ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ-ರಾಜ್ಯಮಟ್ಟಕ್ಕೆಆಯ್ಕೆ
ಧರ್ಮಸ್ಥಳ; ಸಂತ ವಿಕ್ಟರನ ಪ್ರೌಢ ಶಾಲೆ ಪುತ್ತೂರುನಲ್ಲಿ ನಡೆದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಶ್ರೀ.ಧ.ಮಂ. ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ವಿದ್ಯಾರ್ಥಿಗಳಾದ ಗುರುಚರಣ್, ಉಲ್ಲಾಸ್, ವಿದ್ಯಾರ್ಥಿನಿಯರಾದ ಅನನ್ಯಾ ಪ್ರಭು, ಮತ್ತು ಸಾತ್ವಿಕಾ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರಿಗೆ ಶಾಲಾ ದೈಹಿಕ ಶಿಕ್ಷಕ ಸುಭಾಶ್ಚಂದ್ರ ತರಬೇತಿ ನೀಡಿದ್ದರು ಎಂದು ಶಾಲಾ ಮುಖ್ಯ ಶಿಕ್ಷಕಿ ಪರಿಮಳಾ ಎಂ.ವಿ. ತಿಳಿಸಿದ್ದಾರೆ.