ಶಬರಿಮಲೆ ದೇವಸ್ಥಾನದಂತೆಯೇ ಮಸೀದಿಯಲ್ಲಿ ಮಹಿಳೆಯರನ್ನು ಪ್ರವೇಶ ಮಾಡಿಸಿ ತೋರಿಸಿ !

Spread the love

ಶಬರಿಮಲೆ ದೇವಸ್ಥಾನದಂತೆಯೇ ಮಸೀದಿಯಲ್ಲಿ ಮಹಿಳೆಯರನ್ನು ಪ್ರವೇಶ ಮಾಡಿಸಿ ತೋರಿಸಿ !

ಶಬರಿಮಲೆ ದೇವಸ್ಥಾನದ ನುರಾರು ವರ್ಷಗಳ ಪರಂಪರೆಯನ್ನು ಮುರಿಯಲು ಹಿಂದೂವಿರೋಧಿ ಕಮ್ಯುನಿಸ್ಟ ಕೇರಳ ಸರಕಾರವು ಆಕಾಶಪಾತಾಳ ಒಂದು ಮಾಡಲು ನಿರ್ಧರಿಸಿದೆ. ಕಳೆದ ಅನೇಕ ತಿಂಗಳುಗಳಿಂದ ಅಯ್ಯಪ್ಪಭಕ್ತರು ಶಾಂತವಾಗಿ ಆಂದೋಲನವನ್ನು ಮಾಡುತ್ತಿರುವಾಗ ಅವರ ಭಾವನೆಗಳಲ್ಲಿ ಅವಮಾನಿಸಲು ಕೇರಳ ರಾಜ್ಯ ಸರಕಾರವು ಪ್ರಯತ್ನಿಸಿತು. ಅದು ೪೦ ವರ್ಷದ ಇಬ್ಬರು ಮಹಿಳೆಯರನ್ನು ಆಂಬ್ಯುಲೆನ್ಸ್ ಮಾಧ್ಯಮದಿಂದ ದೇವಸ್ಥಾನದ ಹತ್ತಿರ ಕರೆದುಕೊಂಡು ಹೋದರು, ನಂತರ ಕಪ್ಪು ಬುರಖಾ ಹಾಗೂ ಪೊಲೀಸರ ಪಹರೆಯಲ್ಲಿ ಗೌಪ್ಯವಾಗಿ ದೇವಸ್ಥಾನವನ್ನು ಪ್ರವೇಶವನ್ನು ಮಾಡಿಸಿಕೊಟ್ಟರು. ಈ ಮಹಿಳೆಯರು ಶ್ರೀ ಅಯ್ಯಪ್ಪನ ಭಕ್ತರಾಗಿರದೇ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತೆಯರಾಗಿದ್ದಾರೆ ಎಂಬುದು ಈಗ ಬಯಲಾಗಿದೆ. ಯಾವುದೇ ಭಕ್ತಿ ಇಲ್ಲದಿರುವಾಗ ಹೀಗೆ ಗೌಪ್ಯವಾಗಿ ಪ್ರವೇಶಿಸಲು ಅವಕಾಶ ನೀಡಿ ಏನು ಸಾಧ್ಯವಾಗಲಿದೆ ? ಇದು ಕೇವಲ ಹಿಂದೂ ಧರ್ಮ, ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಕೋಟಿಗಟ್ಟಲೆ ಭಕ್ತರಿಗೆ ಮಾಡಿದ ವಿಶ್ವಾಸಘಾತವಾಗಿದೆ. ‘ಏನಾದರೂ ಮಾಡಿ, ಆದರೆ ಹಿಂದೂಗಳ ಧಾರ್ಮಿಕ ಪರಂಪರೆಯನ್ನು ನಾಶ ಮಾಡಿ, ಹಿಂದೂಗಳ ದೇವಸ್ಥಾನವನ್ನು ಭ್ರಷ್ಟ ಮಾಡಿ’, ಇದೇ ಪ್ರಯತ್ನವನ್ನು ಕಮ್ಯುನಿಸ್ಟ್ ಸರಕಾರವು ಮಾಡುತ್ತಿರುವಂತೆ ಕಾಣಿಸುತ್ತಿದೆ. ಇದು ಅತ್ಯಂತ ಖಂಡನೀಯವಾಗಿದೆ. ಕೇರಳದ ಕಮ್ಯುನಿಸ್ಟ್ ಸರಕಾರವು ನಿಜವಾಗಿಯೂ ಪ್ರಗತಿಪರ ಮತ್ತು ಸಂಪ್ರದಾಯಗಳ ವಿರುದ್ಧವಾಗಿದ್ದರೆ ಇದೇ ರೀತಿಯಲ್ಲಿ ಕೇರಳ ಸರಕಾರವು ಜಾಮಾ ಮಸೀದಿಯಲ್ಲಿ ಮುಸಲ್ಮಾನ ಮಹಿಳೆಯರಿಗೆ ಪೊಲೀಸರ ರಕ್ಷಣೆಯಲ್ಲಿ ನುಗ್ಗಿಸಿ ತೋರಿಸಲಿ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಸವಾಲೆಸಗಿದ್ದಾರೆ.
ಧರ್ಮಶಾಸ್ತ್ರದಲ್ಲಿ ‘ಕರ್ಮಫಲಸಿದ್ಧಾಂತ’ವನ್ನೂ ಹೇಳಲಾಗಿದೆ. ಅದಕ್ಕನುಸಾರ ಅದರ ಪಾಪವನ್ನು ಕೇರಳ ಸರಕಾರ ಮತ್ತು ಧರ್ಮವಿರೋಧಿ ಕೃತ್ಯ ಮಾಡಿವವರು ಭೋಗಿಸಬೇಕಾಗುವುದು, ಇದು ಖಚಿತ. ಶ್ರೀ ಅಯ್ಯಪ್ಪ ಭಕ್ತರು ಶಾಂತರೀತಿಯಲ್ಲಿ ಆಂದೋಲನ ಮಾಡಿದ್ದರೂ ಕೇರಳದ ಕಮ್ಯುನಿಸ್ಟ್ ಸರಕಾರವು ಪೊಲೀಸ್‌ಬಲವನ್ನು ಬಳಸಿತು. ಅದು ಭಕ್ತರ ಸಂಕೀರ್ತನೆಗಳ ಮೇಲೆ ಲಾಠಿ ಪ್ರಹಾರ ಮಾಡಿ ನೂರಾರು ಜನರನ್ನು ಗಾಯಗೊಳಿಸಿತು., ಮಹಿಳೆಯರ ಮೇಲೆಯೂ ಲಾಠಿ ಬೀಸಲಾಯಿತು. ಭಕ್ತರ ವಾಹನಗಳನ್ನು ಧ್ವಂಸ ಮಾಡಲಾಯಿತು. ಇಲ್ಲಿಯವರೆಗೆ ಈ ಪೂರ್ಣ ಆಂದೋಲನವನ್ನು ಹತ್ತಿಕ್ಕಲು ಕಳೆದ ಕೆಲವು ತಿಂಗಳಲ್ಲಿ ಸತತ ೫೦೦೦ ಕ್ಕಿಂತ ಹೆಚ್ಚು ಭಕ್ತರ ಮೇಲೆ ದೂರು ದಾಖಲಿಸಿದ್ದಾರೆ. ಸರಕಾರವು ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸಬಾರದು. ಕೇರಳ ಸರಕಾರಕ್ಕೆ ತಥಾಕಥಿತ ಸ್ತ್ರೀ-ಪುರುಷ ಸಮಾನತೆ ತರಲಿಕ್ಕಿದ್ದರೆ ಮತ್ತು ಅವರಲ್ಲಿ ಧೈರ್ಯವಿದ್ದರೆ ಕೇರಳದಲ್ಲಿನ ಮಲಾಂಕಾರಾ ಮಾರಥೋಮಾ ಸಿರಿಯನ್ ಚರ್ಚ ಹಾಗೂ ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧವಿದೆ, ಅಲ್ಲಿ ಮಹಿಳೆಯರನ್ನು ಹೀಗೆ ನುಗ್ಗಿಸಲು ಧೈರ್ಯ ತೋರಿಸಬೇಕು, ಎಂದೂ ಶ್ರೀ. ಶಿಂದೆಯವರು ಹೇಳಿದ್ದಾರೆ.


Spread the love