ಶಬರಿಮಲೆ ಯಾತ್ರಾರ್ಥಿಗಳ ಕಾರಿಗೆ ಬೆಂಕಿ: ನೀರು ಹಾಕಿ ನಂದಿಸಲು ಸಹಕರಿಸಿದ ಸಚಿವ ಖಾದರ್
ಮಂಗಳೂರು: ತಾಂತ್ರಿಕ ದೋಷದಿಂದ ಶಬರಿಮಲೆಯಿಂದ ವಾಪಾಸಾಗುತ್ತಿದ್ದವರ ಕಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಮಂಗಳೂರಿನ ನಂತೂರು ಬಳಿ ಶುಕ್ರವಾರ ನಡೆದಿದೆ.
ಶಬರಿಮಲೆಗೆ ತೆರಳಿ ಹುಬ್ಬಳ್ಳಿಗೆ ವಾಪಾಸಾಗುತ್ತಿದ್ದ ವೇಳೆ ಅಚಾನಕ್ ಆಗಿ ಇಂಡಿಕಾ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಕೂಡಲೇ ಬೆಂಕಿ ಹೊತ್ತಿಕೊಂಡಿದೆ. ಈವೇಳೆ ವಿಮಾನ ನಿಲ್ದಾಣದಿಂದ ಸ್ವ ಕ್ಷೇತ್ರಕ್ಕೆ ವಾಪಾಸಾಗುತ್ತಿದ್ದ ರಾಜ್ಯ ಆರೋಗ್ಯ ಸಚಿವ ಯು ಟಿ ಖಾದರ್ ಅವರು ಹೆದ್ದಾರಿಯಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿ ಕೂಡಲೇ ತಮ್ಮ ಕಾರಿನಿಂದ ಇಳಿದು ನೀರು ಹಾಕಿ ಬೆಂಕಿ ನಂದಿಸುವಲ್ಲಿ ಸಾರ್ವಜನಿಕರೊಂದಿಗೆ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ.
ಘಟನೆಯಲ್ಲಿ ಯಾತ್ರಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.