ಶಬ್-ಇ-ಬರಾತ್ ಹಾಗೂ ಗುಡ್ ಫ್ರೈಡೆ ಸಾಮೂಹಿಕ ಪ್ರಾರ್ಥನೆ ಅವಕಾಶ ಇಲ್ಲ : ಜಿಲ್ಲಾಧಿಕಾರಿ ಜಗದೀಶ್

Spread the love

ಶಬ್-ಇ-ಬರಾತ್ ಹಾಗೂ ಗುಡ್ ಫ್ರೈಡೆ ಸಾಮೂಹಿಕ ಪ್ರಾರ್ಥನೆ ಅವಕಾಶ ಇಲ್ಲ : ಜಿಲ್ಲಾಧಿಕಾರಿ ಜಗದೀಶ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರ ಶಬ್ದ ಭಾರತ ಮತ್ತು ಕ್ರೈಸ್ತ ಸಮುದಾಯದವರು ಗುಡ್ ಫ್ರೈಡೇ ಆಚರಣೆ ಯನ್ನು ಲಾಕ್ಡೌನ್ ಪ್ರಯುಕ್ತ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅವರು ಮಂಗಳವಾರ ಉಡುಪಿ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು ಈಗಾಗಲೇ ದೇಶದಾದ್ಯಂತ ಕರೋನಾ ಹಿನ್ನೆಲೆಯಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದು ಉಡುಪಿ ಜಿಲ್ಲೆಯಲ್ಲಿಯೂ ಅದು ಜಾರಿಯಲ್ಲಿದೆ ಆದ್ದರಿಂದ ಮುಸ್ಲಿಂ ಸಮುದಾಯದವರು ಆಚರಿಸುವ ಶಬ್ -ಇ- ಬರಾತ್ ಹಾಗೂ ಕ್ರೈಸ್ತರ ಗುಡ್ ಫ್ರೈಡೆ ಒಟ್ಟಾಗಿ ಬಂದಿದ್ದು ಯಾವುದೇ ಕಾರಣಕ್ಕೂ ಎರಡು ಸಮುದಾಯದವರಿಗೂ ಸಾಮೂಹಿಕ ಪ್ರಾರ್ಥನೆ ನಡೆಸಲು ಅವಕಾಶವಿಲ್ಲ ಎಲ್ಲರೂ ತಮ್ಮ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಸೂಚಿಸಿದರು.

ಜಿಲ್ಲೆಯಲ್ಲಿ ಲಾಕ್ಡೌನ್ ಬಳಿಕ ಈಗಾಗಲೇ ಕ್ರೈಸ್ತ ಬಾಂಧವರು ತಮ್ಮ ಚರ್ಚುಗಳನ್ನು ಮುಚ್ಚಿದ್ದು ಮನೆಯಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ ಅದೇ ರೀತಿ ಗುಡ್ ಫ್ರೈಡೆ ಕೂಡ ತಮ್ಮ ಮನೆಗಳಲ್ಲಿ ಆಚರಿಸಬೇಕು. ಮುಸ್ಲಿಂ ಭಾಂಧವರೂ ಕೂಡಾ ಜಿಲ್ಲಾಡಳಿತದೊಂದಿಗೆ ಸಹಕರಿಸಿದ್ದು ಇದೇ ಸಹಕಾರ ಶಬ್-ಇ-ಬರಾತ್ ಸಮಯದಲ್ಲಿ ಕೂಡ ನೀಡುವಂತೆ ಮನವಿ ಮಾಡಿದರು. ಇದಕ್ಕೆ ವಿರುದ್ಧವಾಗಿ ಯಾವುದಾದರೂ ಪ್ರಕರಣ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲು ಪೋಲಿಸರಿಗೆ ಸೂಚನೆ ನೀಡಿದರು

ಮುಸ್ಲಿಂ ಮುಖಂಡ ಹುಸೈನ್ ಹೈಕಾಡಿ ಮಾತನಾಡಿ, ಈಗಾಗಲೇ ಶಬೇ ಬರಾಅತ್ನ್ನು ಮನೆ ಯಲ್ಲಿಯೇ ಆಚರಣೆ ಮಾಡುವುದಾಗಿ ನಾವು ನಿರ್ಣಯ ಮಾಡಿದ್ದೇವೆ. ಆದರೆ ಕೆಲವೊಂದು ವ್ಯಕ್ತಿಗಳು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ತಪ್ಪು ಮಾಡಿದವರಿಗೆ ಗರಿಷ್ಠ ಶಿಕ್ಷೆ ನೀಡಬೇಕೆಂದು ನಾವು ಕೂಡ ಒತ್ತಾಯಿಸುತ್ತೇವೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಗಳು, ಒಬ್ಬರು ತಪ್ಪು ಮಾಡಿದರೆ ಇಡೀ ಸಮುದಾಯ ವನ್ನು ಹೊಣೆ ಮಾಡು ವುದು ಸರಿಯಲ್ಲ ಎಂಬುದಾಗಿ ಹೇಳಿಕೆಯನ್ನು ನೀಡಿದ್ದಾರೆ. ಅದರಂತೆ ಯಾರು ಕೂಡ ಇಡೀ ಸಮುದಾಯವನ್ನು ದೂಷಣೆ ಮಾಡುವ ಕೆಲಸ ಮಾಡಬಾರದು. ತಪ್ಪು ಮಾಡಿದವರ ವಿರುದ್ಧ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಅತ್ತೂರು ಚರ್ಚ್ ಧರ್ಮಗುರು ರೆ.ಫಾ.ಜಾರ್ಜ್ ಡಿಸೋಜ ಮಾತ ನಾಡಿ, ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರು ಈಗಾಗಲೇ ಆದೇಶ ನೀಡಿ, ಚರ್ಚ್ಗಳಲ್ಲಿ ಯಾವುದೇ ಆಚರಣೆಗಳನ್ನು ಮಾಡಬಾರದು ಮತ್ತು ಸಮುದಾಯದ ಯಾರೇ ವ್ಯಕ್ತಿಗಳು ಮನೆಯಿಂದ ಹೊರಗೆ ಬರ ಬಾರದು ಎಂಬುದಾಗಿ ಸೂಚಿಸಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಡಿವೈಎಸ್ಪಿ ಟಿ.ಆರ್. ಜೈಶಂಕರ್ ಮೊದಲಾದರು ಹಾಜರಿದ್ದರು.


Spread the love