Home Mangalorean News Kannada News ಶರತ್ ಬಗ್ಗೆ ಸ್ಪೋಟಕ ಮಾಹಿತಿ; ತನಿಖೆಗೆ ಹಾಜರಾಗಲು ವಜ್ರದೇಹಿ ಸ್ವಾಮೀಜಿಗೆ ನೋಟಿಸ್

ಶರತ್ ಬಗ್ಗೆ ಸ್ಪೋಟಕ ಮಾಹಿತಿ; ತನಿಖೆಗೆ ಹಾಜರಾಗಲು ವಜ್ರದೇಹಿ ಸ್ವಾಮೀಜಿಗೆ ನೋಟಿಸ್

Spread the love

ಶರತ್ ಬಗ್ಗೆ ಸ್ಪೋಟಕ ಮಾಹಿತಿ; ತನಿಖೆಗೆ ಹಾಜರಾಗಲು ವಜ್ರದೇಹಿ ಸ್ವಾಮೀಜಿಗೆ ನೋಟಿಸ್

ಮಂಗಳೂರು: ಆರೆಸ್ಸಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಸ್ಪೋಟಕ ಮಾಹಿತಿ ಇದೆ ಎಂದು ಬಾಂಬ್ ಸಿಡಿಸಿದ್ದ ಗುರುಪರು ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರಿಗೆ ತನಿಖೆಗೆ ಹಾಜರಾಗುವಂತೆ ಬಂಟ್ವಾಳ ಠಾಣಾ ಪೋಲಿಸರು ನೋಟಿಸ್ ನೀಡಿದ್ದಾರೆ.

ಶುಕ್ರವಾರ ಶರತ್ ಹತ್ಯೆ ಪ್ರಕರಣದ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ವಜ್ರದೇಹಿ ಸ್ವಾಮೀಜಿಯವರು, ಶರತ್ ಸಾವಿನ ಬಗ್ಗೆ ನನ್ನಲ್ಲಿ ಸ್ಪೋಟಕ ಮಾಹಿತಿ ಇದ್ದು ಅದನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಮಾತ್ರ ನೀಡುವುದಾಗಿ ಹೇಳಿದ್ದರು. ಈ ಹೇಳಿಕೆಯ ಬಳಿಕ ತನಿಖೆಗೆ ಹಾಜರಾಗುವಂತೆ ಬಂಟ್ವಾಳ ಠಾಣ ಪೋಲಿಸರು ಸ್ವಾಮೀಜಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.


Spread the love
1 Comment
Inline Feedbacks
View all comments
7 years ago

what this swamijee wants. They dont see hunger and powerty so they will talk. they make the poor people to suffer.

wpDiscuz
Exit mobile version