ಶರತ್ ಮಡಿವಾಳ ಹತ್ಯೆ; ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಧರಣಿ
ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ನಡೆದು ತಿಂಗಳು ಕಳೆದರೂ ಆರೋಪಿಗಳನ್ನು ಬಂಧಿಸಿದಿರುವುದನ್ನು ಪ್ರತಿಭಟಿಸಿ ಹಿಂದೂ ರಕ್ಷಣಾ ಸಮಿತಿ ಜಿಲ್ಲಾಧಿಕಾರಿ ಕಚೇರಿಯ ಎದುರು ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಗದೀಶ್ ಶೇಣವ ಅವರ ಹತ್ಯೆ ನಡೆದು ಒಂದು ತಿಂಗಳು ಕಳೆದರೂ ಕೂಡ ಯಾರನ್ನೂ ಇದುವರೆಗೆ ಬಂಧಿಸಿಲ್ಲ ಆದರೆ ನಮ್ಮ ನಾಯಕರ ವಿರುದ್ದ ಕೇಸು ದಾಖಲಿಸಿದ್ದಾರೆ. ಸರಕಾರದ ಹಿಂದೂ ವಿರೋಧಿ ನೀತಿಯ ವಿರುದ್ದ ನಮ್ಮ ಪ್ರತಿಭಟನೆ ಎಂದರು.
ಇದೇ ವೇಳೆ ಮಾತನಾಡಿದ ಪ್ರೋ. ಎಂ ಬಿ ಪುರಾಣಿಕ್ ಅವರು ಹಿಂದೂ ಸಮಾಜ ತುಂಬಾ ತಾಳ್ಮೆಯ ಸಮಾಜವಾಗಿದ್ದು ಸದಾ ಶಾಂತಿಯನ್ನು ಬಯಸುವುದರೊಂದಿಗೆ ಯಾವುದೇ ರೀತಿಯ ಕೋಮು ಪ್ರಚೋದನೆಗೆ ಎಡೆ ಮಾಡಿಕೊಟ್ಟವರಲ್ಲ. ಕಳೆದ ಎರಡು ತಿಂಗಳಿನಿಂದ ದಕ ಜಿಲ್ಲೆಯಪುತ್ತೂಋಉ, ಬೆಳ್ತಂಗಡಿ, ಬಂಟ್ವಾಳ ಸುರತ್ಕಲ್ ಪ್ರದೇಶದಲ್ಲಿ ಶಾಂತಿ ಕದಡಿದ ವಾತಾವರಣವಿದೆ. ಕೇರಳದಲ್ಲಿ 19 ಹಿಂದೂ ನಾಯಕರು ಕಳೆದ ಮೂರು ವರ್ಷಗಳಲ್ಲಿ ಕೊಲೆಯಾಗಿದ್ದಾರೆ ಇಂತಹ ಕೊಲೆಗಳು ಪಶ್ಚಿಮ ಬಂಗಾಳದಲ್ಲೂ ನಡೆದಿವೆ ಆದರೆ ಅಲ್ಲಿನ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ
ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತ ಸಾರ್ವಜನಿಕ ಸ್ಥಳದಲ್ಲಿ ಸುಪಾರಿ ಹಂತಕರಿಂದ ಕೊಲೆಯಾದರು. ಅಶ್ರಫ್ ಕೊಲೆಯಾದ ಕೂಡಲೇ ಆರೋಪಿಗಳನ್ನು ಹಿಡಿಯಲು ಸಾಧ್ಯವಾದ ಪೋಲಿಸರಿಗೆ ಶರತ್ ಹಂತಕರನ್ನು ಬಂಧಿಸಲು ಇದುವರೆಗೂ ಸಾಧ್ಯವಾಗಿಲ್ಲ. ಡಿಕೆ ಶಿವಕುಮಾರ್ ಮನೆಗೆ ಐಟಿ ಧಾಳಿಯಾದಾಗ ಐಟಿ ಇಲಾಖೆ ಪೋಲಿಸರ ನೆರವು ಪಡೆಯಲಿಲ್ಲ ಕಾರಣ ಅವರಿಗೆ ಕರ್ನಾಟಕ ಪೋಲಿಸರ ಮೇಲೆ ವಿಶ್ವಾಸವಿರಲಿಲ್ಲ ಅದರಂತೆಯೇ ಇಂದು ದಕ ಜಿಲ್ಲೆಯ ಜನರಿಗೆ ಪೋಲಿಸರ ಮೇಲಿನ ವಿಶ್ವಾಸ ಹೊರಟು ಹೋಗಿದೆ ಎಂದರು.
ರಾಜ್ಯ ಸರಕಾರ ಪಿಎಫ್ ಐ ಸಂಘಟನೆಯ ಮೇಲಿನ ಎಲ್ಲಾ ಕೇಸುಗಳನ್ನು ವಾಪಾಸು ಪಡೆದ ಬಳಿಕ ಸಂಘಟನೆ ಹಿಂದೂ ನಾಯಕರನ್ನು ಗುರಿಯಾಗಿಸಿ ಧಾಳಿ ಆರಂಭಿಸಿದೆ. ಅಶ್ರಫ್ ಕೊಲೆಯ ಸಂದರ್ಭದಲ್ಲಿ ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿದ್ದರು ಆದರೆ ಯಾವುದೇ ಕೇಸು ದಾಕಲಿಸಲಿಲ್ಲ ಆದರೆ ಶರತ್ ಶವ ಯಾತ್ರೆಯ ಸಂದರ್ಭದಲ್ಲಿ ಕಲ್ಲು ತೂರಾಟವಾಗಿದ್ದಕ್ಕೆ ಹಿಂದು ನಾಯಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಇದು ಖಂಡನೀಯ. ಶರತ್ ಹತ್ಯೆ ನಡೆದು ಒಂದು ತಿಂಗಳು ಕಳೆದರೂ ಪೊಲೀಸ್ ಇಲಾಖೆ ಹಾಗೂ ಸರಕಾರ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿದ್ದು, ಇದರ ವಿರುದ್ದ ನಮ್ಮ ಪ್ರತಿಭಟನೆ ಮುಂದುವರೆಯಲಿದೆ ಎಂದರು.
ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಹಿಂದೂ ನಾಯಕರಾದ ಶರಣ್ ಪಂಪ್ ವೆಲ್, ಭರತ್, ರಂಗನಾಥ್ ಕಿಣಿ ಹಾಗೂ ಇತರರು ಉಪಸ್ಥಿತರಿದ್ದರು.