರ್ಯಾಯದ ಒಂದು ಹಂತ ಮುಗಿಯಿತು

ಉಡುಪಿಗೆ ಉಡುಪಿಯೇ ಎಚ್ಚರದಿಂದ ಇದ್ದು ವೈಭವದ ಪರ್ಯಾಯ ಮೆರವಣಿಗೆಯ ಸೊಬಗನ್ನು ಕಣ್ತುಂಬಿ ಕೊಂಡಿತು. ರಸ್ತೆಯ ಇಕ್ಕೆಲಗಳಲ್ಲಿ, ಬೃಹತ್ ಕಟ್ಟಡಗಳ ಮಾಳಿಗೆಗಳಲ್ಲಿ, ಕಾಂಪೌಂಡ್ ಗೋಡೆಗಳ ಮೇಲೆ ಕುಳಿತುಕೊಂಡು ಜನರು ಮೆರವಣಿಗೆ ವೀಕ್ಷಿಸಿದರು.

ಜೋಡುಕಟ್ಟೆಯಿಂದ ಹೊರಟ ಶೋಭಾಯಾತ್ರೆಯು ರಥಬೀದಿಗೆ ಸಾಗಿತು. ವಿವಿಧ ಸ್ತಬ್ಧಚಿತ್ರಗಳು, ಕಲಾ ತಂಡಗಳನ್ನು ಒಳಗೊಂಡಿದ್ದು ಸಾಂಪ್ರ ದಾಯಿಕತೆಗೆ ಆದ್ಯತೆ ನೀಡಲಾಗಿತ್ತು. ಮುಂಜಾನೆ 5.57 ರ ಸುಮಾರಿಗೆ ಪಲಿಮಾರು ಶ್ರೀಗಳಿಂದ ಅಕ್ಷಯಪಾತ್ರೆ ಪಡೆದುಕೊಳ್ಳುವುದರೊಂದಿಗೆ ಮತ್ತು ಸರ್ವಜ್ನ ಪಿಠಾರೋಹಣಗೈಯುವುದರೊಂದಿಗೆ ಅದಮಾರು ಈಶಪ್ರಿಯ ಶ್ರೀಗಳು ಪ್ರಥಮ ಬಾರಿಗೆ ಪರ್ಯಾಯ ಪೀಠ ಏರಿದಂತಾಯಿತು.

ಬೆಳಿಗ್ಗೆ 5 ಗಂಟೆ ಸಮಾರಿಗೆ ಮೆರವಣಿಗೆ ಕೃಷ್ನಮಠ ತಲುಪಿದ ಬಳಿಕ ಪರ್ಯಾಯ ಶ್ರಿಗಳಿಗೆ ಅಕ್ಷಯಪಾತ್ರೆ ಹಸ್ತಾಂತರ ವಿಧಿ ನಡೆಯಿತು ;ಪಲಿಮಾರು ಶ್ರೀಗಳು ಅಕ್ಷಯಪಾತ್ರೆ ಮತ್ತು ಸಟ್ಟುಗವನ್ನು ಅದಮಾರು ಶ್ರೀಗಳಿಗೆ ಹಸ್ತಾಂತರಿಸಿದರು.ಬಳಿಕ ಸರ್ವಜ್ನ ಪಿಠಾರೋಹಣ ವಿಧಿ ನೆರವೇರಿತು;ಪರ್ಯಾಯದ ಹಲವು ಸಾಂಪ್ರದಾಯಿಕ ವಿಧಿಗಳು ಜರುಗಿದ ಬಳಿಕ ರಜಾಂಗಣದಲ್ಲಿ ಮಧ್ಯಾಹ್ನ ಪರ್ಯಾಯ ದರ್ಬಾರ್ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ..


Spread the love

Exit mobile version