Home Mangalorean News Kannada News ಶಂಕಿತ ಕೊರೋನ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಐವರು ಆಸ್ಪತ್ರೆಗೆ ದಾಖಲು

ಶಂಕಿತ ಕೊರೋನ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಐವರು ಆಸ್ಪತ್ರೆಗೆ ದಾಖಲು

Spread the love

ಶಂಕಿತ ಕೊರೋನ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಐವರು ಆಸ್ಪತ್ರೆಗೆ ದಾಖಲು

ಉಡುಪಿ : ಶಂಕಿತ ನೋವೆಲ್ ಕೊರೋನ ವೈರಸ್ನ ಮಹಾಮಾರಿ ದೇಶಾದ್ಯಂತ ಶರವೇಗದಲ್ಲಿ ಹಬ್ಬುತ್ತಿರುವ ನಡುವೆಯೇ ಬುಧವಾರ ಪುನಃ ಉಡುಪಿ ಜಿಲ್ಲೆಯಲ್ಲಿ ಐದು ಮಂದಿ ಶಂಕಿತ ವೈರಸ್ ಸೋಂಕಿನ ಪರೀಕ್ಷೆಗಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ|ಸುಧೀರ್ ಚಂದ್ರ ಸೂಡ ಅವರು ಮೂರು ಮಂದಿ ಉಡುಪಿ ಜಿಲ್ಲಾಸ್ಪತ್ರೆ, ಒರ್ವರು ಮಣಿಪಾಲ ಕೆ.ಎಮ್.ಸಿ ಹಾಗೂ ಒರ್ವ ಕುಂದಾಪುರ ಆಸ್ಪತ್ರೆಗೆ ದಾಖಲಾಗಿದ್ದು ಕೊರೋನ ವೈರಸ್ ಪೀಡಿತರಿಗಾಗಿ ತೆರೆಯಲಾಗಿರುವ ಪ್ರತ್ಯೇಕಿತ ವಾರ್ಡಿಗೆ ಈ ಐವರನ್ನೂ ಸೇರಿಸಲಾಗಿದ್ದು, ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಆಸ್ಪತ್ರೆಗೆದ ದಾಖಲಾಗಿರುವ ಇಬ್ಬರು ದುಬಾಯಿ ನಿಂದ ವಾಪಾಸಾದರೆ ಉಳಿದ ಮೂವರು ಕತಾರ್, ಅಬುದಾಬಿ ಮತ್ತು ಬಹರೈನ್ ದೇಶದಿಂದ ವಾಪಾಸಾಗಿದ್ದು ಮರಳಿದ್ದು ಜ್ವರ ಹಾಗೂ ಕೆಮ್ಮುವಿನಿಂದ ಬಳಲುತ್ತಿರುವ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಐವರು ಶಂಕಿತರ ಗಂಟಲು ದ್ರವಗಳ ಮಾದರಿಗಳನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವುಗಳ ವರದಿ ಶೀಘ್ರವೇ ಬರುವ ನಿರೀಕ್ಷೆ ಇದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಈ ನಡುವೆ ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದವರ ವರದಿ ಇನ್ನಷ್ಟೇ ಬರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ದುಬಾಯಿಯಿಂದ ವಾಪಾಸಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾದ ಗರ್ಭಿಣಿಯೋರ್ವರ ವೈದ್ಯಕೀಯ ವರದಿ ಬಂದಿದ್ದು ಕೋರನಾ ವೈರಸ್ ಇಲ್ಲ ಎನ್ನುವುದು ಧೃಡಪಟ್ಟಿದೆ.


Spread the love

Exit mobile version